ತರೀಕೆರೆ ಪುರಸಭೆ: ಸ್ವಚ್ಛತಾ ಕಾರ್ಯಕ್ಕೆ ಇಂಟರ್‌ನ್ಯಾಷನಲ್‌ ಎಕ್ಸ್‌ಲೆನ್ಸ್‌ ಅವಾರ್ಡ್‌ಗೆ ಪಾತ್ರರಾದ ತಾಹೇರ ತಸ್ನೀಮ್‌

By Kannadaprabha News  |  First Published Jan 6, 2023, 8:39 AM IST

ಪುರಸಭೆಗೆ ಸ್ವಚ್ಛತಾ ಕಾರ್ಯದಲ್ಲಿ ಒಂದರ ನಂತರ ಮತ್ತೊಂದು ಪ್ರಶಸ್ತಿಗಳು ದೊರಕುತ್ತಿದ್ದು ಇದೀಗ ಸ್ವಚ್ಛತೆಯ ಮತ್ತೊಂದು ಭಾಗವಾಗಿ ಉತ್ತಮ ಪದ್ಧತಿಗಳ ಅಳವಡಿಕೆಯಲ್ಲಿ ತರೀಕೆರೆ ಪುರಸಭೆಗೆ ರಾಜ್ಯಕ್ಕೆ ಏಕಮಾತ್ರ ಪ್ರಶಸ್ತಿ ಪ್ರಕಟವಾಗಿದ್ದು ಪ್ರಶಸ್ತಿಯ ಶುಕ್ರದೆಸೆ ಪ್ರಾರಂಭವಾಗಿದೆ.


ಅನಂತ ನಾಡಿಗ್‌

ತರೀಕೆರೆ (ಜ.6) : ಪುರಸಭೆಗೆ ಸ್ವಚ್ಛತಾ ಕಾರ್ಯದಲ್ಲಿ ಒಂದರ ನಂತರ ಮತ್ತೊಂದು ಪ್ರಶಸ್ತಿಗಳು ದೊರಕುತ್ತಿದ್ದು ಇದೀಗ ಸ್ವಚ್ಛತೆಯ ಮತ್ತೊಂದು ಭಾಗವಾಗಿ ಉತ್ತಮ ಪದ್ಧತಿಗಳ ಅಳವಡಿಕೆಯಲ್ಲಿ ತರೀಕೆರೆ ಪುರಸಭೆಗೆ ರಾಜ್ಯಕ್ಕೆ ಏಕಮಾತ್ರ ಪ್ರಶಸ್ತಿ ಪ್ರಕಟವಾಗಿದ್ದು ಪ್ರಶಸ್ತಿಯ ಶುಕ್ರದೆಸೆ ಪ್ರಾರಂಭವಾಗಿದೆ. ತರೀಕೆರೆ ಪಟ್ಟಣದ ಪುರಸಭೆಯಲ್ಲಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳನ್ನು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸುವ ಮೂಲಕ ತರೀಕೆರೆ ಪುರಸಭೆ

Tap to resize

Latest Videos

ಪರಿಸರ ಅಭಿಯಂತರೆ ತಾಹೇರ ತಸ್ನೀಮ್‌(Taher Tasleem) ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವ ವಿದ್ಯಾನಿಲಯದಲ್ಲಿ ನಡೆದ 12ನೇ ಐಕಾನ್‌ ಎಸ್‌ಡಬ್ಲ್ಯೂಎಂ-ಸಿಇ 2022ರ ಸಮ್ಮೇಳನದಲ್ಲಿ ಸಮರ್ಥನೀಯ ತ್ಯಾಜ್ಯ ನಿರ್ವಹಣೆ ಮತ್ತು ಸಕ್ಯುಲರ್‌ ಎಕಾನಮಿ ಕುರಿತು ವಿಷಯ ಗೋಷ್ಠಿಗಳು ನಡೆಯಿತು. ವಿವಿಧ ರಾಜ್ಯಗಳಿಂದ ಸುಮಾರು 700ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Swachha Bharat Yojana: ತರೀಕೆರೆ ಪುರಸಭೆಗೆ ಬೆಸ್ಟ್‌ ಪ್ರಾಕ್ಟೀಸಸ್‌ ಅವಾರ್ಡ್‌ ಗರಿ!

ಏಕಮಾತ್ರ ಪ್ರಶಸಿ

ಕರ್ನಾಟಕ ರಾಜ್ಯದ ಸಿಮ್ಯಾಕ್‌ ಸಂಸ್ಥೆ ಯಿಂದ ಆಯ್ಕೆ ಮಾಡಲಾಗಿದ್ದ 11 ಮಂದಿ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದ ತರೀಕೆರೆ ಪುರಸಭೆ ಪರಿಸರ ಅಭಿಯಂತರರಾದ ತಾಹೇರ ತಸ್ಮೀಮ್‌ ಅವರು ಪ್ರಸ್ತುತ ಪಡಿಸಿದ ಪುರಸಭೆ ಅಳವಡಿಸಿಕೊಂಡಿರುವ ವಿವಿಧ ಬಗೆಯ ಸ್ವಚ್ಛತಾ ಕಾರ್ಯಕ್ರಮಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿ ಐಕಾನ್‌ ಎಸ್‌.ಡಬ್ಲ್ಯೂ ಎಂ.ಸಿ.ಇ 2022 ಎಕ್ಸಲೆನ್ಸ್‌ ಆವಾರ್ಡ್‌ ಫಾರ್‌ ಬೆಸ್ಟ್‌ ಪೇಪರ್‌ ಪ್ರಸೆಂಟೇಶನ್‌ ಪ್ರಶಸ್ತಿ ನೀಡಲಾಗಿದ್ದು ಕರ್ನಾಟಕದಲ್ಲಿ ತರೀಕೆರೆ ಪುರಸಭೆಗೆ ಏಕಮಾತ್ರ ಪ್ರಶಸ್ತಿ ದೊರಕಿದೆ.

ಅಳವಡಿಸಿಕೊಂಡಿರುವ ಕಾರ್ಯಕ್ರಮಗಳು

ಪಟ್ಟಣದಲ್ಲಿ ಉತ್ತಮ ಪರಿಸರ ಕಾಪಾಡಲು ಮತ್ತು ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಂಡು ಬರಲು ಪುರಸಭೆ ಅಳವಡಿಸಿಕೊಂಡಿರುವ ಕಾರ್ಯಕ್ರಮ ಗಳೆಂದರೆ ಘನತ್ಯಾಜ್ಯ ನಿರ್ವಹಣೆ ಮತ್ತು ಅದರ ಸಮರ್ಪಕ ವಿಲೇವಾರಿ, ಪಾರ್ಕ್ ಕಾಂಪೋಸ್ಟ್‌ ಹಾಗೂ ಪೈಪ್‌ ಕಾಂಪೋಸ್ಟ್‌, ಕೋಳಿ ಮತ್ತು ಮಾಂಸ ತ್ಯಾಜ್ಯ ವಿಲೇವಾರಿಗೆ ಅತ್ಯಾಧುನಿಕ ಪದ್ಧತಿ, ಶೌಚಾಲಯಗಳ ಸೌಂದರ್ಯೀಕರಣ ಹಾಗೂ ಆಧುನಿಕ ಸೌಲಭ್ಯಗಳ ಅಳವಡಿಕೆ, ಪ್ರತಿ ತಿಂಗಳ ಮೂರನೇ ಶನಿವಾರ ಸ್ವಚ್ಛತಾ ಸರ್ವೇಕ್ಷಣ್‌ ಅಭಿಯಾನದಡಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶ್ರಮದಾನ. ಅತೀ ಹೆಚ್ಚು ಕಸ ಬೀಳುವ ಪ್ರದೇಶಗಳನ್ನು ಗುರುತಿಸಿ ಕಪ್ಪು ಪ್ರದೇಶ ಎಂದು ಫಲಕಗಳನ್ನು ಹಾಕಿ ಸಂಘ ಸಂಸ್ಶೆಗಳ ಸಹಕಾರದಲ್ಲಿ ಕಸ ನಿರ್ವಹಣೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಕಂದ್ರ ಬಿಂದುವಿನಿಲ್ಲಿರುವ ಚಿಕ್ಕೆರೆ ಹಾಗೂ ಮಾನಸಿಕೆರೆಗಳ ಸ್ವಚ್ಛತಾ ಕಾರ್ಯಕ್ರಮಗಳು, ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಕಾರ್ಮಿಕರಿಗೆ ಸಾಂಸ್ಕೃತಿಕ\ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು, ಜನರನ್ನು ಸ್ವಚ್ಛತೆಯತ್ತ ಆಕರ್ಷಿಸಲು ಸೆಲ್ಫಿ ತಾಣಗಳ ಪುರಸಭೆ ನಿರ್ಮಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ದೇಶನದಂತೆ ಐಇಸಿ ಚಟುವಟಿಕೆಗಳ ಆಯೋಜನೆ, ಪ್ಲಾಸ್ಟಿಕ್‌ ನಿಷೇಧ ಇತ್ಯಾದಿ ಕಾರ್ಯಕ್ರಮಗಳನ್ನು ಸರ್ವರ ಸಹಕಾರದಿಂದ ಯಶಸ್ವಿಯಾಗಿ ತರೀಕೆರೆ ಪುರಸಭೆ ನಿರ್ವಹಿಸುತ್ತಾ ಬಂದಿದೆ.

ಪ್ರಶಂಸೆ:

ತರೀಕೆರೆ ಪುರಸಭೆಯ ಪರಿಸರ ಅಭಿಯಂತರಾದ ತಾಹಿರಾ ತಸ್ಮೀಮ್‌ ಅವರು ತರೀಕೆರೆ ಪುರಸಭೆಯಲ್ಲಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳ ವಿವರಗಳನ್ನು ಅಂತರಾಷ್ಟ್ರೀಯ ಮಟ್ಟದ ಐಸಿಒಎನ್‌ ಎಸ್‌ಡಬ್ಲ್ಯೂಎಂ-ಸಿ.ಇ.2022 ಸಮ್ಮೇಳನದಲ್ಲಿ ಪ್ರಸ್ತುತಪಡಿಸಿ ಕರ್ನಾಟಕ ರಾಜ್ಯಕ್ಕೆ ಏಕಮಾತ್ರ ಪ್ರಶಸ್ತಿ ಗಳಿಸಿರುವುದನ್ನು ಬೆಂಗಳೂರು ಪೌರಾಡಳಿತ ನಿರ್ದೇ ಶನಾಲಯ ನಿರ್ದೇಶಕರು ಪ್ರಶಂಸಿಸಿ ಅವರ ಉತ್ತಮ ಕಾರ್ಯ ನಿರ್ವಹಣೆ ಮುಂದುವರೆಯಲಿ ಎಂದು ಪತ್ರ ಮುಖೇನ ಅಭಿನಂದಿಸಿದ್ದಾರೆ.

ಪಟ್ಟಣದಲ್ಲಿ ಸುಂದರ ಪರಿಸರ, ಶುಭ್ರತೆಗೆ ಕನ್ನಡಿ ಹಿಡಿದ ಶೌಚಾಲಯಗಳು, ಸ್ವಚ್ಛತೆಯ ಪ್ರಸ್ತುತೆಯನ್ನು ಸಾರಿ ಹೇಳುವ ಉದ್ಯಾನವನಗಳು, ನಮ್ಮ ತರೀಕೆರೆ ನಮ್ಮ ಹೆಮ್ಮೆ ನಾಮಫಲಕಗಳು ಸಾರ್ವಜನಿಕರಲ್ಲೂ ಸ್ವಚ್ಛತೆಯ ಜಾಗೃತಿ ಮತ್ತು ಅದರ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, ಪುರಸಭೆ ಪೌರಕಾರ್ಮಿಕರು ಪಟ್ಟಣದಾದ್ಯಂತ ಸ್ವಚ್ಛತೆ, ಉತ್ತಮ ಪರಿಸರ, ಕಾಪಾಡಿ ಸಾರ್ವಜನಿಕರಲ್ಲಿ ಜಾಗೃತಿ ಉಂಟುಮಾಡುವುದರಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ,

ಈ ಮುಂಚೆ ಸಾರ್ವಜನಿಕ ಶೌಚಾಲಯವನ್ನು ಬಳಸುವುದೆಂದರೆ ದೊಡ್ಡ ಹಿಂಸೆಯಾಗಿತ್ತು, ಪುರಸಭೆ ಕಾರ್ಯತತ್ಪರತೆಯಿಂದ ಪಟ್ಟಣದಲ್ಲಿದ್ದ ಶೌಚಾಲಯಗಳು ಸಾಕಷ್ಟುನೀರು ಬೆಳಕು ಮಿಂಚುವ ನೆಲ ಹಾಸಿಗೆಯಿಂದ ಕೂಡಿದ್ದು ಶೌಚಾಲಯಗಳ ಹೊರಾವರಣಗಳು ಸುಂದರ ಕಲಾತ್ಮಕ ಚಿತ್ರಗಳಿಂದ ಕಂಗೊಳಿಸುತ್ತಿದೆ.

ಇಡೀ ಊರಿನ ಸ್ವಚ್ಛತೆ, ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಸಣ್ಣ ಪುಟ್ಟಗಲ್ಲಿಗಳು, ಚರಂಡಿ, ರಾಜಾ ಕಾಲುವೆ, ಬಸ್‌ ನಿಲ್ದಾಣ, ಇತ್ಯಾದಿ ಒಟ್ಟಾರ ಜನಸಂದಣಿ ಸ್ಥಳಗಳು ಸದಾ ಸ್ವಚ್ಛತೆಯಿಂದ ಇದ್ದರೆ ಮಾತ್ರ ಇಡೀ ಊರಿನಲ್ಲಿ ಉತ್ತಮ ಪರಿಸರ ಕಾಪಾಡಬಹುದು, ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟೆಚ್ಚರ ವಹಿಸಬಹುದು, ತನ್ಮೂಲಕ ಸಾರ್ವಕಾಲಿಕ ಆರೋಗ್ಯವನ್ನು ಕಾಪಾಡಬಹುದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ತರೀಕೆರೆ ಪುರಸಭೆ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡು ರಾಜ್ಯದಲ್ಲೇ ಏಕಮಾತ್ರ ಪ್ರಶಸ್ತಿ ಪಡೆದಿರುವುದು ಎಲ್ಲರಿಗೂ ಸಂತೋಷ ತಂದಿದೆ. ಇನ್ನೂ ಹೆಚ್ಚು ಪ್ರಶಸ್ತಿಗಳು ತರೀಕೆರೆ ಪುರಸಭೆಗೆ ದೊರಕುವಂತಾಗಲಿ ಎಂದು ಶಾಸಕ ಡಿ.ಎಸ್‌. ಸುರೇಶ್‌ ಅಭಿನಂದಿಸಿದ್ದಾರೆ.

ಕಾಫಿನಾಡಲ್ಲಿ ಮಳೆಯ ಅಬ್ಬರಕ್ಕೆ ಸಾಲು-ಸಾಲು ಮನೆಗಳು ಕುಸಿತ

ಸ್ವಚ್ಛತಾ ಕಾರ್ಯದಲ್ಲಿ ಉತ್ತಮ ಪದ್ಧತಿಗಳನ್ನು ಅಳವಡಿಕೆಯಲ್ಲಿ ತರೀಕೆರೆ ಪುರಸಭೆಗೆ ಪ್ರಶಸ್ತಿ ದೊರಕಿರುವುದು ಸಂತೋಷ ತಂದಿದೆ ಎಂದು ಪುರಸಭೆ ಅಧ್ಯಕ್ಷೆ ಕಮಲ ರಾಜೇಂದ್ರ ತಿಳಸಿದ್ದಾರೆ.

ಪುರಸಭೆ ಅಡಳಿತ ವರ್ಗ ಹಾಗೂ ಎಲ್ಲಾ ಸಿಬ್ಬಂದಿ ಪರವಾಗಿ ಅಭಿನಂದಿಸುತ್ತೇವೆ, ಇನ್ನೂ ಉತ್ತಮವಾಗಿ ಪಟ್ಟಣದ ಅಭಿವೃದ್ಧಿ ಕಡೆಗೆ ಶ್ರಮಿಸಲಿ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಳಿಯೂರು ಕುಮಾರ್‌ ಹೇಳಿದ್ದಾರೆ.

click me!