ಕಾರ‍್ಯಕರ್ತರಿಂದಲೇ ನನಗೆ ಗೆಲುವು: ಕೃಷ್ಣಪ್ಪ

By Kannadaprabha News  |  First Published May 21, 2023, 5:56 AM IST

ಮಾಜಿ ಶಾಸಕ ಮಸಾಲಾ ಜಯರಾಮ್‌ ಅವರಿಗೆ ಸೋಲಿನ ಹತಾಶಾ ಮನೋಭಾವ ಕಾಡುತ್ತಿರುವುದರಿಂದ ತಮ್ಮ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.


  ತುರುವೇಕೆರೆ :  ಮಾಜಿ ಶಾಸಕ ಮಸಾಲಾ ಜಯರಾಮ್‌ ಅವರಿಗೆ ಸೋಲಿನ ಹತಾಶಾ ಮನೋಭಾವ ಕಾಡುತ್ತಿರುವುದರಿಂದ ತಮ್ಮ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಆಕ್ರೋಶದ ಮಾತುಗಳನ್ನು ಆಡಿರುವುದು ಅವರಿಗೆ ಶೋಭೆ ತರುವುದಿಲ್ಲ. ತಮಗೆ ಮತ್ತು ತಮ್ಮ ಪಕ್ಷಕ್ಕೆ ಆಗಿರುವ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆ ಹೊರತು ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಚುನಾವಣೆ ಎಂದ ಮೇಲೆ ಸೋಲು ಮತ್ತು ಗೆಲುವು ಸಹಜ. ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸ್ವಾಭಿಮಾನಿಗಳು. ತಮ್ಮ ಪಕ್ಷದ ಪರವಾಗಿ ಹಗಲಿರುಳೂ ಹೋರಾಡಿ ತಮ್ಮನ್ನು ಗೆಲ್ಲಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಮೋಸವಾಗಿಲ್ಲ. ವಿನಾಕಾರಣ ತಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

Latest Videos

undefined

ಜೆಡಿಎಸ್‌ ಕಾರ್ಯಕರ್ತರು ನನ್ನನ್ನು ಹೋರಾಟ ಮಾಡಿ ಗೆಲ್ಲಿಸಿದ್ದಾರೆ. ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕ್ಷೇತ್ರವನ್ನು ಮುನ್ನೆಡೆಸೋಣ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಬಿ.ಎಸ್‌.ದೇವರಾಜ್‌, ಪಪಂ ಮಾಜಿ ಅಧ್ಯಕ್ಷ ಎಚ್‌.ಆರ್‌.ರಾಮೇಗೌಡ, ವಿಜಯೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಾಯಣ್ಣಗೌಡ, ಶಂಕರೇಗೌಡ, ಮುಖಂಡರಾದ ತಾವರೇಕೆರೆ ತಿಮ್ಮೇಗೌಡ, ಹೆಡಗೀಹಳ್ಳಿ ವಿಶ್ವನಾಥ್‌, ಹರಿದಾಸನಹಳ್ಳಿ ಶಶಿ, ಕಣತ್ತೂರು ಪ್ರಸನ್ನ, ಗಿರೀಶ್‌ ಆಚಾರ್‌ ಮತ್ತಿತರಿದ್ದರು.

ಜಗತ್ತಿಗೆ ಮಾದರಿ

 ತುರುವೇಕೆರೆ: ಡಾ.ಅಂಬೇಡ್ಕರ್‌ ರಚಿಸಿರುವ ಭಾರತದ ಸಂವಿಧಾನವು ಜಗತ್ತಿಗೇ ಮಾದರಿ ಸಂವಿಧಾನ ಎಂದು ಶಾಸಕ ಮಸಾಲಾ ಜಯರಾಮ್‌ ಹೇಳಿದರು.

ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 74ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು

 ಸೋಂಕು ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು.  ಪ್ರಧಾನಿ ಮೋದಿ ದೂರದೃಷ್ಟಿತ್ವದಿಂದ ಇಂದು ಕೋಟ್ಯಂತರ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ತ್ಯಾಗ ಬಲಿದಾನದ ಸಂಕೇತವಾಗಿರುವ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಜವಹರಲಾಲ್‌, ಸರ್ದಾರ್‌ ವಲ್ಲಬಾಯ್‌ ಪಟೇಲ್‌,ಅಂಬೇಡ್ಕರ್‌ ಸೇರಿದಂತೆ ಹಲವು ಹೋರಾಟಗಾರರನ್ನು ಭಕ್ತಿಪೂರ್ವಕವಾಗಿ ನೆನೆಯಬೇಕಿದೆ ಎಂದರು.

ತಹಶೀಲ್ದಾರ್‌ ವೈ.ಎಂ.ರೇಣುಕುಮಾರ್‌, ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನ ಒಗ್ಗೂಡಿಸಿ. ಒಂದು ಏಕೀಕೃತ ರಾಷ್ಟ್ರವಾಗಿ ಕಟ್ಟಿದ ದಿನವನ್ನು ನಾವೆಲ್ಲರೂ ಹೆಮ್ಮೆಯಿಂದ ನೆನೆಯಬೇಕಿದೆ ಎಂದರು.

ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವನ್ನು 1950 ಜನವರಿ 26 ರಂದು ಸ್ವೀಕರಿಸಿದ ದಿನವೂ ಭಾರತೀಯರ ಸುದಿನ ಎಂಬುದನ್ನು ಮರೆಯಬಾರದು.

ಅನಕ್ಷರತೆ, ಸಾಮಾಜಿಕ ತಾರತಮ್ಯಗಳಿಗೆ ಗುಲಾಮರಾಗಲು ಬಿಡದೆ ಪ್ರಜಾಸತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು. ಜಾನಪದ, ಪತ್ರಿಕೋದ್ಯಮ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.

ಪ.ಪಂ. ಅಧ್ಯಕ್ಷ ಪ್ರಭಾಕರ್‌, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಚಿದಾನಂದ್‌, ಇ.ಒ.ಸತೀಶ್‌ಕುಮಾರ್‌, ಕ್ಷೇತ್ರ ಶಿಕ್ಷಣಾ​ಕಾರಿ ಎಸ್‌.ಕೆ.ಪದ್ಮನಾಭ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಂರಾಜು ಮುನಿಯೂರು, ಬೆಸ್ಕಾಂ ಎಇಇ ಚಂದ್ರಾನಾಯಕ್‌, ಕೃಷಿ ಸಹಾಯಕ ನಿರ್ದೇಶಕಿ ಪೂಜಾ.ಬಿ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಡಾ.ಸುಪ್ರಿಯಾ ಸೇರಿದಂತೆ ಹಲವಾರು ಮಂದಿ ಪಾಳ್ಗೊಂಡಿದ್ದರು.

click me!