ರಾಜೀನಾಮೆಗೆ ನಾನು ಸಿದ್ಧನಾಗಿದ್ದೇನೆ : ಸಚಿವ ಎಂಟಿಬಿ ನಾಗರಾಜ್

Kannadaprabha News   | Asianet News
Published : Jul 24, 2021, 01:23 PM ISTUpdated : Jul 24, 2021, 01:31 PM IST
ರಾಜೀನಾಮೆಗೆ ನಾನು ಸಿದ್ಧನಾಗಿದ್ದೇನೆ : ಸಚಿವ ಎಂಟಿಬಿ ನಾಗರಾಜ್

ಸಾರಾಂಶ

 ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆ  ಬದಲಾವಣೆ ಮಾಡುವುದು ಬಿಡುವುದು ಪಕ್ಷದ ಹೈ ಕಮಾಂಡಿಗೆ ಬಿಟ್ಟ ವಿಚಾರ  ರಾಜೀನಾಮೆ ಕೇಳಿದರೆ ಸದಾ ಸಿದ್ಧ ಎಂದು ಎಂಟಿಬಿ ನಾಗರಾಜ್ ಹೇಳಿದರು

ಹೊಸಕೋಟೆ (ಜು.24): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆ ಆಗುತ್ತಿದ್ದು ಬದಲಾವಣೆ ಮಾಡುವುದು ಬಿಡುವುದು ಪಕ್ಷದ ಹೈ ಕಮಾಂಡಿಗೆ ಬಿಟ್ಟ ವಿಚಾರ ಎಂದು ಪೌರಾಡಳಿತ ಸಚಿವ  ಎಂಟಿಬಿ ನಾಗರಾಜ್ ಹೇಳಿದರು. 

ತಾಲೂಕಿನ ದೊಡ್ಡಹರಳಗೆರೆ ಗ್ರಾಮದಲ್ಲಿ  ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ  ನೀಡಿ ಮಾತನಾಡಿದ ಅವರು  ಬಿಜೆಪಿ ದೇಶದಲ್ಲಿ ಬಹುದೊಡ್ಡ  ರಾಷ್ಟ್ರೀಯ ಪಕ್ಷವಾಗಿದೆ. ಪಕ್ಷ ಹೈ ಕಮಾಂಡ್‌ ತೀರ್ಮಾನವೇ ಅಂತಿಮ ಎಂದರು. 

ಸಿಎಂ ಹುದ್ದೆ ತ್ಯಜಿಸಲು 2 ವರ್ಷ ಹಿಂದೆಯೇ ಒಪ್ಪಂದ: ಬಿಜೆಪಿ ಸಂಸದನ ಸ್ಫೋಟಕ ಹೇಳಿಕೆ!

ಹೈ ಕಮಾಂಡ್‌ಗಿಂತ ದೊಡ್ಡವರು ಯಾರೂ ಇಲ್ಲ. ಆದ್ದರಿಂದ ಸಿಎಂ ಬದಲಾವಣೆ ವಿಚಾರವಾಗಿ ಹೈ ಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧವಾಗಿರುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಿಎಸ್‌ವೈ ಕೂಡ ಹೈ ಕಮಾಂಡ್ ರಾಜೀನಾಮೆ ಬಯಸಿದರೆ ಯಾವ ಸಂದರ್ಭದಲ್ಲಿ ಬೇಕಾದರೂ ನಾನೂ ರಾಜೀನಾಮೆ ಕೊಟ್ಟು ನಿರ್ಗಮಿಸಲು ಸಿದ್ದ ಎಂದಿದ್ದಾರೆ. 

ಒಂದು ವೇಳೆ ಹೈ ಕಮಾಂಡ್ ನನ್ನನ್ನು ರಾಜೀನಾಮೆ ಕೇಳಿದರೆ ಸದಾ ಸಿದ್ಧ ಎಂದು ಎಂಟಿಬಿ ನಾಗರಾಜ್ ಹೇಳಿದರು.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು