ನಾನೇ ಗೃಹ ಸಚಿವ ಯಾವ ಪ್ರಭಾವಿ ಫೋನ್ ಬರಲು ಸಾಧ್ಯ? ಪ್ರಜ್ವಲ್ ರೇವಣ್ಣ ಜೈಲು ಶಿಫ್ಟ್‌ಗೆ ಖರ್ಗೆ ಪ್ರತಿಕ್ರಿಯೆ

Published : Oct 18, 2026, 01:38 PM IST
priyank kharge

ಸಾರಾಂಶ

ಪ್ರಜ್ವಲ್ ರೇವಣ್ಣ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಕುರಿತು ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಶಿಫ್ಟ್ ಹಿಂದಿನ ಕಾರಣ ಸ್ಪಷ್ಟಪಡಿಸಿದ ಪ್ರಿಯಾಂಕ್ ಖರ್ಗೆ, ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದು ಭಾರಿ ಚರ್ಚೆಯಾಗುತ್ತಿದೆ.

ಕಲಬುರಗಿ (ಅ.18) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಪ್ರಯತ್ನ ಹಾಗೂ ಗೊಂದಲಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಾಗ ಜೈಲಿಗೆ ಸ್ಥಳಾಂತರಿಸಲು ಪ್ರಯತ್ನ ನಡೆದಿತ್ತು. ಆದರೆ ತುಮಕೂರುವರಗೆ ಕರೆದುಕೊಂಡು ಹೋಗಿ ಮರಳಿ ಪರಪ್ಪನ ಆಗ್ರಹಾರದಲ್ಲೇ ಬಿಟ್ಟ ಘಟನೆ ನಡೆದಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ ಇದರ ಹಿಂದೆ ಯಾವ ಪ್ರಭಾವಿಗಳ ಕೈವಾಡವಿಲ್ಲ, ನಾನೇ ಹೋಂ ಮಿನಿಸ್ಟರ್, ಯಾವ ಪ್ರಭಾವಿಗಳ ಕರೆ ಬರಲು ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಮಾತಾನಾಡಿದ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಪೊಲೀಸರು ಅಚ್ಚರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲ ವಿಚಾರಗಳು ಬೆಳಕಿಗೆ ಬಂದಿತ್ತು. ಹೀಗಾಗಿ ಜೈಲಿನಲ್ಲಿರುವವರನ್ನು ಬೇರೇ ಬೇರೆ ಜೈಲುಗಳಲ್ಲಿ ಇರಿಸಲು ಚರ್ಚೆ ಮಾಡಲಾಗಿತ್ತು. ಈ ಪ್ರಯತ್ನ ನಡುವೆ ಕೆಲ ಸವಾಲುಗಳ ಕುರಿತು ಚರ್ಚೆ ಮಾಡಲಾಗಿತ್ತು. ಹೀಗಾಗಿ ಕೊನೆಯ ಕ್ಷಣದಲ್ಲಿ ಇತರರನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಪ್ರಜ್ವಲ್ ರೇವಣ್ಣನ ಪರಪ್ಪನ ಅಗ್ರಹಾರದಲ್ಲೇ ಇರಿಸಲು ನಿರ್ಧರಿಸಲಾಗಿದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ

ಮಾನಿಟರಿಂಗ್ ಸುಲಭ

ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣನ ಮಾನಿಟರಿಂಗ್ ಸುಲಭ. ಹೀಗಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡುವ ನಿರ್ಧಾರ ಕೈಬಿಟ್ಟು ಇಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಚರ್ಚಿಸಿದ್ದಾರೆ. ಅನುಕೂಲಗಳು, ಸವಾಲುಗಳ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಾನೇ ಹೋಂ ಮಿನಿಸ್ಟರ್, ಯಾವ ಪ್ರಭಾವಿಗಳ ಫೋನ್ ಬರಲು ಸಾಧ್ಯ?

ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡುವ ನಿರ್ಧಾರ ತೆಗೆದುಕೊಂಡು ಬಳಿಕ ಏಕಾಏಕಿ ಪರಪ್ಪನ ಅಗ್ರಹಾರದಲ್ಲೇ ಉಳಿಸುವ ನಿರ್ಧಾರದ ಹಿಂದೆ ಪ್ರಭಾವಿಗಳ ಕೈವಾಡವಿತ್ತಾ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ. ನಾನೇ ಹೋಂ ಮಿನಿಸ್ಟರ್. ಇನ್ನು ಯಾವ ಪ್ರಭಾವಿಗಳ ಫೋನ್ ಬರಲು ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಅಪರಾಧಿ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿ ಹಿಂಡಲಗ ಜೈಲಿಗೆ ಸ್ಥಳಾಂತರಿಸಲು CAR ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಹೋಗಿದ್ದಾರೆ. ತುಮಕೂರು ತಲುಪ ವೇಳೆಗೆ ಹಿರಿಯ ಅಧಿಕಾರಿಯಿಂದ ಫೋನ್ ಕರೆ ಬಂದ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಮರಳಿ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗಿತ್ತು. ಎರಡು ಪ್ರಕರಣಗಳಲ್ಲಿ ಜನಪತ್ರಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ಟ್ರಯಲ್ ನಡೆಯುತ್ತಿದೆ. ಟ್ರಯಲ್ ವೇಳೆ ಕೆಲ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಖುದ್ದು ಹಾಜರಿರಬೇಕು. ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದರೆ ಇದು ಸಮಸ್ಯೆಯಾಗಲಿದೆ. ಹೀಗಾಗಿ ಮರಳಿ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದ್ದರು.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಇಬ್ಬರು ಮಕ್ಕಳು ಗಂಭೀರ, ಐಸಿಯುವಿನಲ್ಲಿ ಚಿಕಿತ್ಸೆ
Bengaluru: ಕಂಪನಿ ಸೆಕ್ರೆಟರಿ ಕೋರ್ಸ್‌ನಲ್ಲಿ ವೀಣಾಗೆ 16 ಚಿನ್ನ, ಪ್ರಶಸ್ತಿ ಪತ್ರ ವಿತರಿಸಿದ ಅರುಂಧತಿ ನಾಗ್