ಹೈಕಮಾಂಡ್‌ ಒಪ್ಪಿದರೆ ಲೋಕಸಭೆಗೆ ಸ್ಪರ್ಧೆ

Published : Jun 10, 2023, 06:07 AM IST
 ಹೈಕಮಾಂಡ್‌ ಒಪ್ಪಿದರೆ ಲೋಕಸಭೆಗೆ ಸ್ಪರ್ಧೆ

ಸಾರಾಂಶ

ಹೈಕಮಾಂಡ್‌ ಸೂಚಿಸಿದರೆ ಕಾಂಗ್ರೆಸ್‌ನಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಮಾಜಿ ಸಚಿವ ವೆಂಕಟರಮಣಪ್ಪ ಹಿರಿಯ ಪುತ್ರ ಹಾಗೂ ಕಾಂಗ್ರೆಸ್‌ ಮುಖಂಡ ಎಚ್‌.ವಿ.ಕುಮಾರಸ್ವಾಮಿ ತಿಳಿಸಿದರು.

 ಪಾವಗಡ :  ಹೈಕಮಾಂಡ್‌ ಸೂಚಿಸಿದರೆ ಕಾಂಗ್ರೆಸ್‌ನಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಮಾಜಿ ಸಚಿವ ವೆಂಕಟರಮಣಪ್ಪ ಹಿರಿಯ ಪುತ್ರ ಹಾಗೂ ಕಾಂಗ್ರೆಸ್‌ ಮುಖಂಡ ಎಚ್‌.ವಿ.ಕುಮಾರಸ್ವಾಮಿ ತಿಳಿಸಿದರು. ಪಾವಗಡದ ಮುಖಂಡ ಹಾಗೂ ಗುತ್ತಿಗೆದಾರ ರೊಪ್ಪ ಬಾಲಾಜಿಗೆ ಸೇರಿದ ನೂತನ ಮನೆಯ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ವೇಲ್‌ರಾಜ್‌, ಹೊಸಕೋಟೆ ಶಂಷುದ್ದೀನ್‌,ಮುಖಂಡರಾದ ಆರ್‌.ಎ.ಹನುಮಂತರಾಯಪ್ಪ ಮುಂತಾದವರು ಭಾಗಿಯಾಗಿದ್ದರು.
ಅವರ ಯೋಜನೆಗಳು ಗೊಂದಲಮಯವಾಗಿದೆ

ಧಾರವಾಡ (ಜೂ.10): ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಯಾರಿಗೂ ಸಿಗದಂತೆ ಹೊಸ ಹೊಸ ಷರತ್ತುಗಳನ್ನು ಹಾಕುತ್ತಿದ್ದು ಅವರ ಯೋಜನೆಗಳು ಗೊಂದಲಮಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಿಸಿದ ಎಲ್ಲ ಐದೂ ಗ್ಯಾರಂಟಿಗಳಿಗೆ ದಿನದಿಂದ ದಿನಕ್ಕೆ ಹೊಸ ಹೊಸ ಷರತ್ತುಗಳನ್ನು ಹಾಕಲಾಗುತ್ತಿದೆ. ಇದೀಗ ಗೃಹಲಕ್ಷ್ಮೀಗೂ ಹೊಸ ಕಂಡಿಷನ್‌ ಹಾಕಿದೆ. ಈ ಮೂಲಕ ಯಾರಿಗೂ ಯೋಜನೆ ಸಿಗದಂತೆ ಹುನ್ನಾರ ಮಾಡಲಾಗುತ್ತಿದೆ. 

ಎಲ್ಲ ಗ್ಯಾರಂಟಿಗಳಲ್ಲಿ ಸುಳ್ಳು ಹೇಳಲಾಗುತ್ತಿದೆ. ಈ ಮೂಲಕ ಜನರ ದಾರಿ ತಪ್ಪಿಸಿ ಮತ ಗಿಟ್ಟಿಸಿಕೊಂಡಿದ್ದೀರಿ ಎಂದು ಟೀಕಿಸಿದರು. ಸಿದ್ದರಾಮಯ್ಯನವರು ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹತ್ತು ಕೆಜಿಯಲ್ಲಿ ಐದು ಕೇಂದ್ರ ಕೇಂದ್ರ ಸರ್ಕಾರ ನೀಡುತ್ತಿರುವುದು. ಆಹಾರ ಭದ್ರತಾ ಕಾಯ್ದೆ ಅಡಿ ರಾಜ್ಯಕ್ಕೆ ನೀಡಲಾಗುತ್ತಿದೆ. ಈ ವಿಷಯವನ್ನು ರಾಜ್ಯದ ಜನತೆಗೆ ಸ್ಪಷ್ಟವಾಗಿ ಸಿದ್ದರಾಮಯ್ಯನವರು ಹೇಳಬೇಕು. ಇಲ್ಲವಾದರೆ ಕೇಂದ್ರದ ಅಕ್ಕಿ ಬೇಡ ಎಂದು ಹೇಳಿ. ಈ ರೀತಿ ಸುಳ್ಳು ಹೇಳಬೇಡಿ ಎಂದರು.

108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್‌ ಗುಂಡೂರಾವ್‌

ಚಕ್ರವರ್ತಿ ಸೂಲಿಬೆಲೆಗೆ ಎಂ.ಬಿ. ಪಾಟೀಲ್‌ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೋಶಿ, ಅವರು ಮಾತಾಡಿದ ಭಾಷೆ ಬಗ್ಗೆ ಕ್ಷಮೆ ಕೇಳಬೇಕು. ಮೋದಿಯವರಿಗೆ ಅಯೋಗ್ಯವಾದ ಭಾಷೆ ಬಳಸಿದ್ದರು. ಆಗಲೂ ಕೇಂದ್ರದಲ್ಲಿ ನಮ್ಮ ಸರ್ಕಾರವಿತ್ತು. ಆಗಲೂ ನಾವು ಸಂಯಮದಿಂದ ವರ್ತಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣೆಗಳು ಸಹಜ. ಇವರು ಮಾಡುತ್ತಿರುವುದನ್ನು ನೋಡಿ ಹಿಟ್ಲರ್‌ ಸರ್ಕಾರ ಎಂದು ಚಕ್ರವರ್ತಿ ಹೇಳಿದ್ದಾರೆ. ಅಷ್ಟಕ್ಕೇ ಜೈಲಿಗೆ ಹಾಕುತ್ತೇವೆ ಅಂದರೆ ಹೇಗೆ? ಇದು ದಾಷ್ಟ್ರ್ಯ, ದುರಹಂಕಾರದ ಮಾತು. ಕಾಂಗ್ರೆಸ್ಸಿನವರಿಗೆ ಪಿತ್ತ ನೆತ್ತಿಗೆ ಏರಿದೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಜನರು ಇದಕ್ಕೆ ಉತ್ತರ ಕೊಡುತ್ತಾರೆ. ಅಧಿ​ಕಾರದ ದುರಹಂಕಾರ ಬಂದಾಗ ಹೀಗಾಗುತ್ತದೆ ಎಂದರು.

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು