ದಾವಣಗೆರೆ ವಿಶ್ವ ವಿದ್ಯಾನಿಲಯದ ವಿವಿಧ ವಿಭಾಗಗಳ 110 ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ಮಾರ್ಗಸೂಚಿ, ಯುಜಿಸಿ ನಿಯಮಾವಳಿ ಗಾಳಿಗೆ ತೂರಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸಮಿತಿ ನೇತೃತ್ವದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಧಾರವಾಡದ ಡಾ.ರಮೇಶ ಎಸ್.ವಡವಿ ಒತ್ತಾಯಿಸಿದ್ದಾರೆ.
ದಾವಣಗೆರೆ(ಆ.27): ದಾವಣಗೆರೆ ವಿಶ್ವ ವಿದ್ಯಾನಿಲಯದ ವಿವಿಧ ವಿಭಾಗಗಳ 110 ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ಮಾರ್ಗಸೂಚಿ, ಯುಜಿಸಿ ನಿಯಮಾವಳಿ ಗಾಳಿಗೆ ತೂರಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸಮಿತಿ ನೇತೃತ್ವದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಧಾರವಾಡದ ಡಾ.ರಮೇಶ ಎಸ್.ವಡವಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಿವಿಯಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯು ಆ.19ಕ್ಕೆ ಮುಕ್ತಾಯಗೊಂಡಿದೆ. ಈ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ. ನೇಮಕಾತಿ ಮಾರ್ಗಸೂಚಿಗಳನ್ನೇ ವಿವಿ ಅಧಿಕಾರಿಗಳು ಗಾಳಿಗೆ ತೂರಿದ್ದು, ಇದನ್ನೆಲ್ಲಾ ಪುಷ್ಟೀಕರಿಸುವಂತೆ ನೇಮಕಾತಿ ಪರೀಕ್ಷೆಗೂ ದಾವಿವಿಯಿಂದಲೇ ಪೆನ್ ನೀಡಿರುವುದೇ ಪುಷ್ಟೀಕರಿಸುತ್ತದೆ ಎಂದು ಅವರು ಆರೋಪಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ಉನ್ನತ ಶಿಕ್ಷಣ ವಿಭಾಗ (ಸುತ್ತೋಲೆ ಸಂಖ್ಯೆಯಡಿ 136 ಯುಎನ್‌ಇ 2017ರ ಅನುಬಂಧ, ದಿ.17.7.2018) ಮತ್ತು ಯುಜಿಸಿ-2018ರ ಮಾರ್ಗಸೂಚಿಗಳನ್ನೇ ನೇಮಕಾತಿಗೆ ಅಳವಡಿಸಿಕೊಂಡಿಲ್ಲ. ದಾವಿವಿ ಬೋಧನಾ ಹುದ್ದೆಗಳಿಗೆ ಮೂರು ಅಧಿಸೂಚನೆಗಳನ್ನು ಮಾಡಿದೆ. 2.3.2017, 20.7.2017, 2.2.2018 ಮತ್ತು ಅಂತಿಮವಾಗಿ ಅಕ್ಟೋಬರ್ 2018ರಲ್ಲಿ ವಿದ್ಯಾಯು ಎಲ್ಲಾ ಅರ್ಜಿದಾರರನ್ನು ಬಹು ಆಯ್ಕೆ ಪ್ರಶ್ನೆ ಒಳಗೊಂಡ ಲಿಖಿತ ಪರೀಕ್ಷೆಗೆ ಓಎಂಆರ್ ಹಾಳೆ ನೀಡುವ ಮೂಲಕ ನಡೆಸಿತ್ತು. ಸರಿಯಾದ ಉತ್ತರ ಗುರುತಿಸಲು ವಿವಿಯಿಂದಲೇ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ನೀಡಿದೆ ಎಂದು ಅವರು ದೂರಿದರು.
ಕಾರ್ಬನ್ ರಹಿತ OMR ಶೀಟ್ ನೀಡಿಲ್ಲ:
ಕಾರ್ಬನ್ ರಹಿತ ಓಎಂಆರ್ ಹಾಳೆಯನ್ನು ವಿವಿ ನೀಡಿಲ್ಲ. ಹೆಚ್ಚು ಸೂಕ್ಷ್ಮ ಮತ್ತು ಪ್ರಮುಖ ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ತಪ್ಪಿಸಲು ಕಾರ್ಬನ್ ರಹಿತ ಓಎಂಆರ್ ಹಾಳೆ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ವಿವಿ ನೀಡಿದ ಅಂಕಗಳು ಮತ್ತು ಅಭ್ಯರ್ಥಿಗಳ ನಿರೀಕ್ಷಿತ ಅಂಕಗಳ ವ್ಯತ್ಯಾಸ ದೃಢೀಕರಿಸಲು ವಿವಿ ಸಂದರ್ಶನದ ದಿನಾಂಕವನ್ನು ಮೊದಲು ಯಾವುದೇ ವಿಷಯವನ್ನು ಉತ್ತರ ಕೀಗಳನ್ನು ಬಿಡುಗಡೆ ಮಾಡಿಲ್ಲ. ಧಾರವಾಡದ ಕವಿವಿ, ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ತಮ್ಮ ನೇಮಕಾತಿ ಪರೀಕ್ಷೆ ನಂತರ ಉತ್ತರ ಕೀಗಳನ್ನು ವೆಬ್‌ಸೈಟ್‌ಗೆ ಬಿಟ್ಟಿವೆ. ದಾವಿವಿ ಏಕೆ ಬಿಟ್ಟಿಲ್ಲ ಎಂದು ಅವರು ಪ್ರಶ್ನಿಸಿದರು.
ಲಿಖಿತ ಪರೀಕ್ಷೆ ಉತ್ತರ ಕೀಗಳನ್ನು ಬಿಡುಗಡೆ ಮಾಡದೇ ದಾವಿವಿ ಕುಲ ಸಚಿವರು ಲಿಖಿತ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಸ್ಕೋರ್ ಕಾರ್ಡ್ ಕಳಿಸಿದ್ದು, ಇದರಲ್ಲಿ ಪ್ರಮುಖ ಟಿಪ್ಪಣಿಯಾಗಿ ‘ಯಾವುದೇ ಭಿನ್ನಾಭಿಪ್ರಾಯವಿದ್ದಲ್ಲಿ ಅಭ್ಯರ್ಥಿಗಳು ಸ್ಕೋರ್ ಕಾರ್ಡ್ ನೀಡಿದ ದಿನದಿಂದ 7 ದಿನದಲ್ಲಿ ಸಂಬಂಧಿಸಿದ ಪ್ರಾಧಿಕಾರ ಸಂಪರ್ಕಿಸುವ ಹಕ್ಕಿದೆ. ರಸಾಯನಶಾಸ್ತ್ರ ವಿಭಾಗಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆ.2ರ ಸಂಜೆ 5.30ರ ನಂತರ ಸ್ಕೋರ್ ಕಾರ್ಡ್ ಕಳಿಸಿದ್ದು, ಈ ವಿಭಾಗದ ಅಭ್ಯರ್ಥಿಗಳಿಗೆ ಆ.9ರ ಒಳಗಾಗಿ ಲೋಪದೋಷವಿದ್ದಲ್ಲಿ ಸಂಪರ್ಕಿಸಲು ಆದೇಶಿಸಿದೆ. ಈ ಸಮಯದಲ್ಲಿ ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ಬಳಲುತ್ತಿದ್ದು, ಎಷ್ಟೋ ಅಭ್ಯರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವಿರಲಿ ವಿದ್ಯುತ್ ಸಹ ಸಿಗದಂತೆ ಅತಂತ್ರರಾಗಿದ್ದರು. ಕೇವಲ 6 ಕೆಲಸದ ದಿನಗಳನ್ನು ಮಾತ್ರ ದಾವಿವಿ ನೀಡಿತ್ತು ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಅಧಿಕಾರಿಗಳು ಎಲ್ಲಾ ನೇಮಕಾತಿ ಮಾರ್ಗಸೂಚಿಗಳನ್ನುಗಾಳಿಗೆ ತೂರಿದ್ದು, ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪಾರದರ್ಶಕತೆ ಕಾಪಾಡದಿರುವುದು ಸ್ಪಷ್ಟವಾಗುತ್ತದೆ. ದಾವಿವಿ ಪ್ರಮುಖರೊಬ್ಬರ ಪತ್ನಿಯನ್ನೂ ಇದೇ ರೀತಿ ನೇಮಕ ಮಾಡಿರುವ ಮಾತು ಕೇಳಿ ಬರುತ್ತಿದೆ ಎಂದು ಆರೋಪಿಸಿದರು.
ಸಂದರ್ಶನದ ಮೊದಲು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಿದ ಎಲ್ಲಾ ಅಭ್ಯರ್ಥಿಗಳ ಅರ್ಹತಾ ಪಟ್ಟಿನೇಮಕಾತಿ ಮಾರ್ಗಸೂಚಿಗೆ ಅನುಗುಣವಾಗಿಲ್ಲ. ಅದನ್ನೆಲ್ಲಾ ಮರೆಮಾಚಲು ದಾವಿವಿ ಒಟ್ಟು ಅಂಕಗಳನ್ನು ಅರ್ಹತಾ ಪಟ್ಟಿಯಲ್ಲಿ ಪ್ರದರ್ಶಿಸಿದೆ. ಕೆಲ ವಿಷಯಗಳ ಸಂದರ್ಶನಗಳು ಬಹಳ ಕಡಿಮೆ ಅವಧಿಯಲ್ಲಿ ನಡೆದಿದ್ದು, ಸಂದರ್ಶನಕ್ಕೆ ಹಾಜರಾಗಲು ಕನಿಷ್ಟನಾಲ್ಕೈದು ದಿನ ನೀಡಿಲ್ಲ.
ದಾವಣಗೆರೆ: ಅಡ್ಮಿಶನ್ ವೇಳೆ ಪೋಷಕರಿಂದ ಎಕ್ಸಾಂ..! ಶಿಕ್ಷೆಯಾಗುತ್ತೆ ಹುಷಾರ್
ಕುಲ ಸಚಿವರು ಕಳಿಸಿದ ಸಂದರ್ಶನ ಪತ್ರಗಳು ಅಂಚೆ ಮೂಲಕ ಸಂದರ್ಶನದ ನಂತರ ಅಭ್ಯರ್ಥಿಗಳಿಗೆ ತಲುಪಿವೆ. ಇದರಿಂದ ದಾವಿವಿ ಕುಲಪತಿಗಳು, ಕುಲ ಸಚಿವರು ತಮ್ಮದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಒಲವು ತೋರಿದ್ದು ಸ್ಪಷ್ಟವಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಎಲ್ಲಾ ನೇಮಕಾತಿ ರದ್ಧುಪಡಿಸಿ, ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಾವೇರಿಯ ಜಾನಪದ ವಿವಿ ಕನ್ನಡ ಪ್ರಾಧ್ಯಾಪಕ ಡಾ.ಎಸ್.ನಾಗರಾಜ ಇದ್ದರು.