ದೇವ ದೇವತೆಯರಿಗೆ ಸು ಸ್ವರೂಪ ನೀಡುವ ಸ್ವಾತಂತ್ರ್ಯ ಎಲ್ಲ ಕಲಾವಿದರಿಗಿದೆ. ಮುಂದಿನ ಪೀಳಿಗೆಗೆ ಈ ಕಲೆಯನ್ನು ಹಸ್ತಾಂತರಿಸುವ ಜವಾಬ್ದಾರಿಯು ಅವರಿಗಿದೆ ಎಂದು ಮೂಡಬಿದ್ರೆ ಆಳ್ವಾಸ್ ನ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಉಡುಪಿ (ಮೇ.26) : ದೇವ ದೇವತೆಯರಿಗೆ ಸು ಸ್ವರೂಪ ನೀಡುವ ಸ್ವಾತಂತ್ರ್ಯ ಎಲ್ಲ ಕಲಾವಿದರಿಗಿದೆ. ಮುಂದಿನ ಪೀಳಿಗೆಗೆ ಈ ಕಲೆಯನ್ನು ಹಸ್ತಾಂತರಿಸುವ ಜವಾಬ್ದಾರಿಯು ಅವರಿಗಿದೆ ಎಂದು ಮೂಡಬಿದ್ರೆ ಆಳ್ವಾಸ್ ನ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಅವರು ಕಲಾವಿದೆ ಪ್ರವೀಣಾ ಮೋಹನ್ ಅವರ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ " ದೇವತಾ ಉದ್ಘಾಟಿಸಿ ಮಾತನಾಡಿದರು.ಕಲಾವಿದೆ ಪ್ರವೀಣಾ ಮೋಹನ್ ಅವರದ್ದು ಸಾಂಪ್ರದಾಯಿಕ ಶೈಲಿ. ಅದ್ಭುತ ಕಲಾ ವಿನ್ಯಾಸ. ಮಾತನಾಡುವ ರೇಖೆಗಳು ದೇವತೆಗಳ ಚಿತ್ರಕ್ಕೆ ನ್ಯಾಯಒದಗಿಸಿದೆ ಎಂದರು.
undefined
Udupi- ಅನ್ನ ಬ್ರಹ್ಮ ಶ್ರೀಕೃಷ್ಣನಿಗೆ ಅಕ್ಕಿ ಮುಹೂರ್ತ ನೆರವೇರಿಸಿದ ಪುತ್ತಿಗೆ ಶ್ರೀಗಳು
ಉಜ್ವಲ್ ಸಮೂಹದ ಆಡಳಿತ ನಿರ್ದೇಶಕರಾದ ಅಜೆಯ್ ಪಿ ಶೆಟ್ಟಿ ಮಾತನಾಡಿ ಸನಾತನ ವಿಚಾರಧಾರೆಗಳ ಎಂದಿಗೂ ಪ್ರಸ್ತುತ. ಈ ಬಗ್ಗೆ ತರುಣ ಪೀಳಿಗೆ ಚಿಂತನೆ ನಡೆಸಬೇಕೆಂದರು. ಮಂಗಳೂರಿನ ಲ್ಯಾಮಿನ್ ಫ್ರೇಮ್ಸ್(Lamin Frames Mangalore) ನ ಮಾಲಕರಾದ ನರೇಂದ್ರ ಶೆಣೈ(Narendra Shenai) ಸ್ಮರಿಣಿಕೆ, ಸ್ಟಿಕ್ಕರ್ ಬಿಡುಗಡೆ ಮಾಡಿದರು.
ಪ್ರದರ್ಶನವು " ಮೇ 25 ರಿಂದ ಮೇ 28 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ. ಕಲಾವಿದೆ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ.ಕಿರಣ್ ಆಚಾರ್ಯ ಸ್ವಾಗತಿಸಿ ವಿದುಷಿ ಪ್ರತಿಮಾ ಆಚಾರ್ಯ ವಂದಿಸಿದರು. ಗ್ಯಾಲರಿಯ ಮತ್ತೋರ್ವ ವಿಶ್ವಸ್ಥ ಆಸ್ಟ್ರೊ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ, ಹೆಬ್ರಿ ತಾಲೂಕಲ್ಲಿ ನೀರಿನ ತೀವ್ರ ಅಭಾವ, ರೈತರು ಕಂಗಾಲು