* ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದ ಘಟನೆ
* ಹಳದಿ ಬಣ್ಣದ ಚೀಲದಲ್ಲಿ ಮಗು ಪತ್ತೆ
* ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಶಿರಸಿ(ಆ.19): ಹುಟ್ಟಿದ ಮಗು ಅಂಗವಿಕಲ ಎಂಬ ಕಾರಣಕ್ಕೆ ಹೆತ್ತವರು ರಸ್ತೆ ಪಕ್ಕದ ಬಸ್ ಸ್ಟಾಪ್‌ನಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಶಿರಸಿ- ಹುಬ್ಬಳ್ಳಿ ರಸ್ತೆ ಖಾನ್ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಈ ಗಂಡು ಮಗು ಜನಿಸಿ ಎರಡು ಅಥವಾ ಮೂರು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯ ಕೂಗಲಕುಳಿ ಗ್ರಾಮದ ನಿವಾಸಿ ಮಾದೇವಿ ಅರ್ಜುನ್ ಬೋವಿ ಎಂಬವರು ಈ ಮಾರ್ಗದಲ್ಲಿ ಸಾಗುತ್ತಿದ್ದ ವೇಳೆ ಬಸ್ ಸ್ಟಾಪ್ ಒಳಗಡೆ ಮಗು ಅಳುವ ಶಬ್ದ ಕೇಳಿಸಿದೆ. ಬಸ್ ನಿಲ್ದಾಣದ ಒಳಗಡೆ ನೋಡಿದಾಗ ಹಳದಿ ಬಣ್ಣದ ಚೀಲವೊಂದು ಕಾಣಿಸಿದೆ. ಚೀಲ ಬಿಚ್ಚಿ ನೋಡಿದಾಗ ಜೀವಂತ ಮಗು ಇರುವುದನ್ನು ಕಂಡು ಮಹಿಳೆ ಹೌಹಾರಿದ್ದಾರೆ.
undefined
ಹುಬ್ಬಳ್ಳಿ: ಒಂಟಿ ಕಾಲಿನೊಂದಿಗೆ ಜನಿಸಿದ ಶಿಶು ಸಾವು
ತಕ್ಷಣ ಮಾದೇವಿ ಆ ಮಗುವನ್ನು ಎತ್ತಿಕೊಂಡು ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಮಗು ಆರೋಗ್ಯವಾಗಿದ್ದು, ಎರಡು- ಮೂರು ದಿವಸದ್ದು ಇರುತ್ತದೆ ಎಂದು ಅಂದಾಜಿಸಿದ್ದಾರೆ. ಸಹಾಯ ಟ್ರಸ್ವ್‌ನ ಸತೀಶ ಶೆಟ್ಟಿ ಇದ್ದರು. ಈ ಕುರಿತಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.