ಮಂಗಳವಾರ 300 ರಿಂದ 35೦ ಜನ ದರ್ಶನ|ಬುಧವಾರ ಸುಮಾರು 700 ಜನ ದರ್ಶನ| ಸ್ಥಳೀಯರೇ ಹೆಚ್ಚಾಗಿ ಬರುತ್ತಿದ್ದು, ಹೊರ ಜಿಲ್ಲೆ ಭಕ್ತರು ಬರುತ್ತಿಲ್ಲ| ಜಿಲ್ಲೆಯ ಇತರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ|
ಬಳ್ಳಾರಿ(ಜೂ.11): ಜಿಲ್ಲೆಯ ಹೊಪಪೇಟೆ ತಾಲೂಕಿನ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಬುಧವಾರ ಹೆಚ್ಚಾಗಿತ್ತು. ಮಂಗಳವಾರ 300 ರಿಂದ 35೦ ಜನ ದರ್ಶನ ಪಡೆದಿದ್ದರು.
ಬುಧವಾರ ಸುಮಾರು 700 ಜನ ದರ್ಶನ ಪಡೆದರು. ಸ್ಥಳೀಯರೇ ಹೆಚ್ಚಾಗಿ ಬರುತ್ತಿದ್ದು, ಹೊರ ಜಿಲ್ಲೆ ಭಕ್ತರು ಬರುತ್ತಿಲ್ಲ. ಜಿಲ್ಲೆಯ ಇತರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.
ಕೊರೋನಾ ರಣಕೇಕೆ: ಒಂದೇ ದಿನ ಜಿಂದಾಲ್ 20 ನೌಕರರಿಗೆ ವಕ್ಕರಿಸಿದ ಕೋವಿಡ್
ಇನ್ನು ಹೋಟೆಲ್ಗಳಿಗೆ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಸೋಮವಾರ, ಮಂಗಳವಾರಕ್ಕೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು, ಹೋಟೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ.