ಹುಬ್ಬಳ್ಳಿ: ಉದ್ಘಾಟನೆ ಕಾಣದ ಹೈಟೆಕ್‌ ಮೀನು ಮಾರುಕಟ್ಟೆ

By Kannadaprabha News  |  First Published Oct 14, 2022, 9:55 AM IST

Hubballi News: ಗಣೇಶ ಪೇಟೆಯಲ್ಲಿ ಸ್ಮಾರ್ಟ್‌ಸಿಟಿಯ ಮೂಲ ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡು 4 ತಿಂಗಳು ಕಳೆದರೂ ಉದ್ಘಾಟನೆಯಾಗಿಲ್ಲ 


ವರದಿ: ಬಾಲಕೃಷ್ಣ ಜಾಡಬಂಡಿ, ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ (ಅ. 14): ಇಲ್ಲಿನ ಗಣೇಶ ಪೇಟೆಯಲ್ಲಿ ಸ್ಮಾರ್ಟ್‌ಸಿಟಿಯ ಮೂಲ ಮಾರುಕಟ್ಟೆಅಭಿವೃದ್ಧಿ ಯೋಜನೆಯಡಿ . 5.60 ಕೋಟಿ ವೆಚ್ಚದಲ್ಲಿ ಹೈಟೆಕ್‌ ಮೀನು ಮಾರುಕಟ್ಟೆನಿರ್ಮಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡು 4 ತಿಂಗಳು ಕಳೆದರೂ ಉದ್ಘಾಟನೆಯಾಗಿಲ್ಲ. ಹೀಗಾಗಿ ರಸ್ತೆಯಲ್ಲಿ ಮೀನು ವ್ಯಾಪಾರ ನಡೆಯುತ್ತಿದೆ. ಮೀನು ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆಕಲ್ಪಿಸುವ ಹಾಗೂ ಗಣೇಶ ಪೇಟೆಯ ರಸ್ತೆಯಲ್ಲಿ ಮೀನು ವ್ಯಾಪಾರ ತಡೆಯುವ ಉದ್ದೇಶದಿಂದ ಸ್ಮಾರ್ಚ್‌ಸಿಟಿ ಯೋಜನೆಯಡಿ ಹೈಟೆಕ್‌ ಮೀನು ಮಾರುಕಟ್ಟೆನಿರ್ಮಿಸಲು ಉದ್ದೇಶಿಸಲಾಗಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದ ಅಧಿಕಾರಿಗಳು ತೆಗೆದುಕೊಂಡಿದ್ದು ಎರಡು ವರ್ಷ.

Latest Videos

undefined

ಶತಮಾನಗಳ ಇತಿಹಾಸ ಹೊಂದಿರುವ ಈ ಮೀನು ಮಾರುಕಟ್ಟೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. 32 ಮಳಿಗೆ, 96 ಬೈಕ್‌ ನಿಲ್ಲಲು ವ್ಯವಸ್ಥೆ, ನೀರು ಸಂಗ್ರಹಿಸಲು ಟ್ಯಾಂಕ್‌, ಮೀನು ಸಂಗ್ರಹಾಗಾರ, ಶೌಚಗೃಹ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಕಟ್ಟಡ ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಮಾತ್ರ ಕಟ್ಟಡ ಉದ್ಘಾಟಿಸಿ ವ್ಯಾಪಾರಸ್ಥರಿಗೆ ನೀಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ವ್ಯಾಪಾರಸ್ಥರು ರಸ್ತೆ ಮೇಲೆ ವ್ಯಾಪಾರ ನಡೆಸುವ ಅನಿವಾರ್ಯತೆ ಎದುರಾಗಿದೆ.

ಅಭಿಪ್ರಾಯ ಸಂಗ್ರಹಿಸದ ಅಧಿಕಾರಿಗಳು: ಹೈಟೆಕ್‌ ಮಾರುಕಟ್ಟೆನಿರ್ಮಿಸುವಾಗ ಅಧಿಕಾರಿಗಳು ವ್ಯಾಪಾರಸ್ಥರ ಅಭಿಪ್ರಾಯ ಸಂಗ್ರಹಿಸಿಲ್ಲ. ಇದೀಗ ನಿರ್ಮಿಸಿರುವ ಮಳಿಗೆಗಳು ಚಿಕ್ಕದಾಗಿವೆ. ಕಟ್ಟಡ ಕಾಮಗಾರಿ ಮುಗಿದು ಹಲವು ತಿಂಗಳು ಕಳೆದರೂ ಕಟ್ಟಡ ಉದ್ಘಾಟಿಸಿ ವ್ಯಾಪಾರಸ್ಥರಿಗೆ ಹಸ್ತಾಂತರಿಸಿಲ್ಲ. ಶೀಘ್ರ ವ್ಯಾಪಾರಸ್ಥರಿಗೆ ಹಸ್ತಾಂತರಿಸುವ ಮೂಲಕ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವ್ಯಾಪಾರಿ ದಾದಾ ಹಯತ್‌ ಖೈರಾತಿ ಒತ್ತಾಯಿಸಿದ್ದಾರೆ.

ಆರು ವರ್ಷವಾದರೂ ಮುಗಿಯದ ಸಿಸಿ ರಸ್ತೆ ಕಾಮಗಾರಿ: ಅಧಿಕಾರಿಗಳಿಗೆ ಜಾಡಿಸಿದ ಸಚಿವ ಜೋಶಿ

ಮೀನು ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿಯೇ ಮೀನು ಮಾರಾಟ ನಡೆಯುತ್ತಿದೆ. ಇದರಿಂದ ನಿತ್ಯ ಮೂಗು ಮುಚ್ಚಿಕೊಂಡೆ ವಾಹನ ಸವಾರರು ತೆರಳಬೇಕಾದ ಪರಿಸ್ಥಿತಿ ಇದೆ. ಹೈಟೆಕ್‌ ಮೀನು ಮಾರುಕಟ್ಟೆಶೀಘ್ರ ಉದ್ಘಾಟನೆಯಾಗಲಿ ಎನ್ನುವುದು ವ್ಯಾಪಾರಸ್ಥರ ಜತೆಗೆ ಸಾರ್ವಜನಿಕರ ಒತ್ತಾಯವೂ ಆಗಿದೆ.

ನಿತ್ಯ ರಸ್ತೆಯಲ್ಲಿಯೇ ವ್ಯಾಪಾರ ಮಾಡುವಂತಾಗಿದೆ. ಬಿಸಿಲು, ಮಳೆಯ ನಡುವೆ ಹೆಚ್ಚಿನ ಅನಾನುಕೂಲವಾಗುತ್ತಿದೆ. 2 ವರ್ಷದ ಹಿಂದೆಯೇ ಕಾಮಗಾರಿ ಆರಂಭಿಸಲಾಗಿತ್ತು. ಈಗ ಕಾಮಗಾರಿ ಮುಗಿದು 4 ತಿಂಗಳು ಕಳೆದರೂ ಅಧಿಕಾರಿ, ಜನಪ್ರತಿನಿಧಿಗಳು ಉದ್ಘಾಟನೆ ಬಗ್ಗೆ ಗಮನಹರಿಸುತ್ತಿಲ್ಲ. ಶೀಘ್ರ ಮಾರುಕಟ್ಟೆಆರಂಭವಾಗಲಿ.

ಜಹೀರ್‌ ಗದಗ

ನೂತನ ಮೀನು ಮಾರುಕಟ್ಟೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನ ನಿಲುಗಡೆ ಹಾಗೂ ಮೀನು ಸಂಗ್ರಹಿಸುವ ವ್ಯವಸ್ಥೆ ಒದಗಿಸಲಾಗಿದೆ. ಅಕ್ಟೋಬರ್‌ ಅಂತ್ಯದೊಳಗೆ ಮಾರುಕಟ್ಟೆಉದ್ಘಾಟಿಸಿ ವ್ಯಾಪಾರಕ್ಕೆ ಮುಕ್ತಗೊಳಿಸಲಾಗುವುದು.

ಶಕೀಲ್‌ ಅಹ್ಮದ್‌, ಸ್ಮಾರ್ಚ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

click me!