ನನ್ನ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಸುಮಲತಾ

By Kannadaprabha News  |  First Published Jul 3, 2021, 4:21 PM IST
  • ನಾನು ಕ್ಷೇತ್ರಕ್ಕೆ 2 ತಿಂಗಳಾದರೂ ಬರಲಿಲ್ಲ ಎಂದು ಅಪಪ್ರಚಾರ 
  • ಅಪಪ್ರಚಾರಕ್ಕೆ  ಕಿವಿಗೊಡಬಾರದು ಎಂದ ಸಂಸದೆ ಸುಮಲತಾ 
  • ನಾನು ಎಲ್ಲೇ ಇದ್ದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ  ಅಧಿಕಾರಿಗಳೊಂದಿಗೆ  ಮಾಹಿತಿ  ಪಡೆಯುತ್ತಿದ್ದೇನೆ

 ಭಾರತೀನಗರ (ಜು.03): ನಾನು ಕ್ಷೇತ್ರಕ್ಕೆ 2 ತಿಂಗಳಾದರೂ ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ  ಕಿವಿಗೊಡಬಾರದು ಎಂದು ಸಂಸದೆ ಸುಮಲತಾ ತಿಳಿಸಿದರು. 

ತೊರೆಬೊಮ್ಮನಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ  ಮಾತನಾಡಿ ನನ್ನ ಬಗ್ಗೆ ಅಪಪ್ರಚಾರ ಬೇಡ ಎಂದರು. 

Tap to resize

Latest Videos

ನಮ್ಮ ಕೈ ಕಟ್ಟಿಹಾಕಿದಂತಾಗಿದೆ : ಸಂಸದೆ ಸುಮಲತಾ ಬೇಸರ ...

ನಾನು ಎಲ್ಲೇ ಇದ್ದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ  ಅಧಿಕಾರಿಗಳೊಂದಿಗೆ  ಮಾಹಿತಿ ಪಡೆದು ಸಲಹೆ ಸಹಕಾರಗಳನ್ನು ನೀಡುತ್ತಾ ಬಂದಿದ್ದೇನೆ. ಕೊರೋನಾ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿದ್ದೇನೆ. ಆದರೂ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ನಂತರ ಮೆಣಸಗೆರೆ ಗ್ರಾಮಕ್ಕೆ ತೆರಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸೌರಭ ರಂಗಮಂಟಪವನ್ನು ಉದ್ಘಾಟನೆ ಮಾಡಿದರು. ಗ್ರಾಮದ ಮುಖಂಡರು ಹಾಜರಿದ್ದರು.

click me!