'ಡಿಕೆಶಿಗೆ ತಾಕತ್ತಿರಬಹುದು, ಅತಿಮಾನುಷ ಶಕ್ತಿ ಇಲ್ಲ'..!

Published : Sep 26, 2019, 02:33 PM ISTUpdated : Sep 26, 2019, 02:54 PM IST
'ಡಿಕೆಶಿಗೆ ತಾಕತ್ತಿರಬಹುದು, ಅತಿಮಾನುಷ ಶಕ್ತಿ ಇಲ್ಲ'..!

ಸಾರಾಂಶ

ಡಿ. ಕೆ. ಶಿವಕುಮಾರ್ ಅವರಿಗೆ ತಾಕತ್ತು ಇಲ್ಲ ಅಂತ ಹೇಳಲ್ಲ, ಆದರೆ ಅತಿಮಾನುಷ ಶಕ್ತಿ ಇದೆ ಅಂತ ನಾನು ಭಾವಿಸುವುದಿಲ್ಲ. ಅವರು ಜೈಲಿನಿಂದ ಹೊರಗೆ ಇದ್ದಾಗ 25 ಪಾರ್ಲಿಮೆಂಟ್‌ ಸೀಟ್‌ ಗೆದ್ದಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಕೆಶಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ತುಮಕೂರು(ಸೆ. 26) : ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಅತಿಮಾನುಷ ಶಕ್ತಿ ಇದೆ ಅಂತ ಭಾವಿಸಿದರೆ ಅದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ತಾಕತ್ತು ಇಲ್ಲ ಅಂತ ಹೇಳಲ್ಲ, ಆದರೆ ಅತಿಮಾನುಷ ಶಕ್ತಿ ಇದೆ ಅಂತ ನಾನು ಭಾವಿಸುವುದಿಲ್ಲ. ಅವರು ಜೈಲಿನಿಂದ ಹೊರಗೆ ಇದ್ದಾಗ 25 ಪಾರ್ಲಿಮೆಂಟ್‌ ಸೀಟ್‌ ಗೆದ್ದಿದ್ದೇವೆ. ಹಾಗೆಯೇ ಅವರ ಹೊರಗಡೆ ಇದ್ದಾಗ 104 ಅಸೆಂಬ್ಲಿ ಸೀಟುಗಳನ್ನು ಗೆದ್ದಿದ್ದೇವೆ ಎಂದು ಹೇಳಿದ್ದಾರೆ.

ಮೈಸೂರು: ಡಿಕೆಶಿ ಒಳಿತಿಗಾಗಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ

ಅಷ್ಟಕ್ಕೂ ಅವರು ಹೊರಗಡೆ ಇದ್ದಾಗ ಅವರ ಜಿಲ್ಲೆಯಲ್ಲಿ ಅವರು ಗೆದ್ದಿದ್ದು ಕೇವಲ ಒಂದು ಸೀಟು ಮಾತ್ರ. ಅದು ಅವರು ಮಾತ್ರ ಎಂದು ಟೀಕಿಸಿದ್ದಾರೆ. ಡಿ.ಕೆ ಶಿವಕುಮಾರ್‌ ಜಾಮೀನು ಅರ್ಜಿ ವಜಾ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೋರ್ಟ್‌ ತನ್ನ ಕಾರ್ಯವನ್ನು ಮಾಡುತ್ತದೆ. ಜಾಮೀನು ಕೊಡುವುದು ಇಡಿ ಕೋರ್ಟ್‌, ಜಾಮೀನು ವಜಾ ಮಾಡೋದು ಕೂಡ ಇಡಿ ಕೋರ್ಟ್‌ ಎಂದರು.

ತುಮಕೂರು: ರೈತರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಗಳು ಬೋನಿಗೆ

PREV
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!