ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನ ಹೆಚ್ಚಳ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

By Kannadaprabha NewsFirst Published Sep 26, 2024, 11:05 PM IST
Highlights

ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಪಟ್ಟಣದ ಪಾಟೀಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಣಜಿಗ ಸಮಾಜದ ತಾಲೂಕು ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಗ್ಗಾಂವಿ (ಸೆ.26): ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಪಟ್ಟಣದ ಪಾಟೀಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಣಜಿಗ ಸಮಾಜದ ತಾಲೂಕು ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸೈನ್ಯಕ್ಕೆ ಅವಶ್ಯವಿರುವ ಪ್ರತಿಯೊಂದು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇ. ೨೫ರಷ್ಟು ಆಮದನ್ನು ಕಡಿಮೆ ಮಾಡಿ, ಮೇಕಿನ್ ಇನ್ ಇಂಡಿಯಾ ಮೂಲಕ ಸ್ವದೇಶಿ ವಸ್ತುಗಳನ್ನೇ ಪೂರೈಸಿಕೊಳ್ಳುತ್ತಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಶೇ. ೫೦ರಷ್ಟು ವಸ್ತುಗಳನ್ನು ಸ್ವದೇಶದಲ್ಲಿಯೇ ತಯಾರಿಸಿಕೊಳ್ಳಲಿದೆ ಎಂದು ಹೇಳಿದರು.

ಆಮದು ಕಡಿಮೆ ಮಾಡಿ, ದೇಶೀಯ ಉತ್ಪಾದನೆ ಹೆಚ್ಚು ಮಾಡುವುದರಿಂದ ದೇಶದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುಚ್ಚದೆ. ವ್ಯಾಪಾರವನ್ನೇ ನಂಬಿ ಜೀವನ ಮಾಡುತ್ತಿರುವ ಸಮುದಾಯದವರಿಗೆ ವಿಸ್ತಾರವಾದ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಂತ ಹಂತವಾಗಿ ಸ್ವದೇಶಿ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ತೆಲೆಮಾರುಗಳಿಂದ ನ್ಯಾಯಯುತವಾಗಿ ವ್ಯಾಪಾರ ಮಾಡಿಕೊಂಡು ಬಂದಿರುವ ಸಮುದಾಯಗಳು ದೇಶದ ಆರ್ಥಿಕತೆಯ ಸರಪಳಿಯಲ್ಲಿ ಬಲಿಷ್ಠವಾದ ಕೊಂಡಿ ಎಂದರು.

Latest Videos

ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ಸಮಾಜದ ದುರ್ಬಲ ವರ್ಗದವರನ್ನು ಎತ್ತಿಹಿಡಿಯುವ ಕೆಲಸವನ್ನು ಬಣಿಜಿಗ ಸಮಾಜ ಮಾಡುತ್ತಾ ಬಂದಿದೆ ಎಂದರು. ಸಿದ್ದಾರ್ಥ ಪಾಟೀಲ, ಭರತ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಬಸಣ್ಣ ಹೆಸರೂರ, ಶಶಿಧರ ಯಲಿಗಾರ, ಲಿಂಗರಾಜ ಆಂಗಡಿ, ಚನ್ನವೀರ ಅಕ್ಕಿ, ಐ.ಪಿ.ಕೆ. ಶೆಟ್ಟರ, ಪೂಜಾ ಹೆಸರೂರ, ಶಿವಪುತ್ರಪ್ಪ ಜವಳಿ, ಶಂಭಣ್ಣ ಜಿಗಳಿಶೆಟ್ಟರ, ಚನ್ನಬಸಪ್ಪ ಅಂಗಡಿ, ಬಸವರಾಜ ನೇರಲಗಿ, ಚನ್ನಪ್ಪ ಗುದ್ಲಿಶೆಟ್ಟರ, ವೀರೇಶ ಸೊಬರದ ಇತರರಿದ್ದರು.

ಬಿ.ವೈ.ರಾಘವೇಂದ್ರ ಜನರ ಭಾವನೆಗೆ ಸ್ಪಂದಿಸುವ ಸಂಸದ: ಸಚಿವ ವಿ.ಸೋಮಣ್ಣ ಶ್ಲಾಘನೆ

ನಿರಾಣಿಗೆ ಶಿಗ್ಗಾಂವಿ ಟಿಕೆಟ್‌ ಊಹಾಪೋಹ: ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಾದ್ದಾರೆ ಎಂಬುದೆಲ್ಲ ಊಹಾಪೋಹ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ತಾಲೂಕಿನಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿ, ನಿರಾಣಿಯವರು ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ನನ್ನ ಮುಂದೆಯಂತು ವ್ಯಕ್ತಪಡಿಸಿಲ್ಲ. ಅವರು ಶಿಗ್ಗಾಂವಿಯಿಂದ ಸ್ಪರ್ಧಿಸುವುದು ಊಹಾಪೋಹ ಎಂದರು.

click me!