ವಿಜಯನಗರ ಉಪಕದನ: ಕಾಂಗ್ರೆಸ್‌ಗೆ ಟ್ರಬಲ್‌ ಶೂಟರ್ ಡಿಕೆಶಿ ಇಲ್ಲದ ನೋವು ಕಾಡ್ತಿದೆಯಾ?

By Web DeskFirst Published Nov 21, 2019, 1:38 PM IST
Highlights

ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಇಲ್ಲದೇ ವಿಜಯನಗರ ಉಪಚುನಾವಣೆ ಎದುರಿಸುವುದು ಕಾಂಗ್ರೆಸ್ ಗೆ ಕಷ್ಟ ಕಷ್ಟ| ಗಡಿನಾಡಿನ ಉಪಚುನಾವಣೆಗಳಲ್ಲಿ ಡಿ. ಕೆ. ಶಿವಕುಮಾರ್ ಅವರು ಪಾರಮ್ಯ ಮೆರೆದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು|ಜನಾರ್ದನ ರೆಡ್ಡಿ  ಹಾಗೂ ಸಚಿವ ಶ್ರೀರಾಮುಲುರಂತಹ ಘಟನುಘಟಿ ನಾಯಕರಿಗೆ ಡಿ. ಕೆ. ಶಿವಕುಮಾರ್ ನಡುಕ ಹುಟ್ಟಿಸಿದ್ದರು|

ಬಳ್ಳಾರಿ(ನ.21): ವಿಜಯನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಟ್ರಬಲ್‌ ಶೂಟರ್ ಡಿ. ಕೆ. ಶಿವಕುಮಾರ್ ಅವರು  ಇಲ್ಲದ ನೋವು ಕಾಡುತ್ತಿದೆ. ಹೀಗಾಗಿ ಉಪಚುನಾವಣೆ ಕಣದಲ್ಲಿ ಡಿಕೆಶಿ ಇಲ್ಲದೇ ಇರೋದು ವಿಜಯನಗರದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಗೆ ವರವಾಗತ್ತಿದೆ ಎಂಬ ಮಾತುಗಳು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.  

ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಇಲ್ಲದೇ ವಿಜಯನಗರ ಉಪಚುನಾವಣೆ ಎದುರಿಸುವುದು ಕಾಂಗ್ರೆಸ್ ಗೆ ಕಷ್ಟ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಗಡಿನಾಡಿನ ಉಪಚುನಾವಣೆಗಳಲ್ಲಿ ಡಿ. ಕೆ. ಶಿವಕುಮಾರ್ ಅವರು ಪಾರಮ್ಯ ಮೆರೆದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಜನಾರ್ದನ ರೆಡ್ಡಿ  ಹಾಗೂ ಸಚಿವ ಶ್ರೀರಾಮುಲುರಂತಹ ಘಟನುಘಟಿ ನಾಯಕರಿಗೆ ಡಿ. ಕೆ. ಶಿವಕುಮಾರ್ ನಡುಕ ಹುಟ್ಟಿಸಿದ್ದರು ಎಂಬ ಮಾತುಗಳು ಜನರ ಬಾಯಲ್ಲಿ ಹರಿದಾಡುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳ್ಳಾರಿಯಲ್ಲಿ 2014ರಲ್ಲಿ ಶ್ರೀರಾಮುಲು 2014ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಕೆಶಿ ತಂತ್ರಗಾರಿಕೆಗೆ ಕಾಂಗ್ರೆಸ್ ಗೆದ್ದಿತ್ತು. 2018 ರಲ್ಲಿ ಶ್ರೀರಾಮುಲು ಬಳ್ಳಾರಿ ಲೋಕಸಭೆಗೆ ರಾಜೀನಾಮೆ ನೀಡಿದಾಗ ನಡೆದ ಉಪಚುನಾವಣೆಯಲ್ಲಿ ಉಗ್ರಪ್ಪರನ್ನ ಡಿಕೆಶಿ ಗೆಲ್ಲಿಸಿದ್ದರು. ಆದ್ರೇ, ಇದೀಗ‌ ಡಿ.ಕೆ. ಶಿವಕುಮಾರ್ ಮಾತ್ರ ಬಳ್ಳಾರಿಯಿಂದ ದೂರವಾಗಿದ್ದಾರೆ. ಚಿಕ್ಕಬಳ್ಳಾಪುರ, ಹೊಸಕೋಟೆ ಉಪಚುನಾವಣೆ ಬಗ್ಗೆ ರಣತಂತ್ರ ರೂಪಿಸುತ್ತಿದ್ದಾರೆ. 

ಈಗ ಡಿಕೆಶಿ ಬಳ್ಳಾರಿಯಿಂದ ದೂರವಾಗಿದ್ದಾರೆ ಕಾಂಗ್ರೆಸ್ ಗೆ ಸೂಕ್ತ ನಾಯಕತ್ವದ ಕೊರತೆ ಕಾಡ್ತಿದೆ. ವಿಜಯನಗರದಲ್ಲಿ ಆನಂದ್ ಸಿಂಗ್ ಕಟ್ಟಿಹಾಕಲು ಡಿಕೆಶಿ ಇದ್ದಿದ್ರೆ ಕಥೆನೆ ಬೇರೆ ಇತ್ತು ಎನ್ನುತ್ತಿರುವ ಜಿಲ್ಲಾ ಕಾಂಗ್ರೆಸ್ಸಿಗರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!