ಲಾರಿಗಳಲ್ಲಿ ಹೊತ್ತೊಯುತ್ತಿದ್ದ 49 ಜಾನುವಾರು ರಕ್ಷಣೆ| ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಇಮಡಾಪುರ ಬಳಿ ಪೊಲೀಸರ ದಾಳಿ| ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲು|
ಕೂಡ್ಲಿಗಿ(ಅ.23): ಪರವಾನಗಿ ಇಲ್ಲದೇ ಹರಿಯಾಣದಿಂದ ಕೇರಳಕ್ಕೆ ಎರಡು ಲಾರಿಗಳಲ್ಲಿ ಹೊತ್ತೊಯುತ್ತಿದ್ದ 49 ಜಾನುವಾರುಗಳನ್ನು ತಾಲೂಕಿನ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಇಮಡಾಪುರ ಸಮೀಪ ನಡೆದಿದ್ದು, ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಕೋಟೆ ಕುಣಿಗಲ್‌ನಲ್ಲಿ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ ಎನ್‌ಜಿಓ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಮಂಜುನಾಥ ಎಂಬುವವರು ಕೆಲಸದ ನಿಮಿತ್ತ ಬಳ್ಳಾರಿಗೆ ಹೋಗಿ ವಾಪಸ್ ತುಮಕೂರು ಕಡೆ ಹೋಗುವಾಗ ಕೂಡ್ಲಿಗಿ ತಾಲೂಕಿನ ಇಮಡಾಪುರ ಸಮೀಪದ ಫೌಜಿ ಡಾಬಾದ ಹತ್ತಿರಕ್ಕೆ ಊಟಕ್ಕೆಂದು ನಿಲ್ಲಿಸಿದ್ದಾಗ ಎರಡು ಲಾರಿಗಳಲ್ಲಿ ಜಾನುವಾರು ಇರುವುದು ತಿಳಿದು ವಿಚಾರಿಸಿದ್ದಾರೆ.
ಯಡಿಯೂರಪ್ಪ, ಸಿದ್ದರಾಮಯ್ಯ ಪಕ್ಷಕ್ಕೆ ಕರೆದಿದ್ದರು: ಜೆಡಿಎಸ್ ನಾಯಕ
ಎಮ್ಮೆ, ಕೋಣಗಳು ಹರಿಯಾಣದಿಂದ ಕೇರಳಕ್ಕೆ ಪಂಜಾಬ್ ಮೂಲದ ಲಾರಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿರುವ ಮಾಹಿತಿ ನೌಕರನಿಗೆ ತಿಳಿದು ಬಂದಿದೆ. ತಕ್ಷಣವೇ ಹೊಸಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡು ಲಾರಿಗಳಲ್ಲಿದ್ದ 48 ಎಮ್ಮೆ, ಒಂದು ಕೋಣ ವಶಪಡಿಸಿಕೊಂಡಿದ್ದಾರೆ. 4 ಎಮ್ಮೆಗಳು ಆಹಾರವಿಲ್ಲದೆ ಅದರಲ್ಲೇ ಸತ್ತಿವೆ ಎಂದು ತಿಳಿದು ಬಂದಿದೆ. ಮಂಜುನಾಥ ನೀಡಿದ ದೂರಿನಂತೆ ತಾಲೂಕಿನ ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದಾರೆ. ಲಾರಿಗಳಲ್ಲಿದ್ದ ಪಂಬಾಬ್ನ ಜಿಹಾರ್ ಸಿಂಗ್, ಅಜಿತ್ ಸಿಂಗ್, ಬಿಹಾರ್‌ನ ಸಾಗರ್ ಯಾದವ್, ಹರೀಶರಾಯ್ ಮತ್ತು ಹರಿಯಾಣದ ಉತ್ತಮ ಪ್ರಕಾಶ್ ಹಾಗೂ ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.