ಭಾರತ ಮತ್ತೊಂದು ಪಾಕ್‌ ಆಗಲಿದೆ: ಸಿ.ಟಿ.ರವಿ ವಾರ್ನಿಂಗ್

By Kannadaprabha NewsFirst Published Feb 20, 2020, 9:01 AM IST
Highlights

ಹಿಂದುಗಳು ನಾವೆಲ್ಲ ಒಂದೂ ಎಂಬ ಭಾವನೆ ಬೆಳೆಸಿಕೊಳ್ಳದಿದ್ದರೆ ಭಾರತ ಮತ್ತೊಂದು ಪಾಕಿಸ್ತಾನವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರು(ಫೆ.20): ಹಿಂದುಗಳು ನಾವೆಲ್ಲ ಒಂದೂ ಎಂಬ ಭಾವನೆ ಬೆಳೆಸಿಕೊಳ್ಳದಿದ್ದರೆ ಭಾರತ ಮತ್ತೊಂದು ಪಾಕಿಸ್ತಾನವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ’ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಅಂದು ಏಕಾಂಗಿ ಹೋರಾಟ ಮಾಡಿ ಹಿಂದು ಸಾಮ್ರಾಜ್ಯ ಕಟ್ಟದಿದ್ದರೆ ಭಾರತ ಮತ್ತೊಂದು ಪಾಕಿಸ್ತಾನ ಅಥವಾ ಅಪಘಾನಿಸ್ತಾನ ಆಗುತಿತ್ತು ಎಂದಿದ್ದಾರೆ.

ಮೇಯರ್‌, ಆಯುಕ್ತರ ವಿರುದ್ಧ ಜನರ ಆಕ್ರೋಶ!

ರತದಲ್ಲಿ ಶಿವಾಜಿ ಜನ್ಮತಾಳದಿದ್ದರೆ ಇಂದು ನಮ್ಮ ತಾಯಂದಿರ ಹಣೆಯಲ್ಲಿ ಕುಂಕುಮ ಇರುತ್ತಿರಲಿಲ್ಲ. ಈಗಲೂ ಹಿಂದುಗಳು ನಾವೆಲ್ಲ ಒಂದು ಎಂಬ ಭಾವನೆ ಬೆಳೆಸಿಕೊಳ್ಳದಿದ್ದರೆ ಭಾರತ ಉಳಿಯುವುದಿಲ್ಲ. ಹಾಗಾಗಿ ಹಿಂದು ನಾವೆಲ್ಲ ಒಂದು ಎಂಬ ಭಾವವನ್ನು ಜಾಗೃತವಾಗಿರಿಸಿಕೊಳ್ಳೋಣ ಎಂದರು.

ಸಚಿವ ಶ್ರೀಮಂತ ಪಾಟೀಲ ಮರಾಠಿ ಭಾಷಣ:

ಶಿವಾಜಿ ಜಯಂತಿಯಲ್ಲಿ ಭಾಗವಹಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿ ಭಾಷಣ ಮಾಡಿದರು. ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಶಿವಾಜಿ ಜಯಂತಿ ಆಚರಣೆ ಮಾಡುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದರು. ಬಳಿಕ ಮರಾಠಿಯಲ್ಲೇ ಶಿವಾಜಿ ಮಹಾರಾಜರ ಕುರಿತು ಭಾಷಣ ಮಾಡಿದರು.

click me!