ಇ- ಮಾಧ್ಯಮಗಳ ಮೂಲಕ ಮಾಹಿತಿ ಮಹಾಪೂರ

By Kannadaprabha News  |  First Published Oct 14, 2023, 8:45 AM IST

ಇಂದಿನ ಜಗತ್ತಿನಲ್ಲಿ ಮಾಹಿತಿ ಮಹಾಪೂರವೇ ಇ-ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಅವರು ಕಾಲಕ್ಕೆ ತಕ್ಕಂತೆ ಜ್ಞಾನದ ನವೀಕರಣ ಮಾಡಿಕೊಂಡರೆ ಸತತ ಪರಿವರ್ತನೆಗೊಳ್ಳುತ್ತಿರುವ ಸಮಾಜದಲ್ಲಿ ಛಾಪು ಮೂಡಿಸಿ ತಮ್ಮ ಸ್ಥಾನ ಪಡೆದುಕೊಳ್ಳಬಹುದೆಂದು ಬೆಂಗಳೂರಿನ ವಿಷನ್ ಇಂಡಿಯಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರು ಮತ್ತು ಮ್ಯಾನೇಜ್‌ಮೆಂಟ್ ತಜ್ಞ ಕಿಶೋರ್ ಜಾಗೀರ್‌ದಾರ್‌ ನುಡಿದರು.


  ತುಮಕೂರು :  ಇಂದಿನ ಜಗತ್ತಿನಲ್ಲಿ ಮಾಹಿತಿ ಮಹಾಪೂರವೇ ಇ-ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಅವರು ಕಾಲಕ್ಕೆ ತಕ್ಕಂತೆ ಜ್ಞಾನದ ನವೀಕರಣ ಮಾಡಿಕೊಂಡರೆ ಸತತ ಪರಿವರ್ತನೆಗೊಳ್ಳುತ್ತಿರುವ ಸಮಾಜದಲ್ಲಿ ಛಾಪು ಮೂಡಿಸಿ ತಮ್ಮ ಸ್ಥಾನ ಪಡೆದುಕೊಳ್ಳಬಹುದೆಂದು ಬೆಂಗಳೂರಿನ ವಿಷನ್ ಇಂಡಿಯಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರು ಮತ್ತು ಮ್ಯಾನೇಜ್‌ಮೆಂಟ್ ತಜ್ಞ ಕಿಶೋರ್ ಜಾಗೀರ್‌ದಾರ್‌ ನುಡಿದರು.

ಶ್ರೀದೇವಿ ಕಾಲೇಜಿನ ಪ್ರಥಮ ವರ್ಷದ ಬಿ.ಇ.ತರಗತಿಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

Tap to resize

Latest Videos

undefined

ಗಳು ತಮಗೆ ದೊರಕುವ ಅನುಭವದ ಮೂಸೆಯಲ್ಲಿ ನಿರಂತರ ಕೌಶಲ್ಯಗಳಿಗೆ ತಮ್ಮನ್ನು ಒಡ್ಡಿಕೊಂಡು ಕಾಪೋರೇಟ್ ಜಗತ್ತಿನಲ್ಲಿ ಬಲವಾದ ಹೆಜ್ಜೆಯೂರಬೇಕು ಎಂದರು.

ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್‌ ಮಾತನಾಡಿ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ತರಹದ ಯೋಜನೆಗಳಿಂದ ಜನಗಳ ನಿತ್ಯ ಜೀವನದ ಚಹರೆಯೇ ಬದಲಾಗಿದ್ದು, ಜನಗಳು ತಮ್ಮಲ್ಲಿ ನಾಣ್ಯಗಳ ಚಲಾವಣೆ ಮತ್ತು ಹಣ ವಿನಿಮಯದಲ್ಲಿ ಕ್ರಾಂತಿಕಾರಕ ಬದಲಾವಣೆ ಕಂಡುಕೊಳ್ಳುವುದರ ಮೂಲಕ ಹಿಂದಿನ ವರ್ಷಗಳಲ್ಲಿ ಭಾರತದಂತಹ ದೇಶದಲ್ಲಿ ಅಸಾಧ್ಯವೆನಿಸಿದಂತಹ ಬದಲಾವಣೆಗಳು ಸುಲಭ ಸಾಧ್ಯ ಎಂದರು.

ಮೂಲಭೂತ ಅರಿವು ಮತ್ತು ಸಿದ್ಧಾಂತಗಳ ಕಡೆಗೆ ವಿಜ್ಞಾನ ಗಮನಹರಿಸಿದ್ದರೆ ಅವುಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳ ಮೂಲಕ ಆನ್ವಯಿಕ ತಂತ್ರಜ್ಞಾನವನ್ನು ಸಮಾಜದ ಒಳಿತಿಗೆ ದಾರಿ ಮಾಡುವುದೇ ನಿಜವಾದ ಇಂಜಿನಿಯರಿಂಗ್ ಎಂದರು.

ವಿದ್ಯಾರ್ಥಿಗಳಿಗೆ ಶ್ರೀದೇವಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಓದಿನ ಪರಿಸರ ಮತ್ತು ಜ್ಞಾನಾರ್ಜನೆಗೆ ಸುಸಜ್ಜಿತ ಸೌಕರ್ಯ ಒದಗಿಸಿ ಉತ್ತಮ ಸಾಧನೆಗೆ ಮಾರ್ಗದರ್ಶನ ನೀಡುವುದೇ ಗುರಿಯೆಂದು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು.

ಪ್ರಾಂಶುಪಾಲ ಡಾ.ನರೇಂದ್ರವಿಶ್ವನಾಥ್‌, ಅವಿರತ ಶ್ರದ್ಧೆ ಮತ್ತು ಉತ್ತಮ ಫಲಿತಾಂಶ ಮತ್ತು ಸಮರ್ಪಕ ಉದ್ಯೋಗಗಳಿಕೆ ವಿದ್ಯಾರ್ಥಿಗಳ ಗುರಿಯಾಗಲೆಂದು ಶುಭ ಹಾರೈಸಿ ಸ್ವಾಗತಿಸಿದರು. ಸೌಜನ್ಯ ಮತ್ತು ವರ್ಷ ಪ್ರಾರ್ಥಿಸಿ, ಡಾ.ಮಂಜುಳಾ ನಿರೂಪಿಸಿ, ಡಾ.ಎನ್.ಚಂದ್ರಶೇಖರ್ ವಂದಿಸಿದರು.

ವಿಟಿಯು ಪರೀಕ್ಷೆಗಳಲ್ಲಿ ಎಸ್.ಜಿ.ಪಿ.ಎ. 9.0 ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 6 ಸಾವಿರ ರು.ಗಳ ಪ್ರತಿಭಾ ಪುರಸ್ಕಾರ ಸಾಧನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ವಿಭಾಗ ಮುಖ್ಯಸ್ಥ ಡಾ.ಸಿ.ನಾಗರಾಜ್,ಡಾ.ಎನ್.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಡಾ.ಜಿ.ಮಹೇಶ್‌ಕುಮಾರ್, ಡಾ.ಬಸವೇಶ್, ಡಾ.ಸುಹಾಸ್, ಡಾ.ಚರಣ್, ಡಾ.ಕಿಶೋರ್‌ಕುಮಾರ್, ಪ್ರೊ.ಕೆ.ಪಿ.ಚಂದ್ರಯ್ಯ, ಡಾ.ಪಿ.ಜೆ.ಸದಾಶಿವಯ್ಯ, ಪ್ರೊ.ಐಜಾಜ್ ಅಹಮದ್ ಷರೀಫ್, ಪ್ರೊ.ಜಿ.ಹೆಚ್.ರವಿಕುಮಾರ್, ಪ್ರೊ.ಗಿರೀಶ್ ಇದ್ದರು.

click me!