ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ನನ್ನ ಹೇಳಿಕೆಗೆ ನಾನು ಬದ್ಧ: ಪ್ರಿಯಾಂಕ್ ಖರ್ಗೆ

By Kannadaprabha News  |  First Published Sep 7, 2023, 11:30 PM IST

ಯಾವ ಧರ್ಮವು ಮನುಷ್ಯರ ಮಧ್ಯೆ ಭೇದಭಾವ ಮೂಡಿಸುತ್ತದೆಯೋ, ಯಾವ ಧರ್ಮ ಸಮಾನತೆಯನ್ನು ಸಾರುವುದಿಲ್ಲವೋ'' ಅದು ನನ್ನ ಪ್ರಕಾರ ಧರ್ಮವೇ ಅಲ್ಲ. ಅವರಿಗೆ ಅವರ ಧರ್ಮವು ಆ ರೀತಿಯಾಗಿ ಇದೆ ಎನಿಸಿದರೆ ಅದು ಅವರ ಧರ್ಮದ ಸಮಸ್ಯೆ. ನನ್ನ ಸಮಸ್ಯೆಯಲ್ಲ. ನನ್ನ ಧರ್ಮ ಸಂವಿಧಾನ ಮಾತ್ರ ಎಂದ ಸಚಿವ ಪ್ರಿಯಾಂಕ್ ಖರ್ಗೆ


ಕಲಬುರಗಿ(ಸೆ.07): ತಮ್ಮ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಯಾರು ಏನೇ ಮಾಡಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ. ನಾನು ಅಂದು ಹೇಳಿದ್ದು, ಹಾಗೂ ಈಗಲು ಬದ್ಧವಾಗಿರುವ ನಿಲುವು ತಮ್ಮದಾಗಿದೆ ಎಂದಿದ್ದಾರೆ.

ಯಾವ ಧರ್ಮವು ಮನುಷ್ಯರ ಮಧ್ಯೆ ಭೇದಭಾವ ಮೂಡಿಸುತ್ತದೆಯೋ, ಯಾವ ಧರ್ಮ ಸಮಾನತೆಯನ್ನು ಸಾರುವುದಿಲ್ಲವೋ'' ಅದು ನನ್ನ ಪ್ರಕಾರ ಧರ್ಮವೇ ಅಲ್ಲ. ಅವರಿಗೆ ಅವರ ಧರ್ಮವು ಆ ರೀತಿಯಾಗಿ ಇದೆ ಎನಿಸಿದರೆ ಅದು ಅವರ ಧರ್ಮದ ಸಮಸ್ಯೆ. ನನ್ನ ಸಮಸ್ಯೆಯಲ್ಲ. ನನ್ನ ಧರ್ಮ ಸಂವಿಧಾನ ಮಾತ್ರ ಎಂದಿದ್ದಾರೆ.

Tap to resize

Latest Videos

undefined

ಪ್ರಧಾನಿ ಮೋದಿ 'ಗೇಮ್ ಚೇಂಜರ್ಸ್' ಅಲ್ಲ 'ನೇಮ್ ಚೇಂಜರ್ಸ್': ಇಂಡಿಯಾ ಹೆಸರು ಬದಲಾವಣೆಗೆ ಸಚಿವ ಪ್ರಿಯಾಂಕ್ ವಾಗ್ದಾಳಿ

ಎಫ್‌ಐಆರ್‌ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರ ಏನಾದರೂ ಮಾಡಿಕೊಳ್ಳಲಿ. ಕಾನೂನು ಪ್ರಕಿಯೆ ಕ್ರಮಬದ್ಧವಾಗಿ ನಡೆಯುತ್ತದೆ. ನಾವು ಸಂವಿಧಾನ ಬದ್ಧವಾಗಿ ಅದನ್ನು ಎದುರಿಸಲು ಮಾಡಬೇಕಾಗಿದ್ದೆಲ್ಲವನ್ನೂ ಮಾಡುತ್ತೇವೆ ಎಂದೂ ಪ್ರಿಯಾಂಕ್‌ ಹೇಳಿದ್ದಾರೆ.

click me!