‘ಕೋರ್ಟ್‌ನಿಂದ ನೋಟಿಸ್‌ ಬಂದಿಲ್ಲ : ಬಂದ್ರೆ ಹೋಗ್ತೀನಿ’

By Kannadaprabha News  |  First Published Sep 17, 2019, 10:36 AM IST

ನನಗೆ ಕೋರ್ಟಿನಿಂದ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಬಂದಲ್ಲಿ ನಾನು ಕೋರ್ಟಿಗೆ ಹಾಜರಾಗುತ್ತೇನೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 


ಹಾಸನ [ಸೆ.17]: ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರದ ಬಗ್ಗೆ ಅಪೂರ್ಣ ಪ್ರಮಾಣ ಪತ್ರ ಸಲ್ಲಿಸಿದ್ದೇನೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ನಿಂದ ನನಗೆ ಅಧಿಕೃತವಾಗಿ ಯಾವುದೇ ನೋಟಿಸ್‌ ಬಂದಿಲ್ಲ. ಬಂದರೆ ಹಾಜರಾಗುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಖಾಸುಮ್ಮನೆ ಆರೋಪ ಮಾಡುವುದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ. 

ನ್ಯಾಯಾಲಯಕ್ಕಿಂತ, ಕಾನೂನಿಗಿಂತ ನಾನು ದೊಡ್ಡವನಲ್ಲ. ಕಾನೂನು ತಾಯಿ ಇದ್ದಂತೆ, ನಾನೇನು ತಪ್ಪು ಮಾಡಿಲ್ಲ. ನನಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಚುನಾವಣಾ ಆಯೋಗಕ್ಕೆ ಪ್ರಜ್ವಲ್‌ ಅಪೂರ್ಣ ಆಸ್ತಿ ವಿವರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಪ್ರಜ್ವಲ್‌ ವಿರುದ್ಧ ಸೋಲುಂಡಿರುವ ಬಿಜೆಪಿ ಅಭ್ಯರ್ಥಿ ಎ.ಮಂಜು ಆರೋಪಿಸಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆರೆ ಸಂತ್ರಸ್ತರಿಗೆ ಕೆಲ ಕಡೆ ನೀಡಿದ ಪರಿಹಾರ ಚೆಕ್‌ಗಳು ಬೌನ್ಸ್‌ ಆಗಿದೆ. ರಾಜ್ಯದ ಮುಖಂಡರು ಸಂಪುಟ ವಿಸ್ತರಣೆ, ಖಾತೆ ಹಂಚಿಕೆಗೆ ಹತ್ತಾರು ಬಾರಿ ಪ್ರಧಾನಿ ಬಳಿ ತೆರಳುತ್ತಾರೆ. ಆದರೆ, ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಮಾತ್ರ ಬಿಡುಗಡೆ ಮಾಡಿಸುತ್ತಿಲ್ಲ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಬಳಿ ತೆರಳಿ ಹಣ ಬಿಡುಗಡೆ ಮಾಡಿಸಲಿ ಎಂದು ಒತ್ತಾಯಿಸಿದರು.

click me!