ಇತ್ತೀಚೆಗೆ ಕೇರಳದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ದಾಕ್ಷ್ಯಿಣ್ಯವಾಗಿ ನೆಲಸಮ ಮಾಡಿದ ಘಟನೆ ಎಲ್ಲರಿಗೂ ಗೊತ್ತಿದೆ. ಈಗ ಕೋಲಾರದಲ್ಲಿಯೂ ಇಂತಹದೇ ಘಟನೆ ನಡೆದಿದೆ. ಸರ್ಕಾರಿ ಜಾಗದಲ್ಲಿ ಯಾವುದೇ ದಾಖಲೆಗಳಿಲ್ಲದ ಪಾಯ ಮತ್ತು ಮನೆಗಳನ್ನು ನಿರ್ಮಾಣ ಹಂತದಲ್ಲಿದ್ದ ಮನೆಗಳನ್ನು ಕೋಲಾರ ಜಿಲ್ಲಾ ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಅವರ ಸಮ್ಮುಖದಲ್ಲಿ ಜೆಸಿಬಿ ಸಹಾಯದಿಂದ ನೆಲಸಮಗೊಳಿಸಲಾಯಿತು.
ಕೋಲಾರ(ಜ.15): ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾಮದ ಸರ್ಕಾರಿ ಜಾಗ ಸರ್ವೆ 73ರಲ್ಲಿ ಈ ಸ್ಥಳದಲ್ಲಿ ಯಾವುದೇ ದಾಖಲೆಗಳಿಲ್ಲದ ಪಾಯ ಮತ್ತು ಮನೆಗಳನ್ನು ನಿರ್ಮಾಣ ಹಂತದಲ್ಲಿದ್ದ ಮನೆಗಳನ್ನು ಕೋಲಾರ ಜಿಲ್ಲಾ ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಅವರ ಸಮ್ಮುಖದಲ್ಲಿ ಜೆಸಿಬಿ ಸಹಾಯದಿಂದ ನೆಲಸಮಗೊಳಿಸಲಾಯಿತು.
ಎರಡು ದಿನಗಳ ಹಿಂದೆ ಮಾಲೂರು ತಹಸೀಲ್ದಾರ್ ನಾಗವೇಣಿ ಹಾಗೂ ಇಒ ಕೃಷ್ಣಪ್ಪ ಅವರು ಈ ಸ್ಥಳಕ್ಕೆ ಬಂದು ಅಕ್ರಮವಾಗಿ ಮನೆ ಕಟ್ಟಿಕೊಳ್ಳುತ್ತಿದ್ದವರಿಗೆ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಳ್ಳಬಾರದೆಂದು ಮತ್ತು ಒಂದು ವೇಳೆ ಕಟ್ಟಿದರೆ ಅದನ್ನು ನೆಲಸಮಗೊಳಿಸುವುದಾಗಿ ಹೇಳಿದ್ದರು. ಆದರೂ ಸಹ ಕೆಲವರು ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ ರಾತ್ರೋರಾತ್ರಿ ಮನೆ ಕಟ್ಟಲು ಪ್ರಾರಂಭಿಸಿದ್ದರಿಂದ ಇಂದು ಎ.ಸಿ ರವರ ಸಮ್ಮುಖದಲ್ಲಿ, ತಹಸೀಲ್ದಾರ್ ನಾಗವೇಣಿರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮೊದಲ ಹಂತ ಕೈಗೆತ್ತಿಕೊಳ್ಳಲಾಯಿತು.
ಮಾವು ಬೆಳೆಯನ್ನು ಕೀಟಗಳಿಂದ ರಕ್ಷಿಸಲು ಹೀಗೆ ಮಾಡಿ..!
ಈ ಸಂದರ್ಭದಲ್ಲಿ ಮನೆ ಕೆಲಸ ಪ್ರಾರಂಭಿಸಿದ್ದವರು ಪಂಚಾಯಿತಿ ನೀಡಿರುವ ದಾಖಲೆ ನಮ್ಮಲ್ಲಿ ಇವೆ ಎಂದು ತೋರಿಸಿದರು. ಆಗ ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ಶಾಲಿನಿರವರಿಗೆ ಮತ್ತು ತಾಪಂ ಇಒ ಕೃಷ್ಣಪ್ಪನವರಿಗೆ ಪರಿಶೀಲನೆಗೆ ಒಪ್ಪಿಸಿದರು. ನಂತರ ಪರಿಶೀಲಿಸಿದಾಗ ಅನೇಕ ದಾಖಲೆಗಳು ಅಧಿಕೃತವಾದುದ್ದಲ್ಲವೆಂದು ತಿಳಿದು ಬಂದಿದ್ದರಿಂದ ನಿರ್ಮಿಸಿದ್ದ ಅಡಿಪಾಯ ಹಾಗೂ ಮನೆಗಳನ್ನು ನೆಲಸಮಗೊಳಿಸಲಾಯಿತು.
ನಗರಸಭೆಗೆ ಫೆ.9ಕ್ಕೆ ಚುನಾವಣೆ, ಎಲ್ಲೆಲ್ಲಿ ಮತದಾನ..?
ಬಳಿಕ ಎಸಿ ಸೋಮಶೇಖರ್ ಅವರು ಮಾತನಾಡಿ, 73 ಸರ್ವೆ ನಂಬರಿನಲ್ಲಿ ಪಾಯ ಹಾಕಿಕೊಂಡಿರುವವರು, ಪಕ್ಕ ಮನೆಕಟ್ಟಿಕೊಂಡಿರುವವರ ಗುಡಿಸಲುಗಳಲ್ಲಿ ವಾಸಿಸುತ್ತಿರುವವರು ನಿವೇಶನ ರಹಿತರೆ, ವಸತಿ ಹೀನರೆ ಅಥವಾ 94 ಸಿನಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬ ದಾಖಲೆಗಳನ್ನು ಸಂಗ್ರಹಿಸಿ, ಅರ್ಹತೆ ಇರುವ ಫಲಾನುಭವಿಗಳ ಪಟ್ಟಿತಯಾರಿಸಿ ಗ್ರಾಮ ಪಂಚಾಯಿತಿಗೆ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ತಹಸೀಲ್ದಾರ್ ನಾಗವೇಣಿ ಅವರು ಈ ಸರ್ವೆ ನಂಬರಿನಲ್ಲಿ ಸರ್ಕಾರಿ ಇಲಾಖೆಗಳ ಕೆಲವು ಕಚೇರಿಗಳಿಗೆ ಜಾಗ ಮೀಸಲಾಗಿದ್ದು, ಅವುಗಳಿಗೆ ಸರ್ವೆ ಕಾರ್ಯದಲ್ಲಿ ಹದ್ದುಬಸ್ತು ಪೂರ್ಣಗೊಂಡ ನಂತರ ಖಾಲಿಜಾಗ ಉಳಿದರೆ ಅರ್ಹ ಕಡುಬಡವರಿಗೆ ಗ್ರಾಪಂ ಶಿಫಾರಸ್ಸು ಮಾಡಿದ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ನೆರೆದಿದ್ದ ಜನರಿಗೆ ತಿಳಿಸಿದ್ದಾರೆ.
ಸಂಕ್ರಾಂತಿ ಸಂಭ್ರಮ: ಈ ಊರಲ್ಲಿ ದನಗಳ ಮೆರವಣಿಗೆಗೆ ಖರ್ಚು ಮಾಡೋದು ಲಕ್ಷ ಲಕ್ಷ..!
ಬಳಿಕ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಸರ್ವೆ ನಂಬರ್ 73 ಸರ್ಕಾರಿ ಜಮೀನು ಆದರೆ ಈ ನಂಬರಿನಲ್ಲಿ ನಿರ್ಮಿಸಿರುವ ಎಲ್ಲ ಮನೆಗಳನ್ನು ತೆರವುಗೊಳಿಸಿ ಅದು ಬಿಟ್ಟು ಬಡವರು ನಿರ್ಮಿಸಿರುವ ಎಲ್ಲ ಮನೆಗಳನ್ನು ನೆಲಸಮಗೊಳಿಸುವುದು ಸರಿಯಲ್ಲವೆಂದು ಎಸಿ ಸೋಮಶೇಖರ್‌ರವರಿಗೆ ಮನವಿ ಮಾಡಿಕೊಂಡಿದ್ದಾರೆ.