ಜ್ಞಾನೇಂದ್ರ ಸ್ಪೀಕರ್ ಆದರೆ ನಾನು ಸಚಿವ : ಹಾಲಪ್ಪ

By Kannadaprabha News  |  First Published Aug 4, 2021, 7:27 AM IST
  • ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ - ಹರತಾಳು ಹಾಲಪ್ಪ
  •  ಶಿವಮೊಗ್ಗ ಜಿಲ್ಲೆಗೆ  ಎರಡು ಸಚಿವ ಸ್ಥಾನ ನಿಡಿದರೆ ಖಂಡಿತ ಅದರಲ್ಲಿ ನಾನಿರುತ್ತೇನೆ 

ಬೆಂಗಳೂರು (ಆ.04): ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಶಿವಮೊಗ್ಗ ಜಿಲ್ಲೆಗೆ  ಎರಡು ಸಚಿವ ಸ್ಥಾನ ನಿಡಿದರೆ ಖಂಡಿತ ಅದರಲ್ಲಿ ನಾನಿರುತ್ತೇನೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಹೇಳಿದರು. 

ಪಕ್ಷ ಅಳೆದು ತೂಗಿ ಸಚಿವ ಸಂಪುಟ ಕುರಿತು ತೀರ್ಮಾನಿಸುತ್ತದೆ. ಈಗಾಗಲೇ ಈ ಬಗ್ಗೆ ಹಲವು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ ಎಂದು ಮಂಗಳವಾರ ಶಾಸಕ ಹರತಾಳು ಹಾಲಪ್ಪ ಹೇಳಿದರು. 

Tap to resize

Latest Videos

ಬೆಂಗಳೂರು ಪ್ರಯಾಣ ರದ್ದು: ನೂತನ ಸಚಿವರ ಪಟ್ಟಿ ಹಿಡಿದು ಬರಲಿರುವ ಬೊಮ್ಮಾಯಿ

ಶಿವಮೊಗ್ಗ ಜಿಲ್ಲೆಯಲ್ಲಿ ನನಗಿಂತ ಹಿರಿಯರು ಈಶ್ವರಪ್ಪ ಹಾಗೂ ಜ್ಷಾನೇಂದ್ರ, ಆರಗ ಅವರು ಸ್ಪೀಕರ್ ಆದರೆ ನನಗೆ ಸಚಿವ ಸ್ಥಾನ ದೊರೆಯಲಿದೆ ಎಂದರು. 

ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆತರೆ ನನಗೂ ಸ್ಥಾನ ದೊರೆಯಲಿದೆ. ಶಿವಮೊಗ್ಗ ರಾಜಕೀಯವಾಗಿ ಪ್ರಮುಖ ಜಿಲ್ಲೆ ಹೀಗಾಗಿ ಎರಡು ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದರು. 

click me!