ಇಂಡಿಯನ್ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ರೈತರ ಹೆಸರಿನ ಮೇಲೆ ಪಡೆದ ಸಾಲವನ್ನು 45 ದಿನಗಳ ಒಳಗಾಗಿ ಮರುಪಾವತಿಸಲಾಗುವುದು ಎಂದ ಕಾರ್ಖಾನೆ ನಿರ್ದೇಶಕ ಸಂದೀಪ ಪಾಟೀಲ| ರೈತರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲಾಗುವುದು| ಮಹಾರಾಷ್ಟ್ರದ ನಿಂಬರಗಿ ಗ್ರಾಮದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ರೈತರ ಹೆಸರಿನ ಮೇಲೆ ಕಾರ್ಖಾನೆಯವರು ಸಾಲ ಪಡೆದಿದ್ದಾರೆ| ನ.15ರೊಳಗಾಗಿ ರೈತರ ಮನೆ ಬಾಗಿಲಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ತಲುಪಿಸುವುದಾಗಿ ಭರವಸೆ ನೀಡಿದ ಕಾರ್ಖಾನೆ ನಿರ್ದೇಶಕ|
ಚಡಚಣ(ಅ.2): ಸಮೀಪದ ಹಾವಿನಾಳ ಗ್ರಾಮದ ಇಂಡಿಯನ್ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ರೈತರ ಹೆಸರಿನ ಮೇಲೆ ಪಡೆದ ಸಾಲವನ್ನು 45 ದಿನಗಳ ಒಳಗಾಗಿ ಮರುಪಾವತಿಸಿ, ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವುದಾಗಿ ಕಾರ್ಖಾನೆ ನಿರ್ದೇಶಕ ಸಂದೀಪ ಪಾಟೀಲ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ ರಾಜ್ಯದ ನಿಂಬರಗಿ ಗ್ರಾಮದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ರೈತರ ಹೆಸರಿನ ಮೇಲೆ ಕಾರ್ಖಾನೆಯವರು ಪಡೆದ ಸಾಲವನ್ನು ಮರುಪಾವತಿಸಿ, ಕಾರ್ಖಾನೆ ಚಿಟಬಾಯಿ (ಸ್ವೀಪ್ ಬಾಯ್)ಗಳ ಮುಖಾಂತರ ನ.15ರೊಳಗಾಗಿ ರೈತರ ಮನೆ ಬಾಗಿಲಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾರ್ಖಾನೆ ಆರ್ಥಿಕವಾಗಿ ಸದೃಢವಾಗಿದ್ದು, ಕಾರಣಾಂತರಗಳಿಂದ ಕಾರ್ಖಾನೆ ಅಭಿವೃದ್ಧಿಗೋಸ್ಕರ ಸಾಲವನ್ನು ಮರುಪಾವತಿಸಲಾಗಿರಲಿಲ್ಲ. ಕಾರ್ಖಾನೆಯವರು ಪಡೆದ ಸಾಲಕ್ಕೆ ರೈತರು ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆಯಿಲ್ಲ. ರೈತರು ಎಂದಿನಂತೆ ಕಾರ್ಖಾನೆಯೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.