ಅಕ್ರಮ ಜಾನುವಾರು ಸಾಗಾಟ: ವಾಹನ ಸಮೇತ ಪೊಲೀಸ್ ಠಾಣೆಗೆ ಕರೆತಂದ ಹಿಂದುಪರ ಸಂಘಟನೆಗಳು

By Ravi JanekalFirst Published Jun 25, 2023, 8:56 AM IST
Highlights

: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವೇಳೆ ಹಿಂದುಪರ ಸಂಘಟನೆಗಳು ಅಡ್ಡಗಟ್ಟಿ ವಾಹನ ಸಮೇತ ಪೊಲೀಸ್ ಠಾಣೆಗೆ ಕರೆತಂದ ಘಟನೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ (ಜೂ.25) : ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವೇಳೆ ಹಿಂದುಪರ ಸಂಘಟನೆಗಳು ಅಡ್ಡಗಟ್ಟಿ ವಾಹನ ಸಮೇತ ಪೊಲೀಸ್ ಠಾಣೆಗೆ ಕರೆತಂದ ಘಟನೆ ನಗರದಲ್ಲಿ ನಡೆದಿದೆ.

ಯಾವುದೇ ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಾಟ ಮಾಡಲಾಗತ್ತು. ಈ ವೇಳೆ ಹಿಂದುಪರ ಕಾರ್ಯಕರ್ತರು ಅನುಮಾನಗೊಂಡು ವಾಹನ ತಡೆದಿದ್ದಾರೆ. ಈ ವೇಳೆ ವಾಹನದೊಳಗೆ ಆರೋಗ್ಯವಂತ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಸಂಘಟನೆ ಸದಸ್ಯರು ವಾಹನ ತಡೆದಿದ್ದಲ್ಲದೇ ವಾಹನ ಜಾನುವಾರಗಳ ಸಮೇತ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. 

Latest Videos

ನಗರದಲ್ಲಿ ಆರೋಗ್ಯವಂತ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುವ ಜಾಲವಿದ್ದು ಪೊಲೀಸರು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸುವಂತೆ ಭಜರಂಗದಳದ ಕಾರ್ಯಕರ್ತರು ಆಗ್ರಹಿಸಿದರು. ಸದ್ಯ ಈ ಘಟನೆ ಸಂಬಂದ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ: ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳ ರಕ್ಷಣೆ, ಆರೋಪಿಗಳು ವಶಕ್ಕೆ

‘ಗೋವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ’

ಗುಡಿಬಂಡೆ: ಭವ್ಯ ಪರಂಪರೆಯೊಂದಿರುವ ಭಾರತದಲ್ಲಿ ಗೋವುಗಳಿಗೆ ಪುರಾಣಗಳಿಂದ ದೇವರ ಸ್ಥಾನವನ್ನು ನೀಡಲಾಗಿದೆ. ಅದರಂತೆ ಎಲ್ಲರೂ ನಾವೆಲ್ಲರೂ ಗೋವುಗಳ ರಕ್ಷಣೆ ಮುಂದಾಗಬೇಕು ಎಂದು ಕರ್ನಾಟಕ ಬ್ಯಾಂಕ್‌ನ ನಿವೃತ್ತ ಮುಖ್ಯ ವ್ಯವಸ್ಥಾಪಕ ಶಿವಕುಮಾರ್‌ ಸಲಹೆ ನೀಡಿದರು. ತಾಲೂಕಿನ ನಡುವನಹಳ್ಳಿ ಗ್ರಾಮದ ಬಳಿಯಿರುವ ನಮ್ಮ ನಾಡು ಗೋ ಶಾಲೆಯಲ್ಲಿ ದಾನಿಗಳಿಂದ ನೂತನವಾಗಿ ನಿರ್ಮಾಣ ಮಾಡಿರುವ ಗೋಕುಲ ನಿಲಯಂ ಎಂಬ ಗೋ ಸಾಕಾಣಿಕೆ ಶೆಡ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಡಿಬಂಡೆ ಸಮೀಪವಿರುವ ಈ ನಮ್ಮ ನಾಡು ಗೋ ಶಾಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಗೋವುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಸ್ಥಳೀಯ ಗ್ರಾಮ ವಿಕಾಸ ಸಂಸ್ಥೆಯವರು ನಮ್ಮನ್ನು ಸಂಪರ್ಕ ಮಾಡಿ ಗೋಶಾಲೆಗೆ ಸಹಾಯಸ್ತ ನೀಡುವಂತೆ ತಿಳಿಸಿದ್ದರು. ಅದರಂತೆ ನಮ್ಮ ಸಹಾಯ ಮಾಡಿದ್ದಾಗಿ ತಿಳಿಸಿದರು. ಕೃಷಿ ಸಂಯೋಜಕ ವಾಹಿನಿ ಸುರೇಶ್‌, ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್‌ ಸಾಗರ್‌, ಪ್ರಗತಿಪರ ರೈತ ಮೇಡಿಮಾಕಲಹಳ್ಳಿ ಲಕ್ಷ್ಮೀನಾರಾಯಣರೆಡ್ಡಿ, ಮತ್ತಿತರರು ಇದ್ದರು.

ಗೋರಕ್ಷಣೆ ಹೆಸರಲ್ಲಿ ಕಸಾಯಿಖಾನೆಗೆ ಗೋವು: ಆರೋಪ

click me!