ಮೈಸೂರು: ಐಸ್‌ಕ್ರಿಂ ತಿನ್ನೋ ಸ್ಪರ್ಧೆ, ಮಕ್ಕಳದ್ದೇ ಕಾರುಬಾರು..!

By Kannadaprabha NewsFirst Published Oct 7, 2019, 10:28 AM IST
Highlights

ಮೈಸೂರು ದಸರಾ ಆಹಾರ ಮೇಳದಲ್ಲಿ ಹಲವು ತರದ ಸ್ಪರ್ಧೆಗಳನ್ನು ನಡೆಸಿದ್ದು, ಮಕ್ಕಳಿಗಾಗಿ ಐಸ್‌ಕ್ರೀಂ ತಿನ್ನುವ ಸ್ಪರ್ಧೆ ನಡೆದಿದೆ. 10 ರಿಂದ 15 ವರ್ಷದ ಮಕ್ಕಳು ಭಾಗವಹಿಸಿದ್ದ ಸ್ಪರ್ಧೆ ನೆರೆದಿದ್ದವರನ್ನು ರಂಜಿಸಿತು.

ಮೈಸೂರು(ಅ.07): ಬಿರುಬಿಸಿಲಿಗೆ ತತ್ತರಿಸುತ್ತಿದ್ದ ಮಕ್ಕಳು ಆಹಾರ ಮೇಳದಲ್ಲಿ ಭಾನುವಾರ ಐಸ್‌ ಕ್ರೀಂ ಸವಿದು ಕೂಲ್‌ ಆದರು. ಸ್ಪರ್ಧೆ ನೆರೆದಿದ್ದವರನ್ನು ರಂಜಿಸಿತು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದ 8ನೇ ದಿನ ನಡೆದ ಐಸ್‌ ಕ್ರೀಮ್‌ ತಿನ್ನುವ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು. ಸಾಲಾಗಿ ಕುಳಿತಿದ್ದ 10 ಮಂದಿ ಸ್ಪರ್ಧಿಗಳು ಒಂದು ನಿಮಿಷದ ಅವಧಿಯಲ್ಲಿ 65 ಎಂ.ಎಲ್‌ನ 3 ಕಪ್‌ ಐಸ್‌ ಕ್ರೀಮ್‌ ತಿನ್ನಲು ಆರಂಭಿಸಿದರು.

ಪ್ಯಾರಮೋಟರಿಂಗ್‌, ಹಾಟ್‌ ಬಲೂನ್‌ ಏರ್‌ ಶೋಗೆ ಚಾಲನೆ

10 ರಿಂದ 15 ವರ್ಷದ ಮಕ್ಕಳು ಭಾಗವಹಿಸಿದ್ದರಿಂದ ಸ್ಪರ್ಧೆ ಕುತೂಹಲದಿಂದ ಸಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ಭಾಗವಹಿಸಿದ್ದ ಮೈಸೂರಿನ ಗೀತಾ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಪ್ರಥಮ, ಹಾಸನದ ಎಸ್‌ಆರ್‌ಎಸ್‌ ಪ್ರಜ್ಞ ವಿದ್ಯಾಶಾಲೆಯ 7ನೇ ತರಗತಿಯ ವಿದ್ಯಾರ್ಥಿ ರಕ್ಷಿತ್‌ಗೌಡ ದ್ವಿತೀಯ ಮತ್ತು ದೀಪಕ್‌, ಹರ್ಷ, ಅಖಿಲ್ ಗೌಡ ತೃತೀಯ ಸ್ಥಾನ ಹಂಚಿಕೊಂಡರು.

ಮೈಸೂರು: ಕೇಕ್‌ ಮೆಲ್ಲಲು ಬಾಲಕಿಯರ ಪೈಪೋಟಿ

click me!