ವಿಶ್ವಮಾನವ ಎಕ್ಸ್ ಪ್ರೆಸ್ ಗೆ ಎಲ್ಎಚ್ ಬಿ ಬೋಗಿಗಳ ಅಳವಡಿಕೆ, ಪ್ರಯಾಣಿಕರ ಹೊಸ ಪಯಣದ ರಹಸ್ಯ!

Published : Apr 18, 2026, 05:18 PM IST
Indian Railways

ಸಾರಾಂಶ

ಮೈಸೂರು-ಬೆಳಗಾವಿ ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ, ಹೆಚ್ಚು ಸುರಕ್ಷಿತವಾದ ಎಲ್ಎಚ್‌ಬಿ ಬೋಗಿಗಳಾಗಿ ಬದಲಾಯಿಸಲಾಗುತ್ತಿದೆ. ಏಪ್ರಿಲ್ 26 ರಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆಯು 20 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.

ಮೈಸೂರು: ದಕ್ಷಿಣ ಪಶ್ಚಿಮ ರೈಲ್ವೆ ವತಿಯಿಂದ ಮೈಸೂರು–ಬೆಳಗಾವಿ–ಮೈಸೂರು ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20676/20675) ರೈಲಿನಲ್ಲಿ ಮಹತ್ವದ ಪರಿಷ್ಕರಣೆ ಕೈಗೊಳ್ಳಲಾಗಿದೆ. ಪ್ರಸ್ತುತ ಬಳಸಲಾಗುತ್ತಿದ್ದ ಹಳೆಯ ಐಸಿಎಫ್ (ICF) ಬೋಗಿಗಳನ್ನು ಹಂತ ಹಂತವಾಗಿ ಆಧುನಿಕ ಎಲ್ಎಚ್‌ಬಿ (LHB) ಬೋಗಿಗಳಾಗಿ ಬದಲಾಯಿಸುವ ಕಾರ್ಯ ಪ್ರಾರಂಭವಾಗಿದ್ದು, ಈ ಹೊಸ ವ್ಯವಸ್ಥೆ ಮೈಸೂರಿನಿಂದ ಏಪ್ರಿಲ್ 26ರಿಂದ ಹಾಗೂ ಬೆಳಗಾವಿಯಿಂದ ಏಪ್ರಿಲ್ 27ರಿಂದ ಜಾರಿಗೆ ಬರಲಿದೆ.

21 ಬೋಗಿಗಳನ್ನು ಹೊಂದಿದ್ದ ಈ ರೈಲು

ಇದುವರೆಗೆ 21 ಬೋಗಿಗಳನ್ನು ಹೊಂದಿದ್ದ ಈ ರೈಲು, ಇನ್ನು ಮುಂದೆ ಒಟ್ಟು 20 ಎಲ್ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಹೊಸ ವ್ಯವಸ್ಥೆಯಡಿ ರೈಲಿನಲ್ಲಿ 1 ಎಸಿ ಚೇರ್ ಕಾರ್, 12 ಸಾಮಾನ್ಯ ದರ್ಜೆಯ ಬೋಗಿಗಳು, 5 ದ್ವಿತೀಯ ದರ್ಜೆ ಸಿಟಿಂಗ್ ಚೇರ್ ಕಾರ್ ಬೋಗಿಗಳು, 1 ಜನರೇಟರ್ ಕಾರ್ ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವ 1 ಬ್ರೇಕ್ ವ್ಯಾನ್ ಒಳಗೊಂಡಿರಲಿದೆ.

ಎಲ್ಎಚ್‌ಬಿ ಬೋಗಿಗಳು ಐಸಿಎಫ್ ಬೋಗಿಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿದ್ದು, ವೇಗ ಮತ್ತು ಸ್ಥಿರತೆಯಲ್ಲಿ ಉತ್ತಮ ಅನುಭವವನ್ನು ನೀಡುತ್ತವೆ. ವಿಶೇಷವಾಗಿ ಅಪಘಾತಗಳ ಸಂದರ್ಭಗಳಲ್ಲಿ ಹಾನಿ ಕಡಿಮೆ ಆಗುವಂತೆ ವಿನ್ಯಾಸಗೊಳಿಸಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಜೊತೆಗೆ ಪ್ರಯಾಣಿಕರಿಗೆ ಆರಾಮದಾಯಕ ಆಸನ ವ್ಯವಸ್ಥೆ, ಸುಧಾರಿತ ಬ್ರೇಕಿಂಗ್ ಸಿಸ್ಟಂ ಹಾಗೂ ಶಬ್ದ ಮತ್ತು ಕಂಪನ ಕಡಿಮೆ ಇರುವ ಪ್ರಯಾಣ ಅನುಭವವನ್ನು ಈ ಬೋಗಿಗಳು ಒದಗಿಸುತ್ತವೆ.

ಮೈಸೂರು ಮತ್ತು ಬೆಳಗಾವಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ

ಈ ಬದಲಾವಣೆಯಿಂದ ಮೈಸೂರು ಮತ್ತು ಬೆಳಗಾವಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ, ಸುಲಭ ಮತ್ತು ಆರಾಮದಾಯಕ ಪ್ರಯಾಣ ಸಾಧ್ಯವಾಗಲಿದ್ದು, ದಕ್ಷಿಣ ಪಶ್ಚಿಮ ರೈಲ್ವೆಯು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಕೈಗೊಂಡಿರುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ಇದು ಪರಿಗಣಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು: ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!
Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ