KPCC ಅಧ್ಯಕ್ಷ ಕುರ್ಚಿಗೆ ಮತ್ತೊಂದು ಕರ್ಚಿಫ್ : ನಾನೂ ಆಕಾಂಕ್ಷಿ ಎಂದ ಮಾಜಿ ಶಾಸಕ

By Kannadaprabha NewsFirst Published Jan 7, 2020, 1:15 PM IST
Highlights

ರಾಜ್ಯದಲ್ಲಿ ಕೆಪಿಸಿಸಿ ಹುದ್ದೆಗೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ನಾನೂನು ಕೂಡ ಆಕಾಂಕ್ಷಿ ಎಂದು ಇದೀಗ ಮತ್ತೋರ್ವ ಮುಖಂಡ ಹೇಳಿದ್ದಾರೆ. ಮಾಜಿ ಶಾಸಕರೋರ್ವರು ತಾವೂ ಈ ನಿಟ್ಿನಲ್ಲಿ ಹೈ ಕಮಾಂಡ್ ಸಂಪರ್ಕಿಸುವ ಬಗ್ಗೆ ಮಾತನಾಡಿದ್ದಾರೆ.

ತುಮಕೂರು (ಜ.07):  ತಾವು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಸುಳಿವನ್ನು ಮಾಜಿ ಶಾಸಕ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ನೀಡಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಸಿದ್ದರಾಮಯ್ಯರ ಬೆಂಬಲ ಸದಾ ನನಗೆ ಇದ್ದೆ ಇದೆ. ದಿನೇಶ್‌ ಗುಂಡೂರಾವ್‌ ಅವರು ರಾಜೀನಾಮೆ ಕೊಟ್ಟ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಇದೇ ತಿಂಗಳ 9ರಂದು ದೆಹಲಿಗೆ ಹೋಗಿ ಹೈಕಮಾಂಡ್‌ ಭೇಟಿಯಾಗುವುದಾಗಿ ತಿಳಿಸಿದರು.

ರಾಜ್ಯ ಕಾಂಗ್ರೆಸ್ಸಿಗೆ ಯಾರೇ ಅಧ್ಯಕ್ಷರಾದರೂ ಒಪ್ಪುತ್ತೇವೆ!...

ಅಷ್ಟರಲ್ಲಿ ಅವಕಾಶ ಸಿಕ್ಕರೆ ಸಿಗಲಿ. ಸಿಗದೇ ಇದ್ದರೆ ಏನೂ ಮಾಡಲಿಕ್ಕಾಗುವುದಿಲ್ಲ . ಹಿಂದೆ ಅಧ್ಯಕ್ಷರಾದವರು ಏನೆಲ್ಲಾ ಕಡೆದು ಕಟ್ಟೆಹಾಕಿದರು ಎಂಬುದು ಗೊತ್ತು ಎಂದ ಅವರು, ಡಿಕೆಶಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ನನ್ನ ಆಕ್ಷೇಪಣೆ ಇಲ್ಲ ಎಂದರು.

ಪೌರತ್ವ ಕಾಯ್ದೆ ಸಮರ್ಥಿಸಿಕೊಂಡ ಕೆಎನ್‌ಆರ್‌:

ಸಿದ್ದರಾಮಯ್ಯರ ಇಲ್ಲದೇ ಕಾಂಗ್ರೆಸ್‌, ಯಡಿಯೂರಪ್ಪ ಇಲ್ಲದೇ ಬಿಜೆಪಿ ಹಾಗೆಯೇ ದೇವೇಗೌಡರು ಇಲ್ಲದೇ ಜೆಡಿಎಸ್‌ ಇಲ್ಲ ಎಂದ ರಾಜಣ್ಣ, 2014ರ ನಂತರ ವಲಸೆ ಬಂದವರಿಗೆ ಮಾತ್ರ ಪೌರತ್ವ ಕಾಯ್ದೆಯಿಂದ ತೊಂದರೆ ಇದೆ ಬಿಟ್ಟರೆ ಯಾವುದೇ ಮುಸಲ್ಮಾನರಿಗೆ ತೊಂದರೆ ಇಲ್ಲ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪಕ್ಷದ ಬಲ ಕುಸಿಯುತ್ತಿದೆ ಎಂದು ಎಚ್ಚರಿಸಿದ ಮುಖಂಡ?..

ಪೌರತ್ವ ಕಾಯಿದೆ ಬೇಡಿಕೆಯನ್ನು ಬಿಜೆಪಿ ಮಾಡಿದಲ್ಲ. ಹಿಂದುಗಳು ಬೇರೆ ರಾಷ್ಟ್ರದಲ್ಲಿ ದಬ್ಬಾಳಿಕೆಗೆ ಒಳಗಾದಾಗ ಭಾರತದಲ್ಲಿ ಆಶ್ರಯ ಕೊಡಬೇಕು. ಈ ಚಿಂತನೆ ಈಗಿಂದಲ್ಲ. ಮಹಾತ್ಮಾ ಗಾಂಧಿ, ಜವಾಹರ್  ನೆಹರು, ಮನಮೋಹನ್‌ ಸಿಂಗ್‌ ಕೂಡ ಆಗ್ರಹಿಸಿದ್ದಾರೆ ಎಂದು ತಿಳಿಸಿದರು.

click me!