ಕೋಲಾರದ ಕ್ಲಾಕ್ ಟವರ್‌ನಲ್ಲಿ ಹಸಿರು ಬಣ್ಣದ ಬಾವುಟವನ್ನು ಇಳಿಸಿ ಭಾರತದ ಧ್ವಜಾ ಹಾರಿಸಿ ಸುಖಾಸುಮ್ಮನೆ ಶಾಂತಿ ಕದಡುವ ಕೆಲಸ ಮಾಡಲಾಗಿದೆ ಮುನಿಸ್ವಾಮಿ ಒವ೯ ಸಾಂದಬಿ೯ಕಾ ಶಿಶು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದಾರೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ.
ಕೋಲಾರ (ಮಾ.27): ಕೋಲಾರದ ಕ್ಲಾಕ್ ಟವರ್‌ನಲ್ಲಿ (Clock Tower) ಹಸಿರು ಬಣ್ಣದ ಬಾವುಟವನ್ನು ಇಳಿಸಿ ಭಾರತದ ಧ್ವಜಾ ಹಾರಿಸಿ ಸುಖಾಸುಮ್ಮನೆ ಶಾಂತಿ ಕದಡುವ ಕೆಲಸ ಮಾಡಲಾಗಿದೆ ಮುನಿಸ್ವಾಮಿ (Muniswamy) ಒವ೯ ಸಾಂದಬಿ೯ಕಾ ಶಿಶು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅಧಿವೇಶನದಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನು ಇದೇ ವಿಚಾರವಾಗಿ ಇದೇ ಮೊದಲ ಬಾರಿಗೆ ರಮೇಶ್ ಕುಮಾರ್ ವಿರುದ್ದ ಪ್ರತಿಕ್ರಿಯೆ ನೀಡಿರುವ ಸಂಸದ ಮುನಿಸ್ವಾಮಿ ಹೌದು! ನಾನು ಕ್ಲಾಕ್ ಟವರ್‌ನಲ್ಲಿ ಭಾರತದ ಧ್ವಜ ಹಾರಿಸಿದ್ದೇನೆ. ರಮೇಶ್ ಕುಮಾರ್‌ಗೆ ಅದು ದೇಶದ್ರೋಹದ ಕೆಲಸ ಅಂತ ಏನಾದ್ರು ಅನಿಸಿದ್ರೆ ಇನ್ಮುಂದೆ ನಾನು ಪ್ರತಿ ದಿವಸ ದೇಶದ್ರೋಹ ಕೆಲಸ ಮಾಡ್ತೇನೆ.
undefined
ಅತ್ಯಾಚಾರವನ್ನು ಅನುಭವಿಸಬೇಕು ಎಂದು ಸೆಷನ್‌ನಲ್ಲಿ ಅವರು ಹೇಳಿರೋದನ್ನು ನಾನು ಗಮನಿಸಿದ್ದೇನೆ, ಆಗಲೇ ಅವರ ಮನಸ್ಥಿತಿ ಏನೂ ಅಂತ ತಿಳಿದುಕೊಂಡಿದ್ದೇನೆ. ಇಲ್ಲಿಯಾರು ಸಾಂದರ್ಭಿಕಾ ಶಿಶು ಎಂದು ನನಗೂ ತಿಳಿದಿದೆ. ಅವರಷ್ಟು ದೊಡ್ಡವರು ನಾನಲ್ಲ, ಅವರು ಸಂವಿಧಾನದ ಪ್ರತಿ ಪೇಜ್‌ನ ಓದಿರುವವರು ಎಂದು ಸಂಸದ ಮುನಿಸ್ವಾಮಿ ವ್ಯಂಗ್ಯವಾಡಿ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡ್ತೇನೆ ಎಂದು ಸವಾಲು ಹಾಕಿದರು. ಹರಿಸು ಬಣ್ಣದ ಬಾವುಟವನ್ನು ಕೆಳಗೆ ಇಳಿಸುತ್ತಿರುವ ಜಿಲ್ಲಾಡಳಿತ..ಎಲ್ಲೆಲ್ಲೂ ಪೊಲೀಸರ ಕಣ್ಗಾವಲು. ತಮ್ಮ ಕೋಮಿನ ಬಾವುಟವನ್ನು ಇಳಿಸುತ್ತಿರೋದನ್ನೂ ವೀಕ್ಷಣೆ ಮಾಡ್ತಿರುವ ಯುವಕರು,ಮುಖಂಡರು.
ಇವತ್ತಿನ ಈ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ: ಎಚ್.ಡಿ.ಕುಮಾರಸ್ವಾಮಿ
ಅಂದಹಾಗೆ ಈ ಎಲ್ಲಾ ಘಟನೆಗಳು ನಡೆದಿದ್ದು ಇದೇ ತಿಂಗಳ 19ನೇ ತಾರೀಖಿನಂದು ಕೋಲಾರದ ನಗರದ ಕ್ಲಾಕ್ ಟವರ್ ಪ್ರದೇಶದಲ್ಲಿ. ಕಳೆದ 75 ವಷ೯ಗಳಿಂದ ಇದೇ ಕ್ಲಾಕ್ ಟವರ್ ನ ಮೇಲೆ ಒಂದೂ ಕೋಮಿನ ಗುರುತಾಗಿರುವ ಹಸಿರು ಬಣ್ಣದ ಬಾವುಟ ಹಾರಾಡುತ್ತಿತ್ತು, ಆದರೆ ಇದು ಸಕಾ೯ರಿ ಜಾಗದಲ್ಲಿರುವ ಪ್ರದೇಶ ಆಗಿರೋದ್ರಿಂದ ಬಾವುಟವನ್ನು ತೆರವು ಮಾಡಿ ಭಾರತದ ತ್ರಿವಣ೯ ಧ್ವಜ ಹಾರಿಸಬೇಕು ಎಂದು ಸಂಸದ ಮುನಿಸ್ವಾಮಿ ಪಟ್ಟು ಹಿಡಿದ ಬಳಿಕ ಜಿಲ್ಲಾಡಳಿತವೇ ಭಾರಿ ಭದ್ರತೆಯೊಂದಿಗೆ ಅಂಜುಮನ್ ಮುಖಂಡರ ಸಮ್ಮುಖದಲ್ಲೇ ಹಸಿರು ಬಣ್ಣದ ಭಾವುಟ ಇಳಿಸಿ,ಭಾರತದ ತ್ರಿವಣ೯ ಹಾರಿಸುವ ಮೂಲಕ ವಿವಾದಕ್ಕೆ ತೆರೆ ಎಳೆದರು.
ಆದರೆ ಇದರ ಲಾಭವನ್ನು ಪಡೆದುಕೊಳ್ತಿರುವ ರಾಜಕೀಯ ಪಕ್ಷಗಳು ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ಆಗಾಗ ತುಪ್ಪ ಸುರಿಯುವ ಕೆಲಸ ಮಾಡ್ತಿದ್ದಾರೆ.ಇನ್ನು ಇಂದು ಸಂಸದ ತೇಜಸ್ವಿ ಸೂಯ೯ ರೆವಿಧಾನಸೌದದಿಂದ ಕೋಲಾರದ ವರೆಗೂ ಸೈಕಲ್ ಜಾತ ಮಾಡುವ ಮೂಲಕ ಭಾರತದ ಧ್ವಜದ ಪ್ರದಶ೯ನ ಮಾಡಿದ್ರು.ಕ್ಲಾಕ್ ಟವರ್ ವಿವಾದಿತ ಸ್ಥಳ ಆಗಿರೋದ್ರಿಂದ ಅಲ್ಲಿಗೆ ತೇಜಸ್ವಿ ಸೂಯ೯ ಅವರ ಸೈಕಲ್ ಜಾತಾ ಗೆ ಪೊಲೀಸರು ನಿರ್ಬಂಧ ಹಾಕುವ ಮೂಲಕ ಯಾವುದೇ ಗಲಭೆಗೆ ಕಾರಣವಾಗದೆ ರೀತಿ ಕ್ರಮವಹಿಸಿದರು.
ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ? : ತೇಜಸ್ವಿ ಸೂರ್ಯ
ಇನ್ನು ಇದೇ ವೇಳೆ ತಮ್ಮ ಪರಿಚಯಸ್ಥರ ಮದುಗೆಂದು ಕೋಲಾರಕ್ಕೆ ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಸೈಕಲ್ ಜಾತಾ ಬಗ್ಗೆ ಮಾತನಾಡಿದ್ದಾರೆ. ಕೋಲಾರದಲ್ಲಿ ಹಿಂದು ಮುಸ್ಲಿಂ ಸೌಹಾ೯ದತೆಯಿಂದ ಇದ್ದಾರೆ,ಶಾಂತಿ ಕದಡುವ ಕೆಲಸ ಮಾಡಲು ಬಂದಿದ್ದಾರೆ ಎಂದು ತೇಜಸ್ವಿ ಸೂಯ೯ ವಿರುದ್ದ ಗುಡುಗಿದರು. ಇನ್ನು ಬೆಂಗಳೂರಿನಿಂದ ಕೋಲಾರಕ್ಕೆ ಬಂದ ಸೈಕಲ್ ಜಾತದಲ್ಲಿ 450 ಹೆಚ್ಚು ಸೈಕಲಿಸ್ಟ್ ಗಳು ಭಾಗಿಯಾಗಿದ್ರು,ಪ್ರತಿ ಸೈಕಲ್ ನಲ್ಲಿ ಬಾವುಟವನ್ನು ಕಟ್ಟಿಕೊಂಡು ಜಿಲ್ಲೆಗೆ ಎಂಟ್ರಿ ಕೊಡ್ತಾ ಇದ್ದಂತೆ ಪಟಾಕಿ ಸಿಡಿಸಿ,ಹೂವಿನ ಸುರಿಮಳೆ ಸುರಿಸು ಕೋಲಾರದ ಗಡಿ ರಾಮಸಂದ್ರದಲ್ಲಿ ಸ್ವಾಗತ ಕೋರಲಾಯ್ತು. ಪೊಲೀಸರು ಕ್ಲಾಕ್ ಟವರ್ ಮಾಗ೯ವನ್ನು ತಡೆದು ಅನ್ಯ ಮಾಗ೯ದಲ್ಲಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಿದ್ದತೆ ಮಾಡಿಕೊಂಡಿದ್ದ ವೇದಿಕೆ ಕಾಯ೯ಕ್ರದವರೆಗೂ ಪೊಲೀಸರು ಬಂದೋಬಸ್ಥ್ ಮೂಲಕ ಕರೆದುಕೊಂಡು ಬಂದರು.