ಮಹಾರಾಷ್ಟ್ರದಿಂದ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್: ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ

Published : May 27, 2026, 10:29 PM IST
Eshwar Khandre

ಸಾರಾಂಶ

ಕಾಳ ಸಂತೆಯಲ್ಲಿ ಮಾರಾಟ ಮಾಡಲು ತಯಾರಿ ಮಾಡಿಕೊಂಡ ಮರಳು ದಂಧೆಯ ಕುರಿತಂತೆ ಕ್ರಮ ಕೈಗೊಂಡು, ಈ ಕುರಿತಾಗಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್‌ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಔರಾದ್‌ (ಮೇ.27): ಮಹಾರಾಷ್ಟ್ರದಿಂದ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯಿಂದ ರಸ್ತೆಗಳು ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತ ದುಬಾರಿ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತಯಾರಿ ಮಾಡಿಕೊಂಡ ಮರಳು ದಂಧೆಯ ಕುರಿತಂತೆ ಕ್ರಮ ಕೈಗೊಂಡು, ಈ ಕುರಿತಾಗಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್‌ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯ ದೆಗಲೂರ ತಾಲೂಕಿನ ಹಣೆಗಾಂವ್‌ ಮೂಲಕ ಔರಾದ್‌ ತಾಲೂಕಿನ ವನಮಾರಪಳ್ಳಿ ಗ್ರಾಮದ ಚೆಕ್‌ಪೋಸ್ಟ್‌ ಮೂಲಕ ಭಾರಿ ಮರಳನ್ನು ಹೊತ್ತ ವಾಹನಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೋಮವಾರ ತಡರಾತ್ರಿಯಿಂದಲೇ ಚೆಕ್‌ ಪೋಸ್ಟ್‌ನಲ್ಲಿ ಖಡಕ್‌ ಆದೇಶ ರವಾನೆ ಯಾಗಿದೆ. ಒಂದೇ ಒಂದು ಮರಳು ಹೊತ್ತ ವಾಹನ ಗಡಿ ಪ್ರವೇಶ ಮಾಡದಂತೆ ಎಚ್ಚರಿಸಲಾಗಿದೆ. ಹೀಗಾಗಿ ಮಂಗಳವಾರದವರೆಗೆ ವನಮಾರಪಳ್ಳಿ ಗಡಿಗೆ ಹೊಂದಿಕೊಂಡು ನೂರಾರು ಮರಳು ಹೊತ್ತ ಟಿಪ್ಪರ್‌ಗಳು ರಾಜ್ಯದ ಗಡಿ ಪ್ರವೇಶ ಮಾಡಲು ಬಕಪಕ್ಷಿಯಂತೆ ಕಾಯುತ್ತ ಕುಳಿತಿರುವ ದೃಶ್ಯ ಕಂಡು ಬಂದಿದೆ.

ಡಿಸಿಗೆ ಉಸ್ತುವಾರಿ ಸಚಿವರು ಬರೆದ ಪತ್ರದಲ್ಲೆನಿದೆ ?

ಕಳೆದ ಒಂದು ವಾರದಿಂದ ‘ಕನ್ನಡಪ್ರಭ’ ಮರಳು ಮಾಯೆ ಎಂಬ ತಲೆ ಬರಹದಡಿಯಲ್ಲಿ ವಿಸ್ತೃತವಾಗಿ ವರದಿ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನೆರೆ ರಾಜ್ಯದಿಂದ ಬೀದರ್‌ಗೆ ಬಂದಿರುವ ಮರಳಿನ ಲಾರಿಗಳು ರಸ್ತೆಯಲ್ಲೆ ನಿಂತಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿದೆ ಇದರ ಜೊತೆಗೆ ರಸ್ತೆಯಲ್ಲಿ ಮರಳು ರಾಶಿ ಹಾಕಿ ದಾಸ್ತಾನು ಮಾಡಲಾಗಿರುವ ಕಾರಣ ದಿಂದಲೂ ಸಂಚಾರ ಸಮಸ್ಯೆ ಉದ್ಭವಿಸಿದೆ. ಇದರ ಜೊತೆಗೆ ಇಷ್ಟೆಲ್ಲ ಅಕ್ರಮ ಮರಳು ಸಾಗಾಟವಾಗ್ತಿದ್ದರು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಇದ್ದು ಕೂಡಲೆ ಜಿಲ್ಲಾಡಳಿತ ಈ ಬಗ್ಗೆ ಪರಿಶಿಲಿಸಿ ಜನರಿಗೆ ತೊಂದರೆಯಾಗದಂತೆ ಮತ್ತು ಅಕ್ರಮಗಳಿಗೆ ಅವಕಾಶ ನೀಡದಂತೆ ಕೈಗೊಂಡಿರುವ ಕ್ರಮದ ವರದಿಯನ್ನು ಮೂರು ದಿನಗಳಲ್ಲಿ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಲ್ಲಗೆ ಜಿಲ್ಲಾ ಪೊಲೀಸರ್‌ ವರಿಷ್ಠಾಧಿಕಾರಿಗಳಿಗೂ ಪ್ರತಿಯನ್ನು ಲಗತ್ತಿಸಲಾಗಿದೆ.

ಚೆಕ್‌ ಪೋಸ್ಟ್‌ ಬಿಗಿ

ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶ ಮಾಡುವ ಅಕ್ರಮ ಮರಳಿನ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ಪೊಲೀಸರು ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಒಂದು ಲಾರಿ ಕೂಡ ಗಡಿ ಪ್ರವೇಶ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ವನಮಾರಪಳ್ಳಿ, ಮುರ್ಕಿ, ಚಿಂತಾಕಿ ಹಾಗೂ ಕಮಲನಗರ ಚೆಕ್‌ಪೊಸ್ಟ್‌ ಗಳು ಸಕ್ರೀಯವಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮರಳು ದಾಸ್ತಾನು ಮೇಲೆ ದಾಳಿ ಯಾಕಿಲ್ಲ?

ಮಹಾರಾಷ್ಟ್ರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡಿರುವ ಕೆಲವರು ಗಡಿ ಭಾಗದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಗುಡ್ಡೆ ಹಾಕಿಕೊಂಡು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮರಳು ಮಾರಾಟ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ವನಮಾರಪಳ್ಳಿ ಗ್ರಾಮದ ಗಡಿಗೆ ಹೊಂದಿಕೊಂಡಿರುವ ಹೆದ್ದಾರಿಯ ಎರಡೂ ಬದಿ ಯಲ್ಲಿ ನೂರಕ್ಕೂ ಅಧಿಕ ಲೋಡ್‌ ಮರಳು ದಾಸ್ತಾನು ಮಾಡಲಾಗಿದೆ.

ಪಟ್ಟಣದ ನಾರಾಯಣಪೂರ್‌ ರಸ್ತೆಯ ಲೇ ಔಟ್‌, ಅಮರೇಶ್ವರ ಕಾಲೇಜು, ದತ್ತ ಮಂದಿರ ಪಕ್ಕ, ಎಪಿಎಂಸಿ ಯಾರ್ಡ್‌, ಎಕಂಬಾ, ಭಂಡಾರಕುಮಠಾ, ಶಿವಪೂರ್‌, ಡೊಣಗಾಂವ್‌, ಚೊಂಡಿಮುಖೇಡ, ಡಿಗ್ಗಿ ಸೇರಿದಂತೆ ಹಲವು ಗ್ರಾಮಗಳ ಸಿಕ್ಕ ಸಿಕ್ಕಲ್ಲಿ ಅಕ್ರಮ ಮರಳಿನ ದಾಸ್ತಾನು ಇದ್ದರೂ ಸಂಬಂಧಿತ ಇಲಾಖಾ ಅಧಿಕಾರಿಗಳು ದಾಳಿ ನಡೆಸುವದಿರಲಿ ಮರಳು ಸಮಿತಿಗೆ ಶಿಫಾರಸ್ಸು ಮಾಡಲು ಹಿಂದೇಟು ಹಾಕುತ್ತಿರುವದರ ಹಿಂದಿನ ಮರ್ಮವೇನು ಎಂದು ಜನರ ಅನುಮಾನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ನಂತರ ಮರಳಿನ ಲಾರಿಗಳ ಓಡಾಟ ಸ್ಥಗಿತವಾದರೂ ದಾಸ್ತಾನು ಮಾಡಿದ ಮರಳಿನ ಮೇಲಿನ ಮಾಯೆ ಮಾತ್ರ ಕಮ್ಮಿಯಾಗ್ತಿಲ್ಲ. ಅಷ್ಟಕ್ಕೂ ಸಚಿವರ ಖಡಕ್‌ ಪತ್ರಕ್ಕೆ ಜಿಲ್ಲಾಧಿಕಾರಿಗಳು ವರದಿ ನೀಡ್ತಾರೆಯೇ ಎಂಬುವದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದು ದಾಖಲೆ ಅಲ್ಲ: ಬಿ.ವೈ.ವಿಜಯೇಂದ್ರ ವಾಗ್ದಾಳಿ
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡ್ತಾರಾ?: ಶಾಸಕ ಜನಾರ್ದನ ರೆಡ್ಡಿ ಹೇಳಿದ್ದೇನು?