ಸಕಾಲ ಯೋಜನೆ ಅನುಷ್ಠಾನದಲ್ಲಿ ಅರ್ಧ ಶತಕ ಬಾರಿಸಿದ ಚಿಕ್ಕಬಳ್ಳಾಪುರ: ಆರ್.ಲತಾ

Published : May 07, 2022, 11:50 PM IST
ಸಕಾಲ ಯೋಜನೆ ಅನುಷ್ಠಾನದಲ್ಲಿ ಅರ್ಧ ಶತಕ ಬಾರಿಸಿದ ಚಿಕ್ಕಬಳ್ಳಾಪುರ: ಆರ್.ಲತಾ

ಸಾರಾಂಶ

ಸಕಾಲ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ  50 ಬಾರಿ ಪ್ರಥಮ ಸ್ಥಾನ ಗಳಿಸಿ ಅರ್ಧ ಶತಕ ಬಾರಿಸಿದೆ. ಈ  ಸಾಧನೆಗೈದ ಮತ್ತೊಂದು ಜಿಲ್ಲೆ ರಾಜ್ಯದಲ್ಲಿಲ್ಲಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದ್ದಾರೆ.

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣನ್ಯೂಸ್, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಮೇ.07): ಸಕಾಲ ಯೋಜನೆಯ  (Sakala Yojan) ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ (Government) ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ (Karnataka)  50 ಬಾರಿ ಪ್ರಥಮ ಸ್ಥಾನ ಗಳಿಸಿ ಅರ್ಧ ಶತಕ ಬಾರಿಸಿದೆ. ಈ  ಸಾಧನೆಗೈದ ಮತ್ತೊಂದು ಜಿಲ್ಲೆ ರಾಜ್ಯದಲ್ಲಿಲ್ಲಎಂದು ಜಿಲ್ಲಾಧಿಕಾರಿ ಆರ್.ಲತಾ (R Latha) ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್ ಲತಾ ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ  ಅಹವಾಲು  ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯ 2022ರ ಏಪ್ರಿಲ್ ತಿಂಗಳ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ 2022ರ ಏಪ್ರಿಲ್ ಮಾಹೆಯಲ್ಲಿಯೂ ಕೂಡ ಪ್ರಥಮ ಸ್ಥಾನವನ್ನು ಗಳಿಸಿದೆ. ಕಳೆದ ಮಾರ್ಚ್ ಮಾಹೆಯಲ್ಲಿಯೂ ಸಹ ಪ್ರಥಮ ಸ್ಥಾನಗಳಿಸಿ ಉತ್ತಮ ಸಾಧನೆ ಮಾಡಿತ್ತು ಎಂದರು. 

ಚಿಕ್ಕಬಳ್ಳಾಪುರ ಕ್ಷೇತ್ರದ ಜನರಿಗೆ ಮೆಗಾ ಆರೋಗ್ಯ ಶಿಬಿರ ಆಯೋಜಿಸಿದ ಡಾ.ಕೆ.ಸುಧಾಕರ್

ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ಒಟ್ಟು 59,802 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿದ್ದು, ಈ ಪೈಕಿ 59,109  ಅರ್ಜಿಗಳನ್ನು ಸಕಾಲ ನಿಯಮಗಳನ್ವಯ ನಿಗದಿತ ಕಾಲ‌ಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 2,647 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ. 2031 ಅರ್ಜಿಗಳು ವಿಲೇವಾರಿಯಾಗುವುದು ಬಾಕಿಯಿದೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಜೊತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿಯಾಗಿದೆ. ಸಕಾಲ ಯೋಜನೆ ಅನುಷ್ಠಾನದಲ್ಲಿ  ಮಾರ್ಚ್  ಮಾಹೆಯಲ್ಲೂ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದ್ದು, ಏಪ್ರಿಲ್ ಮಾಹೆಯಲ್ಲಿ ಸಹ ಮೊದಲ ಸ್ಥಾನ ಗಳಿಸಿಕೊಂಡಿದೆ  ಎಂದು ಮಾಹಿತಿ ನೀಡಿದರು.

ಗಮನಾರ್ಹ ಸಾಧನೆ: ಸಕಾಲ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಯಾವಾಗಲೂ ಮುಂಚೂಣಿಯಲ್ಲಿದ್ದು, ಸದರಿ ಯೋಜನೆ ಆರಂಭವಾದಾಗಿನಿಂದ (2012 ರಿಂದ) ಈವರೆಗೆ ಸರ್ಕಾರ ಈ ಯೋಜನೆಯ  ಪ್ರಗತಿಯ  ಅಂಕಿ  ಅಂಶಗಳನ್ನು ಬಿಡುಗಡೆ ಮಾಡಿದ  ಮಾಹೆಗಳ  ಪೈಕಿ ಚಿಕ್ಕಬಳ್ಳಾಪುರ  ಜಿಲ್ಲೆ ರಾಜ್ಯದಲ್ಲಿಯೇ  50 ಬಾರಿ (ತಿಂಗಳು) ಪ್ರಥಮ  ಸ್ಥಾನ ಗಳಿಸಿರುವುದು ಜಿಲ್ಲಾಡಳಿತದ ತೋರುತ್ತಿರುವ ವಿಶೇಷ, ವಿಭಿನ್ನ, ವಿಶಿಷ್ಟ, ವಿನೂತನ  ಕಾರ್ಯ ವೈಖರಿಗೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ದಕ್ಷ ಅನುಷ್ಠಾನಕ್ಕೆ  ಕೈಗನ್ನಡಿಯಾಗಿದೆ  ಎಂದು ಜಿಲ್ಲಾಧಿಕಾರಿ ಆರ್ ಲತಾ ಹರ್ಷ ವ್ಯಕ್ತಪಡಿಸಿದರು.

ಏನಿದು ರ್ಯಾಂಕ್: ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ ಕುರಿತಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ರ್ಯಾಕಿಂಗ್ ಪಟ್ಟಿ ಪ್ರಕಟಿಸುತ್ತದೆ. ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಕಾಲ ಮಿತಿಯಲ್ಲಿ ಕಡತ ವಿಲೇವಾರಿಯಾಗಬೇಕು ಹಾಗೂ ನಾಗರೀಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರದ ಸೇವೆಗಳು ಲಭ್ಯವಾಗಲಿವೆ. 

Chikkaballapur Nandi Hill: ‌ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟ ಮಾಡಲು ಪಣ

ಸಕಾಲ ಸಚಿವರಿಂದ  ಪ್ರಶಂಸೆ: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸಕಾಲ ಯೋಜನೆ ಆರಂಭದಿಂದ  ಈವರೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು 50 ಬಾರಿ  ಪ್ರಥಮ, 14 ಬಾರಿ ದ್ವಿತೀಯ ಹಾಗೂ 10 ಬಾರಿ ತೃತೀಯ  ಸ್ಥಾನಗಳಿಸಿದೆ. ಒಟ್ಟಾರೆ  50 ಬಾರಿ (ಮಾಹೆ) ರಾಜ್ಯ ದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಡಳಿತ ಗಮನಾರ್ಹ ಸಾಧನೆ ಮಾಡಿದೆ. ಈ  ಸಾಧನೆ ಮಾಡಿದ ಮತ್ತೊಂದು ಜಿಲ್ಲೆ ರಾಜ್ಯದಲ್ಲಿಲ್ಲ ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಮಾನ್ಯ ಸಕಾಲ ಸಚಿವರಿಂದ  5 ಬಾರಿ ಪ್ರಶಂಸೆ ಪಡೆದಿರುವ ಕೀರ್ತಿಯು ಜಿಲ್ಲೆಗೆ ಸಲ್ಲುತ್ತದೆ. ದಶಮಾನೋತ್ಸವ ಕಾರ್ಯಕ್ರಮದಲ್ಲೇ  ಪ್ರಶಸ್ತಿ ಪಡೆಯಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಸೇವೆ ನೀಡುವಲ್ಲಿ ಸಹಕಾರಿಯಾಗಿ ನಿಂತಿದೆ. ಈ ಸಾಧನೆಗೆ ಕೈಜೋಡಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ತ ಜನತೆಗೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಕೃತಜ್ಞತೆಯನ್ನು ತಿಳಿಸಿದರು.

PREV
Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ