JDS ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗಿ ಚುನಾವಣೆ ಸ್ಪರ್ಧಿಸುವ ಸೂಚನೆ ನೀಡಿದ ಮುಖಂಡ

By Kannadaprabha News  |  First Published Feb 19, 2021, 3:18 PM IST

ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು, ಈಗಿನ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದ್ದು ಯಾವ ಪಕ್ಷದಿಂದ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದು ಹೇಳಿದ್ದಾರೆ. 


ದೇವನಹಳ್ಳಿ (ಫೆ.19):  ಕಳೆದ ವಿಧಾನಸಭಾ ಚುನಾವಣೆಯಿಂದೀಚೆಗೆ ಜೆಡಿಎಸ್‌ ಪಕ್ಷದ ಮುಖಂಡರು ತಮ್ಮನ್ನು ಕಡೆಗಣಿಸುತ್ತಿರುವುದರಿಂದ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಆಗದೆ ಇರುವುದರಿಂದ ಮುಂಬರುವ 2023ರ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವೈಯಕ್ತಿಕ ಜವಾಬ್ದಾರಿಗಳು ಏನು ಇಲ್ಲದೇ ಇರುವುದರಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದರೂ ಯಾವ ರಾಜಕೀಯ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಕ್ಷೇತ್ರದ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಹಾದಿ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದರು.

Latest Videos

undefined

ಬಿಜೆಪಿ ಭರ್ಜರಿ ಪ್ರವೇಶ : ಕಮಲ ಪಾಳಯಕ್ಕೆ ಬಂಪರ್

ಇತ್ತೀಚಿನ ದಿನಗಳಲ್ಲಿ ದೇವನಹಳ್ಳಿ ಕ್ಷೇತ್ರ ಯಾವ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅಲ್ಲದೆ ಪ.ಜಾತಿ, ಪ. ಪಂಗಡ ಹಾಗೂ ಅಲ್ಪಸಂಖ್ಯಾತರು ಯಾವ ರೀತಿ ತಮ್ಮ ಹಕ್ಕನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಕಂಡು ಮಾಜಿ ಶಾಸಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅರಿತು ಹಲವಾರು ಸಂಘಟನೆಗಳ ಮುಖ್ಯಸ್ಥರು ಹಾಗೂ ಹಿತೈಷಿಗಳ ವಿಚಾರ ವಿನಿಮಯ ಮಾಡುವುದರ ಮೂಲಕ ಪ್ರಜಾ ಪ್ರಜಾಪ್ರತಿನಿಧಿಗಳಾದವರು ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿಫಲರಾಗಿರುವುದರಿಂದ ಎಚ್ಚರಿಕೆ ನೀಡದೇ ಇದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಕ್ಷೇತ್ರ ಏನಾಗಬಹುದು ಎಂಬ ಆತಂಕ ಇದೆ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಅಲ್ಲದೆ ಇದೂವರೆವಿಗೂ ಒಂದೇ ಒಂದು ಪಕ್ಷ ವಿರೋಧಿ ಕೆಲಸ ಮಾಡಿಲ್ಲವಾದರೂ ಪಕ್ಷದ ಕಟ್ಟಡ ಅಲ್ಲದೆ ಅನೇಕ ಶಾಶ್ವತ ಅಭಿವೃದ್ಧಿ ಕಾರ್ಯಗಳು ನನ ಅವಧಿಯಲ್ಲಿ ಆಗಿ ಪಕ್ಷ ಸಂಘಟನೆ ಮಾಡಿದ್ದರೂ ಜೆಡಿಎಸ್‌ ಪಕ್ಷ ಏಕೆ ನನ್ನನ್ನು ಕಡೆಗಾಣಿಸಿದೆ ಗೊತ್ತಿಲ್ಲ ಎಂದು ತಿಳಿಸಿದರು.

ಅನೇಕ ಅಭಿಮಾನಿಗಳು ತಮ್ಮನ್ನು ಕಂಡು ನೀವು ಇತಿಹಾಸಕ್ಕೆ ಸೇರಬಾರದು ಮತ್ತೆ ಕ್ಷೇತ್ರಕ್ಕೆ ಮಾಡಿರುವ ಕೆಲಸಗಳನ್ನು ಯಾರು ಮರೆಯಲಾರರು ಮತ್ತೆ ರಾಜಕೀಯ ಪ್ರವೇಶ ಆಗಬೇಕು ಎಂದು ತಾಲೂಕಿನ ಬುದ್ಧಿ ಜೀವಿಗಳು ಒತ್ತಾಯ ಮಾಡಿರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

click me!