ಭಾರತ-ಆಸ್ಪ್ರೇಲಿಯಾ ಏಕದಿನ ಪಂದ್ಯಕ್ಕೆ ಹೆಚ್ಚು ಬಸ್‌ ಸೇವೆ

By Kannadaprabha NewsFirst Published Jan 18, 2020, 8:09 AM IST
Highlights

ಜ.19ರಂದು ಭಾರತ-ಆಸ್ಪ್ರೇಲಿಯಾ ನಡುವೆ ಹೊನಲು ಬೆಳಕಿನ ಏಕದಿನ ಕ್ರಿಕೆಟ್‌ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. 

ಬೆಂಗಳೂರು [ಜ.18]: ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದಲ್ಲಿ ಜ.19ರಂದು ಭಾರತ-ಆಸ್ಪ್ರೇಲಿಯಾ ನಡುವೆ ಹೊನಲು ಬೆಳಕಿನ ಏಕದಿನ ಕ್ರಿಕೆಟ್‌ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕ ಅನುಕೂಲಕ್ಕಾಗಿ ಮೈದಾನದಿಂದ ನಗರದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ ಕಾರ್ಯಾಚರಣೆ ನಡೆಸುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವು ತಿಳಿಸಿದೆ.

ಜ.19ರಂದು ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗುವುದರಿಂದ ಆ ವೇಳೆಗೆ ಮೈದಾನಕ್ಕೆ ಆಗಮಿಸಲು ಅನುವಾಗುವಂತೆ ನಗರದ ವಿವಿಧ ಪ್ರದೇಶಗಳಿಂದ ಬೆಳಗ್ಗೆ 11 ಗಂಟೆಯಿಂದ ಬಸ್‌ ಸೇವೆ ನೀಡಲಾಗುವುದು. 

ಬಸ್ ಓಡಿಸಿ ಟೀಕೆಗೆ ಗುರಿಯಾದ ಬಿಎಂಟಿಸಿ ಎಂಡಿ ಶಿಖಾ; ಇಲ್ಲಿದೆ ನೋಡಿ ವಿಡಿಯೋ!...

ಅಂತೆಯೇ ಪಂದ್ಯ ಮುಗಿದ ಬಳಿಕ ಅಂದರೆ ರಾತ್ರಿ 11.30ರ ನಂತರ ಮನೆಗಳಿಗೆ ತೆರಳಲು ಪ್ರಯಾಣಿಕರ ಸಂಚಾರ ದಟ್ಟಣೆಗೆ ಅನುಗುಣವಾಗಿ ಮೈದಾನದ ಸಮೀಪದಿಂದ ವಿವಿಧ ಪ್ರದೇಶಗಳಿಗೆ ಬಸ್‌ ಸೇವೆ ನೀಡಲಾಗುವುದು.

ಮೆಟ್ರೋ ಜಂಕ್ಷನ್‌ಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಗೊಳಿಸುವುದಾಗಿ ತಿಳಿಸಿದೆ.

click me!