ಕೈಗಾ ಅಣುಸ್ಥಾವರ: ಅಣು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮ ನಿರ್ಭರತೆ: ಡಾ.ಅಜಿತ್ ಕುಮಾರ್ ಮೊಹಂತಿ

Published : Mar 01, 2026, 09:58 PM IST
AEC Chairman Ajit Kumar

ಸಾರಾಂಶ

ಕಾರವಾರದ ಕೈಗಾದಲ್ಲಿ 5 ಮತ್ತು 6ನೇ ಅಣುವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದು ದೇಶದ ಅಣುಶಕ್ತಿ ತಂತ್ರಜ್ಞಾನದಲ್ಲಿನ ಸಂಪೂರ್ಣ ಆತ್ಮನಿರ್ಭರತೆಯನ್ನು ಸಾರುತ್ತದೆ. ಈ ಹೊಸ ಘಟಕಗಳು ತಲಾ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.

 ಕಾರವಾರ: ದೇಶದಲ್ಲಿ ಅಣು ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಪೂರ್ಣ ಆತ್ಮ ನಿರ್ಭರತೆ ಸಾಧಿಸಲಾಗಿದೆ ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ.ಅಜಿತ್ ಕುಮಾರ್ ಮೊಹಂತಿ ತಿಳಿಸಿದ್ದಾರೆ.

ಕಾರವಾರದ ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರ

ಉತ್ತರನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರದ 5 ಹಾಗೂ 6 ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ನಾಲ್ಕು ಘಟಕಗಳು 880 ಮೆಗಾವ್ಯಾಟ್‌ ಉತ್ಪಾದನೆ ಮಾಡಲಾಗುತ್ತಿದ್ದು, 7 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ 5 ಹಾಗೂ 6 ಘಟಕದಲ್ಲಿ ತಲಾ 700 ಮೆಗಾವ್ಯಾಟ್ ನಂತೆ ಒಟ್ಟು 2280 ಮೆಗಾವ್ಯಾಟ್ ಉತ್ಪಾದನೆ ಕೈಗಾದಲ್ಲಿ ನಡೆಯಲಿದೆ. ದೇಶವು 2047ಕ್ಕೆ 100 ಗಿಗಾ ವ್ಯಾಟ್ ಅಣುವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ಇದಕ್ಕಾಗಿ ಎನ್.ಪಿ.ಸಿ.ಎಲ್ ವತಿಯಿಂದ 54 ಗಿಗಾವ್ಯಾಟ್ ಉತ್ಪಾದನೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.

60 ತಿಂಗಳಲ್ಲಿ ವಿದ್ಯುತ್ ಉತ್ಪಾದನಾ ಹಂತವನ್ನು ಸಾಧಿಸುವ ನಿರೀಕ್ಷೆ

ಇನ್ನು ಎನ್‌ಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ ಪಾಠಕ್ ಮಾತನಾಡಿ, ಕೈಗಾದಲ್ಲಿ ಉದ್ದೇಶಿತ 5 ಮತ್ತು 6ರ ಮೊದಲ ಘಟಕವು ಸುಮಾರು 60 ತಿಂಗಳಲ್ಲಿ ವಿದ್ಯುತ್ ಉತ್ಪಾದನಾ ಹಂತವನ್ನು ಸಾಧಿಸುವ ನಿರೀಕ್ಷೆಯಿದ್ದು, ಮೊದಲ ಬಾರಿಗೆ, ಈ ಯೋಜನೆಯ ನಿರ್ಮಾಣವನ್ನು ಕೆಲವೇ ಮೆಗಾ EPC ಪ್ಯಾಕೇಜ್‌ಗಳನ್ನು ಒಳಗೊಂಡ ನವೀನ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಕೈಗಾದ ಸ್ಥಾನೀಯ ನಿರ್ದೇಶಕ ಬಿ. ವಿನೋದ್ ಕುಮಾರ್ ಮಾತನಾಡಿ, ಕೈಗಾ ಈವರೆಗೆ 133, 876 ಮಿಲಿಯನ್ ಯುನಿಟ್ಸ್ ಗ್ರೀನ್ ಎನರ್ಜಿ ಉತ್ಪಾದಿಸಿದ್ದು,1080 ಲಕ್ಷ ಟನ್ ಕಾರ್ಬನ್ ಡೈ ಆಕ್ಸೈಡನ್ನು ನಿಯಂತ್ರಿಸಿದೆ. ಇನ್ನು ಸಿಎಸ್‌ಆರ್ ಅನುದಾನದಡಿ,12ಕೋಟಿ ರೂ. ಸ್ಥಳೀಯ ಸಮುದಾಯ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿಗಳಿಗೆ ವಿನಿಯೋಗಿಸಲಾಗಿದ್ದು, 100 ಶಿಕ್ಷಕರನ್ನು ನೇಮಿಸಿ ವೇತನ ಭರಿಸಿದೆ ಎಂದು ಹೇಳಿದರು.

PREV
Read more Articles on
click me!

Recommended Stories

ಬೆಂಗಳೂರು–ಅಶೋಕಪುರಂ ಮೆಮು ರೈಲು ವಿಳಂಬ, ಬಿಡದಿಯಲ್ಲಿ ಪ್ರಯಾಣಿಕರ ಪ್ರತಿಭಟನೆ, ಲಘು ಲಾಠಿ ಚಾರ್ಜ್!
ರಾಮನಗರದಲ್ಲಿ ಮಾರ್ಚ್‌5 ರಂದು ಉದ್ಯೋಗ ಮೇಳ, ಬರೋಬ್ಬರಿ 171 ಕಂಪೆನಿಗಳು ಭಾಗಿ, ನೀವು ಸಿದ್ಧರಿದ್ದೀರಾ?