ಅನುದಾನ ಕೇಳಿದ್ರೆ ಬಿಎಸ್‌ವೈ ಬಿಜೆಪಿಗೆ ಬಾ ಅಂತಾ ಕರೀತಾರೆ : ಕೈ ಶಾಸಕ

Published : Sep 17, 2019, 09:53 AM IST
ಅನುದಾನ ಕೇಳಿದ್ರೆ ಬಿಎಸ್‌ವೈ ಬಿಜೆಪಿಗೆ ಬಾ ಅಂತಾ ಕರೀತಾರೆ : ಕೈ ಶಾಸಕ

ಸಾರಾಂಶ

ಯಡಿಯೂರಪ್ಪ ಅವರ ಬಳಿ ಕ್ಷೇತ್ರಾಭಿವೃದ್ಧಿಗೆ ಅನುದಾನ ಕೇಳಲು ಹೋದರೆ, ನೀವು ಬಿಜೆಪಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರೋರ್ವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಇಂಡಿ [ಸೆ.17]: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಕ್ಷೇತ್ರಾಭಿವೃದ್ಧಿಗೆ ಅನುದಾನ ಕೇಳಲು ಹೋದರೆ, ನೀವು ಬಿಜೆಪಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

 ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸದ್ಯ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಬಹುದು. ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ‘ಗೌಡ್ರೆ ನೀವು ಕೇಳಿದಷ್ಟುಅನುದಾನ ನೀಡುತ್ತೇವೆ. ಸಕ್ಕರೆ ಕಾರ್ಖಾನೆ ಏಳಿಗೆಗೂ ಅನುದಾನ ನೀಡುತ್ತೇವೆ. ನೀವು ನಮ್ಮ ಕಡೆಗೆ ಬರಬೇಕು’ ಎನ್ನುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏನು ಮಾಡುವುದು ನಮ್ಮದು ಕಾಂಗ್ರೆಸ್‌ ಮನೆತನದ ಕುಟುಂಬ. ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಅವಧಿಯಲ್ಲಿ ಕೇಳಿದಷ್ಟುಅನುದಾನ ನೀಡಿದ ಸಿದ್ದರಾಮಯ್ಯನವರನ್ನು ಬಿಟ್ಟು ಹೋಗುವುದು ಹೇಗೆ? ಹಿಂದಿನವರದ್ದು ವಿಚಾರ ಮಾಡಿಕೊಂಡು ಕುಳಿತರೆ, ಮುಂದಿನ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತವೆ. ಮುಂದಿನ ರಾಜಕೀಯ ಸೂಕ್ಷ್ಮ ವಿಚಾರವನ್ನು ತೀರ್ಮಾನಿಸಿ ಹೆಜ್ಜೆ ಇಡೋಣ ಎಂದರು.

PREV
click me!

Recommended Stories

Tumakuruದೇವರಾಯನದುರ್ಗ ಬೆಟ್ಟದಲ್ಲಿ ರೀಲ್ಸ್ ಹುಚ್ಚು, ಕ್ಯಾಮಾರಾ ಆನ್ ಆಗ್ತಿದ್ದಂತೆಯೇ ಪ್ರಪಾತಕ್ಕೆ ಬಿದ್ದ ಉಪನ್ಯಾಸಕ!
2027 Caste census: ದಲಿತರು ಧರ್ಮದ ಕಲಾಂನಲ್ಲಿ ಬೌದ್ಧ ಎಂದು ಬರೆಸಿ: ಅಂಬೇಡ್ಕರ್‌ ಮೊಮ್ಮಗ ಕರೆ!