ಅಭಿವೃದ್ಧಿ ಕೆಲಸದಲ್ಲಿ ಮಾತಿನಂತೆ ನಡೆದಿದ್ದೇನೆ :ಹರ್ಷವರ್ಧನ್‌

By Kannadaprabha News  |  First Published Mar 14, 2023, 5:34 AM IST

ನಂಜನಗೂಡು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲೂ ಸಹ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ನಾನು ಮತದಾರರಿಗೆ ಕೊಟ್ಟಮಾತಿನಂತೆ ನಡೆದುಕೊಂಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.


 ನಂಜನಗೂಡು :  ನಂಜನಗೂಡು ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲೂ ಸಹ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ನಾನು ಮತದಾರರಿಗೆ ಕೊಟ್ಟಮಾತಿನಂತೆ ನಡೆದುಕೊಂಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

ತಾಲೂಕಿನ ನಲ್ಲಿತಾಳಪುರ ಗ್ರಾಮದಲ್ಲಿ  22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪಂಚಾಯ್ತಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ದ್‌ ಅವರು ನಂಜನಗೂಡು ಕ್ಷೇತ್ರವನ್ನು ಶಾಂತಿಯ ಗೂಡಾಗಿಸಬೇಕು. ಮತ್ತು ಅಭಿವೃದ್ದಿ ಕೆಲಸಗಳನ್ನು ಮಾಡಿ ಮಾದರಿವನ್ನಾಗಿ ರೂಪಿಸಬೇಕು ಎಂದು 2 ಜವಾಬ್ದಾರಿಗಳನ್ನು ನೀಡಿದ್ದರು. ಅದರಂತೆ ನಾನು ಒಂಟಿ ಸಲಗದ ರೀತಿ ಹೋರಾಟ ನಡೆಸಿ ಸುಮಾರು 700 ಕೋಟಿಗೂ ಹೆಚ್ಚಿನ ಅನುದಾನ ತಂದು ಪ್ರತಿಯೊಂದು ಗ್ರಾಮದಲ್ಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

Latest Videos

undefined

35 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ನುಗು ಏತ ನಿರಾವರಿ ಯೋಜನೆಯ ಕಾಮಗಾರಿ ಶೇ. 75ರಷ್ಟುಪೂರ್ಣಗೊಂಡಿದೆ. ಈ ವರ್ಷದ ಅಕ್ಟೋಬರ್‌ ವೇಳೆಗೆ ಪೂರ್ಣಗೊಂಡು ಸುಮಾರು 28 ಸಾವಿರ ರೈತರಿಗೆ ನೆರವಾಗಲಿದೆ. ಅಲ್ಲದೆ ಶ್ರೀಕಂಠೇಶ್ವರ ದೇವಾಲಯದ ಬೆಳ್ಳಿರಥ ನಿರ್ಮಾಣ ಕಾಮಗಾರಿಯೂ ಸಹ ಮುಗಿಯಲಿದೆ. ಇನ್ನು ಕೌಲಂದೆ ಭಾಗದ ಕುಡಿಯುವ ನೀರಿನ ಪೂರೈಕೆಗಾಗಿ . 8 ಕೋಟಿ ನೀಡಲಾಗಿದೆ. ಯಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆಗೂ ಅನುದಾನ ಬಿಡುಗಡೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾರಿಗೆ ಕೊಟ್ಟಮಾತನ್ನು ನೆರವೇರಿಸಿರುವ ಆತ್ಮತೃಪ್ತಿ ನನಗಿದೆ ಎಂದರು.

ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ .24 ಲಕ್ಷ ವೆಚ್ಚದಲ್ಲಿ ಬಸವ ಭವನ ನಿರ್ಮಾಣಕ್ಕೆ ಶಾಸಕ ಬಿ. ಹರ್ಷವರ್ಧನ್‌ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಸಹ ಬಸವ ಭವನ ನಿರ್ಮಿಸಬೇಕು ಎಂಬ ಸಂಕಲ್ಪದಿಂದ ಸುಮಾರು .2.5 ಕೋಟಿ ಅನುದಾನವನ್ನು ಮೀಸಲಿರಿಸಿದ್ದೆ. ಆದರೆ ಮುಖಂಡರು ತಾಲೂಕಿನಲ್ಲಿ ಬಸವಭವನ ಕಾಮಗಾರಿ ಅರ್ಧಕ್ಕೆ ನಿಂತಿದೆ ಆದ್ದರಿಂದ ಈ ಬಸವ ಭವನ ಪೂರ್ಣಗೊಳಿಸುವಂತೆ ಒತ್ತಡ ಹೇರಿದ್ದರಿಂದ .2.5 ಕೋಟಿ ಅನುದಾನ ನಿಯೋಜಿಸಲಾಗಿದೆ. ಶೀಘ್ರದಲ್ಲೇ ಬಸವ ಪುತ್ಥಳಿ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದ ಅವರು ಕಸುವಿನಹಳ್ಳಿ ಗ್ರಾಮದಲ್ಲೂ ಕೂಡ .24 ಲಕ್ಷ ವೆಚ್ಚದಲ್ಲಿ ಬಸವಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಶೀಘ್ರದಲ್ಲೇ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.

ಈ ವೇಳೆ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಹಾಲಿನ ಡೈರಿ ಕಟ್ಟಡ ಲೋಕಾರ್ಪಣೆಗೊಳಿಸಿದರು.

ಈ ವೇಳೆ ತಾಪಂ ಇಒ ಎಚ್‌.ಜಿ. ಶ್ರೀನಿವಾಸ್‌, ಜಿಪಂ ಮಾಜಿ ಸದಸ್ಯ ಎಸ್‌.ಎಂ. ಕೆಂಪಣ್ಣ, ನಲ್ಲಿತಾಳಪುರ ಗ್ರಾಪಂ ಅಧ್ಯಕ್ಷ ಮಹೇಶ್‌, ಉಪಾಧ್ಯಕ್ಷೆ ದೇವಮ್ಮ ಸಿದ್ದನಾಯಕ, ಗ್ರಾಪಂ ಸದಸ್ಯರಾದ ಮಹದೇವಸ್ವಾಮಿ, ಪ್ರಕಾಶ್‌, ಕೆ.ಕೆ. ಮಲ್ಲೇಶ್‌, ನಾಗೇಗೌಡ, ರಾಮಲಿಂಗಸ್ವಾಮಿ, ನಂಜುಂಡಸ್ವಾಮಿ, ಮಣಿಯಮ್ಮ, ಶಶಿಕಲಾ, ಕಸುವಿನಹಳ್ಳಿ ಗ್ರಾಪಂ ಅಧ್ಯಕ್ಷ ಸ್ವಾಮಿ, ಮುಖಂಡರಾದ ಗಿರೀಶ್‌, ಮಂಜುನಾಥ್‌, ನವೀನ್‌ರಾಜ್‌, ಮಲ್ಕುಂಡಿ ಪುಟ್ಟಸ್ವಾಮಿ, ಹುರಾ ಚಂದ್ರು, ಮಲ್ಲಿಕಾರ್ಜುನ್‌, ಗುರುಪಾದು ಮೊದಲಾದವರು ಇದ್ದರು.

click me!