ಆಪ್‌ ಗೆದ್ದರೆ ಸರ್ಕಾರಿ ಸೌಲಭ್ಯ ಮನೆ ಬಾಗಿಲಿಗೆ

By Kannadaprabha News  |  First Published Jan 22, 2023, 5:28 AM IST

ಆಮ್‌ ಆದ್ಮಿ ಪಕ್ಷಕ್ಕೆ ಮತ ಹಾಕಿದರೆ ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ, ಉಚಿತ ವಿದ್ಯುತ್‌, ಉಚಿತ ನೀರು ಹಾಗೂ ನಿಮ್ಮ ಮನೆಯ ಬಾಗಿಲಿಗೆ ಸರ್ಕಾರಿ ಸೇವೆಗಳು ಬರಲಿವೆ ಎಂದು ಶಿರಾ ವಿಧಾನಸಭಾ ಆಮ್‌ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ತಾಲೂಕು ಅಧ್ಯಕ್ಷರಾದ ಶಶಿಕುಮಾರ್‌.ಆರ್‌ ಹೇಳಿದರು.


 ಶಿರಾ :  ಆಮ್‌ ಆದ್ಮಿ ಪಕ್ಷಕ್ಕೆ ಮತ ಹಾಕಿದರೆ ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ, ಉಚಿತ ವಿದ್ಯುತ್‌, ಉಚಿತ ನೀರು ಹಾಗೂ ನಿಮ್ಮ ಮನೆಯ ಬಾಗಿಲಿಗೆ ಸರ್ಕಾರಿ ಸೇವೆಗಳು ಬರಲಿವೆ ಎಂದು ಶಿರಾ ವಿಧಾನಸಭಾ ಆಮ್‌ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ತಾಲೂಕು ಅಧ್ಯಕ್ಷರಾದ ಶಶಿಕುಮಾರ್‌.ಆರ್‌ ಹೇಳಿದರು.

ನಗರದ ಮಂಜುಶ್ರೀ ಕಂಫಟ್ಸ್‌ರ್‍ನಲ್ಲಿ ಏರ್ಪಡಿಸಿದ್ದ ಆಮ್‌ ಆದ್ಮಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಇತರೆ ಪಕ್ಷದ ಕಾರ್ಯಕರ್ತರನ್ನು ಆಮ್‌ ಆದ್ಮಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಆಮ್‌ ಆದ್ಮಿ ಪಕ್ಷಕ್ಕೆ ಯುವಕರು ಸ್ವಯಂ ಪ್ರೇರಿತರಾಗಿ ಸೇರ್ಪಡೆಯಾಗುತ್ತಿರುವುದು ಉತ್ತಮ ಕಾರ್ಯ. ಆದ್ದರಿಂದ ಮತದಾರರು ಹಣ, ಹೆಂಡಕ್ಕೆ ಮತಗಳನ್ನು ಮಾರಿಕೊಳ್ಳದೆ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸಿ, ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯಾಗುತ್ತೀರಿ ಎಂದರು.

Tap to resize

Latest Videos

ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಶ್ವನಾಥ್‌ ಮಾತನಾಡಿ, ಪಕ್ಷದಿಂದ 2023ನೇ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಈ ನಿಟ್ಟಿನಲ್ಲಿ ಮೇ ತಿಂಗಳಿಂದ ಗ್ರಾಮ ಸಂಪರ್ಕ ಅಭಿಯಾನ ಪ್ರಾರಂಭ ಮಾಡಿದ್ದೇವೆ. ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇವೆ. ಈಗ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಬೇರೆ ಪಕ್ಷದವರ ಬಳಿ ಇರುವುದು ಹಣ ಒಂದೇ ಬಂಡವಾಳ. ಹಣ ಖರ್ಚು ಮಾಡಿ ಚುನಾವಣೆ ಮಾಡುತ್ತಾರೆ. ಅವರಿಗೆ ರಾಜಕೀಯ ಒಂದು ವ್ಯವಹಾರವಾಗಿದೆ. ಪಂಜಾಬ್‌ನಲ್ಲಿ ಶೇ. 85 ರಷ್ಟುಗೆದ್ದಿರುವವರು ಯಾವುದೇ ಹಣ ಇಲ್ಲದೆ ಮೊದಲ ಬಾರಿಗೆ ಸ್ಪರ್ಧಿಸಿರುವವರು ಮಾತ್ರ. ದೆಹಲಿಯಲ್ಲಿ ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಇಂತಹ ಗುಣಮಟ್ಟದ ಶಿಕ್ಷಣ, ದೆಹಲಿಯಲ್ಲಿ ಎಲ್ಲಾ ವೈದ್ಯಕೀಯ ಚಿಕಿತ್ಸೆ ಉಚಿತವಾಗಿ ಸಿಗುತ್ತವೆ. ಕರ್ನಾಟಕದಲ್ಲಿ 2.50 ಲಕ್ಷ ಕೋಟಿ ರು. ಸಾಲ ಇದೆ. ಆದರೆ ದೆಹಲಿಯಲ್ಲಿ 9000 ಕೋಟಿಗಿಂತ ಹೆಚ್ಚು ಉಳಿಕೆ ಹಣ ಇದೆ. ಆದ್ದರಿಂದ ಎಲ್ಲರೂ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸಿ ಎಂದರು.

ಕಾರ್ಯಕ್ರಮದಲ್ಲಿ ನೂರಾರು ಮಂದಿ ಇತರೆ ಪಕ್ಷವನ್ನು ತೊರೆದು ಆಮ್‌ ಆದ್ಮಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಧುಸೂದನ್‌, ಪ್ರಶಾಂತ್‌, ನಾಗೇಶ್‌ ಬಾಬು, ಜಗದೀಶ್‌ ಸೇರಿದಂತೆ ಹಲವರು ಹಾಜರಿದ್ದರು.

ಉಚಿತ ವಿದ್ಯುತ್ ಇಲ್ಲ

ಬೆಂಗಳೂರು(ಜ.21): ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದು ಹಾಗೂ ನಿರುದ್ಯೋಗ ಗೃಹಿಣಿಗೆ ಮಾಸಿಕ 2000 ರು. ನೀಡುವ ಭರವಸೆಯು ಆದಾಯ ತೆರಿಗೆ ಪಾವತಿದಾರರಿಗೆ ಅನ್ವಯಿಸುವುದಿಲ್ಲ ಎಂದು ಇದೇ ವೇಳೆ ಬಿ.ಕೆ.ಹರಿಪ್ರಸಾದ್‌ ಸ್ಪಷ್ಟಪಡಿಸಿದರು.

ಆದಾಯ ತೆರಿಗೆ ಪಾವತಿಸುವವರನ್ನು ಬಿಟ್ಟು ಉಳಿದೆಲ್ಲಾ ಕುಟುಂಬಗಳಿಗೂ ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಉಚಿತ ವಿದ್ಯುತ್‌ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 2 ಲಕ್ಷ ರೈತರ ಸಾಲಮನ್ನಾ ಹಣ ಬಿಡುಗಡೆ: ಎಚ್‌ಡಿಕೆ

ಸಾಲು ಸಾಲು ಉಚಿತ ಯೋಜನೆಗಳನ್ನು ಘೋಷಿಸುತ್ತಿದ್ದಿರುವ ಕಾಂಗ್ರೆಸ್‌ ಅದಕ್ಕೆಲ್ಲಾ ಹಣಕಾಸು ಎಲ್ಲಿಂದ ತರುತ್ತದೆ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಹಣಕಾಸಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದರ ಇತಿ ಮಿತಿಯಲ್ಲಿ ಯಾವೆಲ್ಲಾ ಜನಸ್ನೇಹಿ ಕಾರ್ಯಕ್ರಮಗಳನ್ನು ಕೊಡಬಹುದೋ ಅದನ್ನು ಘೋಷಿಸಲಾಗುತ್ತಿದೆ. ನಾವು ಘೋಷಿಸುತ್ತಿರುವ ಎಲ್ಲ ಯೋಜನೆಗಳನ್ನೂ ನೀಡುವಷ್ಟುಆರ್ಥಿಕ ಸಂಪತ್ತು ರಾಜ್ಯದಲ್ಲಿದೆ. ಇದಲ್ಲದೆ ಹೋಗಿದ್ದರೆ 13 ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರಂತಹವರು ಇದನ್ನು ಒಪ್ಪುತ್ತಿರಲಿಲ್ಲ ಎಂದು ಹೇಳಿದ

click me!