ಕೋಲಾರ ಕೋಚ್‌ ಫ್ಯಾಕ್ಟರಿ ಕೈಬಿಟ್ಟು ಶಿವಮೊಗ್ಗಕ್ಕೆ ಶೆಡ್ : ಸಿಎಂ ತವರಿಗೆ ಕೊಡುಗೆ

By Kannadaprabha News  |  First Published Feb 8, 2020, 9:42 AM IST

ಕೋಲಾರಕ್ಕೆ ಮಂಜೂರಾಗಿದ್ದ ರೈಲ್ವೇ ಕೋಚ್‌ ಫ್ಯಾಕ್ಟರಿಯನ್ನು ರದ್ದುಪಡಿಸಿ ಕೇವಲ ವರ್ಕ್ಶಾಪ್‌ಗೆ ಸೀಮಿತಗೊಳಿಸಿರುವ ರೈಲ್ವೇ ಸಚಿವಾಲಯವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜಿಲ್ಲೆಗೆ ಒಂದು ರೈಲ್ವೇ ಶೆಡ್‌ ನೀಡಲು ಮುಂದಾಗಿದೆ. 


ವರದಿ :  ರಾಕೇಶ್‌ ಎನ್‌.ಎಸ್‌.

ನವದೆಹಲಿ [ಫೆ.08]:  ನವದೆಹಲಿ [ಫೆ.08]:  ಕೋಲಾರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೆ.ಎಚ್‌.ಮುನಿಯಪ್ಪ ಅವರು ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದಾಗ ಕೋಲಾರಕ್ಕೆ ಮಂಜೂರಾಗಿದ್ದ ರೈಲ್ವೇ ಕೋಚ್‌ ಫ್ಯಾಕ್ಟರಿಯನ್ನು ರದ್ದುಪಡಿಸಿ ಕೇವಲ ವರ್ಕ್ಶಾಪ್‌ಗೆ ಸೀಮಿತಗೊಳಿಸಿರುವ ರೈಲ್ವೇ ಸಚಿವಾಲಯವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜಿಲ್ಲೆಗೆ ಒಂದು ರೈಲ್ವೇ ಶೆಡ್‌ ಮತ್ತು ವಿಜಯಪುರಕ್ಕೆ ಒಂದು ರೈಲ್ವೇ ಗ್ಯಾರೇಜ್ ನೀಡಲು ಮುಂದಾಗಿದೆ.

Tap to resize

Latest Videos

ಕೋಲಾರಕ್ಕೆ 2012-13ರ ಸಾಲಿನಲ್ಲಿ 1,460 ಕೋಟಿ ರು. ವೆಚ್ಚದಲ್ಲಿ ರೈಲ್ವೆ ಕೋಚ್‌ ಫ್ಯಾಕ್ಟರಿ ಘೋಷಣೆಯಾಗಿತ್ತು. ಇದೀಗ ಕೋಚ್‌ ಫ್ಯಾಕ್ಟರಿ ವರ್ಕ್ಶಾಪ್‌ ಆಗಿ ಬದಲಾಗಿದೆ. ರೈಲ್ವೇ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಕೋಲಾರದಲ್ಲಿ ರೈಲ್ವೆ ಕೋಚ್‌ ಫ್ಯಾಕ್ಟರಿ ಎಂಬುದು ಅಂದಿನ ಒಂದು ರಾಜಕೀಯ ಘೋಷಣೆಯಾಗಿತ್ತು ಅಷ್ಟೆ. ದೇಶದಲ್ಲಿ ಈಗಾಗಲೇ ಸಾಕಷ್ಟುರೈಲ್ವೇ ಕೋಚ್‌ ಫ್ಯಾಕ್ಟರಿಗಳಿದ್ದು ಅಗತ್ಯಕ್ಕಿಂತ ಹೆಚ್ಚು ಕೋಚ್‌ ಉತ್ಪಾದಿಸುವ ಸಾಮರ್ಥ್ಯವಿದೆ. ‘ರೈಲ್ವೇ ಪರಿವಾರ್‌’ ಅನ್ನುವ ರೈಲ್ವೆಯ ಸಂಪ್ರದಾಯಕ್ಕೆ ಬದ್ಧವಾಗಿ ವರ್ಕ್ ಶಾಪ್‌ ನಿರ್ಮಾಣಕ್ಕೆ ರೈಲ್ವೆ ಮುಂದಾಗಿದೆ ಎಂದು ಈ ಮೂಲಗಳು ತಿಳಿಸಿವೆ.

ನೈಋುತ್ಯ ರೈಲ್ವೆಗೆ 3751 ಕೋಟಿ ರು. :

ಇದೇ ವೇಳೆ ರೈಲ್ವೆಯ 2020-21ರ ಸಾಲಿನ ಕಾಮಗಾರಿಗಳ ಮಾಹಿತಿಯನ್ನೊಳಗೊಂಡಿರುವ ಪಿಂಕ್‌ ಬುಕ್‌(ಗುಲಾಬಿ ಪುಸ್ತಕ) ಬಹಿರಂಗಗೊಂಡಿದ್ದು, ಹುಬ್ಬಳ್ಳಿಯನ್ನು ಕೇಂದ್ರವಾಗಿರಿಸಿಕೊಂಡಿರುವ ನೈಋುತ್ಯ ರೈಲ್ವೆಯಲ್ಲಿ ಒಟ್ಟು 3751 ಕೋಟಿ ರು. ಕಾಮಗಾರಿಗಳು ನಡೆಯಲಿದೆ.

ಇದರಲ್ಲಿ ಹೊಸ ಲೈನ್‌ಗಳಿಗೆ 600 ಕೋಟಿ ರು., ಡಬ್ಲಿಂಗ್‌ಗೆ 85 ಕೋಟಿ  ರು. ನಿಗದಿಯಾಗಿದ್ದರೂ ಬಜೆಟೇತರ ಸಂಪನ್ಮೂಲ ಸಂಗ್ರಹಿಸಿದರೆ ಹೆಚ್ಚೂ ಕಡಿಮೆ 1,000 ಕೋಟಿ ರು. ಕಾಮಗಾರಿ ನಡೆಸುವ ಅವಕಾಶವಿದೆ. ಟ್ರಾಫಿಕ್‌ ಸೌಲಭ್ಯ, ಯಾರ್ಡ್‌ ರೀಮಾಡೆಲಿಂಗ್‌ ಮತ್ತಿತ್ತರ ಕಾಮಗಾರಿಗೆ 53 ಕೋಟಿ ರು., ಪ್ರಯಾಣಿಕರ ಸೌಲಭ್ಯಕ್ಕೆ 121 ಕೋಟಿ ರು., ಸಿಗ್ನಲಿಂಗ್‌ ಮತ್ತು ಟೆಲಿಕಮ್ಯನಿಕೇಷನ್‌ಗೆ 23 ಕೋಟಿ ರು., ಟ್ರ್ಯಾಕ್‌ ಪುನಶ್ಚೇತನಕ್ಕೆ 410 ಕೋಟಿ ರು. ನಿಗದಿಪಡಿಸಲಾಗಿದೆ. ಉಳಿದಂತೆ ರೈಲ್ವೆಯ ನಿರ್ವಹಣೆಯ ಕೆಲಸಗಳಿಗೆ ಹೆಚ್ಚಿನ ಹಣ ಸಂದಾಯವಾಗಲಿದೆ. ಇದಲ್ಲದೆ ರಾಜ್ಯದ ಹಲವು ರೈಲ್ವೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

click me!