ಶಕ್ತಿ ಮೀರಿ ಸೇವೆ ಮಾಡಿ ನಿಮ್ಮ ಋಣ ತೀರಿಸುವೆ : ಸುಮಲತಾ

Published : Sep 12, 2019, 10:42 AM IST
ಶಕ್ತಿ ಮೀರಿ ಸೇವೆ ಮಾಡಿ ನಿಮ್ಮ ಋಣ ತೀರಿಸುವೆ : ಸುಮಲತಾ

ಸಾರಾಂಶ

ಹಲವರನ್ನು ಎದುರು ಹಾಕಿಕೊಂಡು ನನ್ನನ್ನು ಗೆಲ್ಲಿಸಿದ ನಿಮಗೆ ಶಕ್ತಿ ಮೀರಿ ಸೇವೆ ಮಾಡುವ ಮೂಲಕ ಋಣ ತೀರಿಸುವೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. 

ಭಾರತೀನಗರ [ಸೆ.12]:  ಹಣ ಖರ್ಚು ಮಾಡಿ ಹಾರ ಹಾಕಿ ಶಾಲು ಹೊದಿಸುವ ಬದಲು ಸಸಿ ನೆಟ್ಟು ಪರಿಸರ ಕಾಪಾಡಿ ಎಂದು ಸಂಸದೆ ಸುಮಲತಾ ಮನವಿ ಮಾಡಿದರು.

ಸಮೀಪದ ಕ್ಯಾತಘಟ್ಟಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿ, ಚುನಾವಣೆಯಲ್ಲಿ ಹಲವರನ್ನು ಎದುರು ಹಾಕಿಕೊಂಡು ನೀವು ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮೆಲ್ಲರ ಋಣ ನನ್ನ ಮೇಲಿದೆ. ನನ್ನ ಶಕ್ತಿ ಮೀರಿ ಸೇವೆ ಮಾಡಿ ನಿಮ್ಮ ಋುಣ ತೀರಿಸಲು ಶ್ರಮಿಸುತ್ತೇನೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಯಾವ ಕಾರಣಕ್ಕೂ ಕೂಡ ಪಕ್ಷಬೇಧ ಬೇಡ. ಮನೆಯಿಂದಲೇ ಕಸ ವಿಂಗಡಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ಲಾಸ್ಟಿಕ್‌ ಬಳಕೆಯನ್ನು ಕಡ್ಡಾಯವಾಗಿ ತ್ಯಜಿಸುವ ನಿರ್ಧಾರ ಮಾಡಿ ಪರಿಸರ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು. ಈ ವೇಳೆ ತಾಪಂ ಇಒ ಮುನಿರಾಜು ಮುಖಂಡರಾದ ಸೋಮಶೇಖರ್‌ , ಎ.ಎಸ….ರಾಜೀವ, ಗ್ರಾಪಂ ಅಧ್ಯಕ್ಷ ಡಿ. ವಿಜಿ, ಸದಸ್ಯ ತೊರೆಚಾಕನಹಳ್ಳಿ ಶಂಕರೇಗೌಡ ಇದ್ದರು.

PREV
click me!

Recommended Stories

ಗದಗ: ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ದಿನವಿಡೀ ಗೆಜ್ಜೆ ಶಬ್ಧ! ದೇವಿ ಕೋಪ ಶಮನಕ್ಕೆ ಊರವರಿಂದ ಮಹತ್ವದ ನಿರ್ಧಾರ
ಚಿಕ್ಕಮಗಳೂರು: ರಾಟ್‌ವೀಲರ್ ನಾಯಿ vs ನಾಗರಹಾವು ಮಧ್ಯೆ ಭೀಕರ ಕಾಳಗ, ಹಾವು ಕೊಂದು ಪ್ರಾಣಬಿಟ್ಟ ಶ್ವಾನ! ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ