ಸರಕು ತುಂಬುವ ವಾಹನಗಳಲ್ಲಿ ಜನರನ್ನು ತುಂಬಿಸಿಕೊಂಡು ಹೋಗ್ತೀರಾ..? ಪ್ರತಿಭಟನೆಗೆ, ಮದುವೆಗೆ ಹೋಗ್ಬೇಕಾದ್ರೆ ಖರ್ಚು ಕಡಿಮೆ ಮಾಡೋಕೆ ಲಾರಿಗಳಲ್ಲಿ, ಟಾಟಾಏಸ್ ಸೇರಿ ಮಿನಿ ವಾಹನಗಳಲ್ಲಿ ಕರೆದೊಯ್ದರೆ ಜೀವಮಾನವಿಡೀ ವಾಹನಗಳ ಸ್ಟೇರಿಂಗ್ ಹಿಡಿಯುವ ಅವಕಾಶ ವನ್ನೇ ಕಳೆದುಕೊಳ್ಳಬೇಕಾಗುತ್ತದೆ.
ಚಿತ್ರದುರ್ಗ(ಸೆ.11): ಮದುವೆ ಇದೆ ಅಂತ ಲಾರಿಗಳಲ್ಲಿ ಜನರ ತುಂಬಿಕೊಂಡು ಹೋಗೋದು, ರಾಜಕೀಯ ಸಮಾವೇಶ ಇಲ್ಲವೇ ಯಾವುದಾದರೂ ಪ್ರತಿಭಟನೆಗಳಿಗೆ ಕಾರ್ಯಕರ್ತರ ಟಾಟಾಏಸ್ ಸೇರಿ ಮಿನಿ ವಾಹನಗಳಲ್ಲಿ ಕರೆದೊಯ್ಯುವುದು, ಕೂಲಿಕಾರರ ತುಂಬಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಲಾರಿಯಲ್ಲಿ ಹೋಗುವ ಅಭ್ಯಾಸಗಳಿದ್ದರೆ, ಇಂದೇ ಮರೆತು ಬಿಡಿ.
ಕಡಿಮೆ ಖರ್ಚು ಆಗುತ್ತೆ ಅನ್ನೋ ಕಾರಣಕ್ಕೆ ಸರಕು ತುಂಬುವ ವಾಹನಗಳಲ್ಲಿ ಪ್ರಯಾಣಿಕರ ಕರೆದೊಯ್ದರೆ ಜೀವಮಾನವಿಡೀ ವಾಹನಗಳ ಸ್ಟೇರಿಂಗ್ ಹಿಡಿಯುವ ಅವಕಾಶ ವನ್ನೇ ಕಳೆದುಕೊಳ್ಳಬೇಕಾಗುತ್ತದೆ.
undefined
ಇಡಿ ವಶದಲ್ಲಿರುವ ಡಿಕೆಶಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮೋಟಾರು ವಾಹನ ಕಾಯ್ದೆ ಅಧಿನಿಯಮ 1988ಕ್ಕೆ ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಹಾಲಿ ಇದ್ದ ದಂಡದ ದರವನ್ನು ಹೆಚ್ಚಿಸಿದ ಪರಿಣಾಮ ಈ ಸಂಕಷ್ಟಗಳು ಎದುರಾಗಿವೆ. ಸರಕು ಸಾಗಾಣಿಕೆ ವಾಹನದಲ್ಲಿ ಜನರ ಒಯ್ದರೆ 5 ಸಾವಿರ ರು. ದಂಡ ಪಾವತಿಸುವುದಲ್ಲದೆ, ಚಾಲಕ ಡಿಎಲ್ ಕಳೆದುಕೊಳ್ಳಬೇಕಾಗುತ್ತದೆ. ಸಾಲದೆಂಬಂತೆ, ವಾಹನದ ಪರ್ಮಿಟ್, ಆರ್‌ಸಿ ಎಲ್ಲ ರದ್ದಾಗುತ್ತದೆ.
ಗ್ರಾಮದಿಂದ ಸಿಟಿಗೆ ಬರುವಾಗ ಲಾರಿಯಲ್ಲೇ ಬರ್ತಾರೆ:
ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಬಹುತೇಕ ಪ್ರಯಾಣಿಕರು ಇಂದಿಗೂ ಟಾಟಾಏಸ್ ನಂತರ ಸರಕು ಸಾಗಾಣಿಕೆ ವಾಹನ ಅವಲಂಬಿಸುತ್ತಿದ್ದಾರೆ. ಇಂತಹ ವಾಹನಗಳು ಅಪಘಾತವಾಗಿ ಸಾವು-ನೋವು ಗಳು ಸಂಭವಿಸಿದ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದಿವೆ. ಇನ್ಮೇಲೆ ಇಂತಹ ಚಟುವಟಿಕೆಗಳಿಗೆ ಹೊಸ ಮೋಟಾರು ಕಾಯ್ದೆ ಅವಕಾಶ ಮಾಡಿಕೊಡುವುದಿಲ್ಲ. ಅಪಾರ ಪ್ರಮಾಣದ ದಂಡ ವಿಧಿಸುವುದರ ಮೂಲಕ ನಿಯಂತ್ರಣ ಮಾಡುವ ಇರಾದೆ ಹೊಂದಲಾಗಿದೆ.
ಜಾನುವಾರುಗಳ ಸಾಗಾಟ ಮಾಡುವಂತಿಲ್ಲ:
ಸರಕು ಸಾಗಾಣಿಕೆ ವಾಹನಗಳಲ್ಲಿ ಜಾನುವಾರಗಳನ್ನೂ ಸಾಗಾ ಣಿಕೆ ಮಾಡುವಂತಿಲ್ಲ. ಇದಕ್ಕೂ ಇನ್ನು ಮುಂದೆ ಇದೇ ಕಾಯ್ದೆ ಅನ್ವಯ ಆಗುತ್ತದೆ. ಕುರಿಗಳ ಸಾಗಾಟಕ್ಕೆ ಶೀಪ್ ವ್ಯಾನ್ ಹಾಗೂ ಕುದುರೆಗಳ ಸಾಗಾಟಕ್ಕೆ ಹಾರ್ಸ್ ವ್ಯಾನಗಳಿವೆ. ಆದರೆ, ಜಾನುವಾರುಗಳಿಗೆ ಇಂತಹ ವ್ಯವಸ್ಥೆ ಇಲ್ಲದೆ ಇರುವುದರಿಂದ ಅಪಾರ ಪ್ರಮಾಣದ ದಂಡ ತೆರಬೇಕಾಗುತ್ತದೆ. ಜಾನುವಾರುಗಳ ಸಾಗಾಣಿಕೆ ಮಾಡಿದರೆ, ವಾಹನದ ಜೊತೆಗೆ ರೈತರೂ ತೊಂದರೆಗೆ ಸಿಲುಕಬೇಕಾಗುತ್ತದೆ.
ಡಿಕೆೆಶಿ ಬಂಧನ ವಿರೋಧಿಸಿ ಬೆಂಗಳೂರಲ್ಲಿ ಒಕ್ಕಲಿಗರ ಬೃಹತ್ ಪ್ರತಿಭಟನೆ
ಕಳೆದ ತಿಂಗಳು ಕೂಡ್ಲಗಿ ರೈತರು ಗುಬ್ಬಿಯಿಂದ ಹೋರಿಗಳನ್ನು ತುಂಬಿಕೊಂಡು ಬಂದು 10 ದಿನಗಳ ಕಾಲ ಪಟ್ಟ ಪರಿಪಾಟಲು ಯಾರೂ ಮರೆಯಲು ಸಾಧ್ಯವಿಲ್ಲ. ಜಾನುವಾರುಗಳ ಸಾಗಾಣಿಕೆಗೆ ಸಾರಿಗೆ ಕಾಯ್ದೆಯಷ್ಟೇ ಅಲ್ಲದೆ, ಕರ್ನಾಟಕ ಹಸುವಧೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಅನ್ನು ಎದುರಿಸಬೇಕಾಗುತ್ತದೆ. ಈ ಕಾಯ್ದೆ ಪ್ರಕಾರ ಸಮರ್ಥ ಪ್ರಾಧಿಕಾರದ ಪ್ರಮಾಣ ಪತ್ರವಿಲ್ಲದೆ ಹಸು, ಕರುವನ್ನು ಮಾರಾಟ, ಖರೀದಿ ಅಥವ ವಿಲೇ ಮಾಡುವುದನ್ನು ನಿಷೇಧಿಸಲಾಗಿದೆ.
'ಟೀ ಮಾರುತ್ತಿದ್ದ ಡಿಕೆಶಿ 800 ಕೋಟಿ ರೂ. ಗಳಿಸಿದ್ದು ಹೇಗೆ?'