ಸೊಸೆಯೊಂದಿಗೆ ಪಕ್ಕದ್ ಮನೆಯವನ ಅಕ್ರಮ ಸಂಬಂಧ : ಅಡ್ಡಿಯಾದ ಅತ್ತೆ ಭೀಕರ ಕೊಲೆ

Kannadaprabha News   | Asianet News
Published : Mar 17, 2021, 12:05 PM IST
ಸೊಸೆಯೊಂದಿಗೆ ಪಕ್ಕದ್ ಮನೆಯವನ ಅಕ್ರಮ ಸಂಬಂಧ : ಅಡ್ಡಿಯಾದ ಅತ್ತೆ ಭೀಕರ ಕೊಲೆ

ಸಾರಾಂಶ

ಸೊಸೆಯೊಂದಿಗೆ  ಅಕ್ರಮ ಸಂಬಂಧ ಹೊಂದಿದ್ದಕ್ಕೆ ಬುದ್ದಿ ಹೇಳಿದ್ದಕ್ಕೆ ಆಕೆಯ ಅತ್ತೆಯನ್ನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ (ಮಾ.17): ಸೊಸೆಯೊಂದಿಗಿನ ಅನೈತಿಕ ಸಂಬಂಧ ಪ್ರಶ್ನಿಸಿದ ಮಹಿಳೆಯನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಹುಣಸನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. 

 ಹುಣಸನಹಳ್ಳಿ ಗ್ರಾಮದ ದೊಡ್ಡತಾಯಮ್ಮ (55) ಎಂಬ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ : ಲವರ್ ಜೊತೆ ಸೇರಿ ಕೊಂದಳು

ಅದೇ ಗ್ರಾಮದ ವಾಸು(30) ಎಂಬ ವ್ಯಕ್ತಿಯಿಂದ ದೊಡ್ಡ ತಾಯಮ್ಮ ಕೊಲೆಯಾಗಿದೆ.  ಮೃತ ಮಹಿಳೆ ದೊಡ್ಡತಾಯಮ್ಮರ ಸೊಸೆಯೊಂದಿಗೆ ವಾಸು ಎಂಬಾತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಸೊಸೆ ಹಾಗೂ ಈ ವ್ಯಕ್ತಿಗೆ ದೊಡ್ಡತಾಯಮ್ಮ ಹಲವು ಬಾರಿ ಬುದ್ದಿ ಮಾತು ಹೇಳಿದ್ದರು. 

ಆದರೂ ಕೇಳದೇ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಕೆ.ಆರ್.ಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?