ದಸರಾ ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ನೀಡುವಲ್ಲಿ ಅನ್ಯಾಯ - ಕಲಾವಿದರ ಆರೋಪ

By Kannadaprabha News  |  First Published Oct 16, 2022, 4:50 AM IST

ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಪ್ರಶಸ್ತಿ ನೀಡುಲ್ಲಿ ಅನ್ಯಾಯವಾಗಿದೆ ಎಂದು ಮೈಸೂರು ದಸರಾ ಸ್ತಬ್ಧಚಿತ್ರ ಕಲಾವಿದರಾದ ಎಚ್‌. ಮಹದೇವ, ಡಿ.ಕೆ. ರಂಗನಾಥ್‌ ಆರೋಪಿಸಿದ್ದಾರೆ.


 ಮೈಸೂರು (ಅ.16):  ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಪ್ರಶಸ್ತಿ ನೀಡುಲ್ಲಿ ಅನ್ಯಾಯವಾಗಿದೆ ಎಂದು ಮೈಸೂರು ದಸರಾ ಸ್ತಬ್ಧಚಿತ್ರ ಕಲಾವಿದರಾದ ಎಚ್‌. ಮಹದೇವ, ಡಿ.ಕೆ. ರಂಗನಾಥ್‌ ಆರೋಪಿಸಿದ್ದಾರೆ.

ನಾವು (Chamarajanagar ) ಜಿಪಂ ಮತ್ತು (Bagalakote) ಜಿಪಂ ವತಿಯಿಂದ ಸ್ತಬ್ಧಚಿತ್ರಗಳನ್ನು ನಿರ್ಮಿಸಿದ್ದು, ನಮ್ಮ ಸ್ತಬ್ಧಚಿತ್ರವು ಅತ್ಯುತ್ತಮವಾಗಿ ಆಕರ್ಷಣೀಯವಾಗಿ ಅಪಾರ ಜನ ಮೆಚ್ಚುಗೆ ಪಡೆದಿದೆ. ಆದರೆ, ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ನಮ್ಮ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿ ಅವಮಾನ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

Latest Videos

undefined

ಇದರ ಬಗ್ಗೆ ತೀರ್ಪುಗಾರರಿಗೆ ಕರೆ ಮಾಡಿ ಕೇಳಿದರೆ, ನಾವು ನಿಮ್ಮ ಸ್ತಬ್ಧಚಿತ್ರಗಳಿಗೆ ಅತೀ ಹೆಚ್ಚು ಅಂಕಗಳನ್ನು ಕೊಟ್ಟಿದ್ದು, ಸ್ತಬ್ಧಚಿತ್ರ ಉಪ ಸಮಿತಿಯವರು ಪ್ರಶಸ್ತಿ ಪ್ರಕಟಿಸುವಲ್ಲಿ ಗೊಂದಲ ಮಾಡಿದ್ದಾರೆ ಎಂದಿದ್ದಾರೆ. ಉಪ ಸಮಿತಿಯವರನ್ನು ಕೇಳಿದರೇ ತೀರ್ಪುಗಾರರು ಕೊಟ್ಟಿರುವ ನಿರ್ಧಾರವನ್ನೇ ಪ್ರಕಟಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದಾಗ ಸರಿಪಡಿಸುವುದಾಗಿ ಹೇಳಿದ್ದರು. ಉಪ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಜಿಪಂ ಮುಖ್ಯ ಯೋಜನಾಧಿಕಾರಿ ನಮ್ಮನ್ನು ಕಚೇರಿಗೆ ಕರೆಸಿ, ಪ್ರಶಸ್ತಿ ಪ್ರಕಟಣೆ ವೇಳೆ ಗೊಂದಲವಾಗಿದ್ದು, ನಿಮ್ಮ ಸ್ತಬ್ಧಚಿತ್ರಗಳಿಗೆ ವಿಶೇಷ ಜನ ಮೆಚ್ಚುಗೆಯ ಪ್ರಶಸ್ತಿ ನೀಡುವುದಾಗಿ ಹೇಳಿದ್ದರು. ಆದರೆ, ಈಗ ಪ್ರಶಸ್ತಿ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟಸಚಿವರು, ಅಧಿಕಾರಿಗಳು ಎಲ್ಲಾ ಸ್ತಬ್ಧಚಿತ್ರಗಳ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಮತ್ತೊಮ್ಮೆ ವೀಕ್ಷಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಕಾನೂನು ಮೊರೆ ಹೋಗುವುದಾಗಿ ಅವರು ಎಚ್ಚರಿಸಿದ್ದಾರೆ.

ಅಧ್ವಾನ ದಸರಾ

ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಅದ್ಧೂರಿಯಾಗಿ ಆಗಲಿಲ್ಲ. ಬದಲಿಗೆ ಅಧ್ವಾನವಾಗಿತ್ತು. ಜನರೇ ಬಂದು ಯಶಸ್ವಿಗೊಳಿಸಿದ್ದಾರೆಯೇ ಹೊರತು, ಕಾರ್ಯಕ್ರಮಗಳಿಂದ ದಸರಾ ಯಶಸ್ವಿಯಾಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದಸರಾ (Dasara)  ಮಹೋತ್ಸವ ಸಂಬಂಧ ಆತ್ಮಾವಲೋಕ ನಡೆಯಬೇಕು, ಈಗ ಆಗಿರುವ ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕೋವಿಡ್‌ ಕಾರಣದಿಂದ 2 ವರ್ಷದಿಂದ  ಇರಲಿಲ್ಲ. ಹಾಗಾಗಿ ಜನ ಬಂದಿದ್ದಾರೆ. ದಸರಾ ಜನರಿಂದ ಯಶಸ್ವಿಯಾಗಿದೆ ಎಂದರು.

ಮುಖ್ಯಮಂತ್ರಿಗಳು (Karnataka CM) ದಸರಾಕ್ಕೆ 35 ಕೋಟಿ ನೀಡುವುದಾಗಿ ಹೇಳಿದ್ದರು. ಆದರೆ ನಂತರ ದಿನಗಳಲ್ಲಿ ಅನುದಾನ ಕಡಿತ, ಅನುದಾನ ಬಿಡುಗಡೆ ಆಗಿಲ್ಲ ಎಂಬ ಮಾತು ಕೇಳಿಬಂತು. ದಸರಾ ಎಂಬುದು ಸಂಪ್ರದಾಯ, ಸಾಂಸ್ಕೃತಿಕ ಉತ್ಸವ ಆಗಬೇಕಿತ್ತು. ಗ್ರಾಮೀಣ (Rural) ದಸರಾ ಆಚರಣೆಗೆ 3 ಲಕ್ಷ ಕೊಡುವುದಾಗಿ ಆರಂಭದಲ್ಲಿ ಹೇಳಿ, ನಂತರ ಕೇವಲ 1 ಲಕ್ಷ ನೀಡಲಾಯಿತು. ಕ್ರೀಡೆಯಲ್ಲಿ ಪಾಲ್ಗೊಂಡವರಲ್ಲಿ ಉತ್ಸಾಹವೇ ಇರಲಿಲ್ಲ. ಅನುದಾನ ಕೊರತೆ ಕಾರಣಕ್ಕೆ ಮ್ಯಾರಥಾನ್‌ ರದ್ದುಪಡಿಸಿದ್ದಾಗಿ ಅವರು ತಿಳಿಸಿದರು.

ಸಾಹಿತ್ಯ ಸಮ್ಮೇಳನವು ಸಾಹಿತ್ಯದ ಉತ್ಸವವಾಗಬೇಕಿತ್ತು. ಆದರೆ ಸತ್ತವರನ್ನು ಆಹ್ವಾನಿಸಿ, ಬದುಕಿದ್ದವರನ್ನು ಬಿಡಲಾಗಿತ್ತು. ನಾನೂ ಸಾಹಿತ್ಯ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆಯಾದವನು. ನನ್ನ ಕೇಳಿದರೆ ಹೇಳುತ್ತಿದ್ದೆ. ದಸರಾ ಕವಿಗೋಷ್ಠಿಯಿಂದ ಅವಮಾನವಾಯಿತು ಎಂದರು.

ಯುವ ದಸರಾ ಕಾರ್ಯಕ್ರಮಕ್ಕೆ ಸ್ಥಳೀಯ ಕಲಾವಿದರಾದ ದರ್ಶನ್‌, ವಿಶ್ವದಲ್ಲೇ ಖ್ಯಾತಿಪಡೆದ ಕೆಜಿಎಫ್‌ನ ಯಶ್‌ ಅವರನ್ನು ಕರೆಸಬಹುದಿತ್ತು. ಅವರನ್ನೆಲ್ಲಾ ನಿರ್ಲಕ್ಷ್ಯಿಸಿ ಬೇರೆ ಬೇರೆಯವರಿಗೆ ಲಕ್ಷಾಂತರ ಖರ್ಚು ಮಾಡಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆರೆದುಕೊಂಡಿಲ್ಲ. ಸದ್ಯ ಚಾಮುಂಡೇಶ್ವರಿ ಕೃಪೆಯಿಂದ ಏನೂ ಆಗಿಲ್ಲ. ಜಂಬೂಸವಾರಿ ಹೋಗುತ್ತಿದ್ದರೆ ಆನೆಯೇ ಕಾಣುತ್ತಿರಲಿಲ್ಲ. ಅಷ್ಟುಜನ ತುಂಬಿದ್ದರು. ಏನಾದರೂ ಅನಾಹುತವಾಗಿದ್ದರೆ ಏನು ಮಾಡಬೇಕಿತ್ತು. ದಸರಾಕ್ಕೆ ಕಳಂಕ ಬರುತ್ತಿತ್ತು ಎಂದು ಅವರು ಕಿಡಿಕಾರಿದರು.

ಜಿಲ್ಲಾ ಮಂತ್ರಿಗಳಿಗೆ ಅನುಭವದ ಕೊರತೆ ಇದೆ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ದುರಾದೃಷ್ಟವಶಾತ್‌ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಬೇರೆಯವರೇ ಉಸ್ತುವಾರಿ ಸಚಿವರಾಗುತ್ತಾರೆ. ರಾಮದಾಸ್‌ಗೆ ವಹಿಸಬಹುದಿತ್ತು. ಇಲ್ಲವೇ ನಾನು, ಜಿ.ಟಿ. ದೇವೇಗೌಡರು, ತನ್ವೀರ್‌ಸೇಠ್‌ ಮೊದಲಾದವರು ಇದ್ದೆವು. ನಮ್ಮ ಸಲಹೆ ಕೇಳಬಹುದಿತ್ತು. ಬರಿ ಲೆಕ್ಕ ಕೊಟ್ಟರೆ ಏನೂ ಪ್ರಯೋಜನವಿಲ್ಲ. ತಪ್ಪುಗಳ ಪಟ್ಟಿಆಗಬೇಕು. ದಸರಾ ಸಂಬಂಧ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

click me!