Bengaluru: ಕಂಪನಿ ಸೆಕ್ರೆಟರಿ ಕೋರ್ಸ್‌ನಲ್ಲಿ ವೀಣಾಗೆ 16 ಚಿನ್ನ, ಪ್ರಶಸ್ತಿ ಪತ್ರ ವಿತರಿಸಿದ ಅರುಂಧತಿ ನಾಗ್

Published : Oct 18, 2026, 10:40 AM IST
Veena Student

ಸಾರಾಂಶ

ಬೆಂಗಳೂರಿನ ವೀಣಾ ಎಸ್. ರೆಡ್ಡಿ ಸಿಎಸ್ ಕೋರ್ಸ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 3ನೇ ರ್ಯಾಂಕ್ ಹಾಗೂ 16 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಇದರ ಜೊತೆಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸರಳ ವಿವಾಹವಾಗುವ ಜೋಡಿಗಳಿಗೆ 50,000 ರೂ. ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ.

ಬೆಂಗಳೂರು: ಕಂಪನಿ ಸೆಕ್ರೆಟರಿ (ಸಿಎಸ್) ಕೋರ್ಸ್ ನಲ್ಲಿ ಅಖಿಲ ಭಾರತದ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದು, ಎಲ್ಲ ವಿಷಯಗಳಲ್ಲೂ ಸೇರಿ ಒಟ್ಟು ಹದಿನಾರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

2015ರ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

ಬೆಂಗಳೂರಿನ ಜೆ.ಪಿ.ನಗರದ ಎರಡನೇ ಫೇಸ್ ನಿವಾಸಿಗಳಾದ, ಚಾರ್ಟರ್ಡ್ ಅಕೌಂಟೆಂಟ್ ಜನಾರ್ದನ್ ರೆಡ್ಡಿ ಹಾಗೂ ಲಕ್ಷ್ಮೀದೇವಿ ದಂಪತಿಯ ಮಗಳು ವೀಣಾ ಎಸ್. ರೆಡ್ಡಿ. 2015ರಲ್ಲಿ ಪಿಯುಸಿಯಲ್ಲಿ ಕರ್ನಾಟಕಕ್ಕೇ ಮೊದಲ ಸ್ಥಾನ ಗಳಿಸಿದ್ದರು.

ಬೆಂಗಳೂರಿನ ಎನ್ಎಸ್ಎಲ್ (ನ್ಯಾಷನಲ್ ಸ್ಕೂಲ್ ಆಫ್ ಲಾ) ಅಲ್ಲಿ ಸೀಟು ದೊರೆಯಲಿಲ್ಲ. ಕೋಲ್ಕತ್ತಾದಲ್ಲಿ ಎನ್ಎಲ್ಎಸ್ ನಲ್ಲಿ ಸೀಟು ಸಿಕ್ಕಿದರೂ ಅಲ್ಲಿಗೆ ಅವರು ಹೋಗಿರಲಿಲ್ಲ. ಹೀಗಾಗಿ ವೀಣಾರೆಡ್ಡಿ ಆರಿಸಿಕೊಂಡ ಹಾದಿ ಬಿ.ಕಾಂ., ಸಿಎ, ಸಿಎಸ್ ಕೋರ್ಸ್ ನದು. ಬಿಕಾಂನಲ್ಲಿ ಅವರು ರ್ಯಾಂಕ್ ಪಡೆದುಕೊಂಡರು.

ಪ್ರಖ್ಯಾತವಾದ ಪಿಡಬ್ಲ್ಯುಸಿ ಅಲ್ಲಿ ಕಾನೂನು ಸಲಹೆಗಾರರಾಗಿ ಒಂದು ವರ್ಷ, ಜಿಎಸ್ ಟಿಯಲ್ಲಿ ಬಹಳ ಪ್ರಮುಖ ಕಂಪನಿ ಗಂಗಾ ಅಸೋಸಿಯೇಟ್ ನಲ್ಲಿ ಸಲಹೆಗಾರರಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿದ್ದಾರೆ.

ಸರಳ ವಿವಾಹ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ) ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಕ್ಕೆ ಪ್ರತಿ ಜೋಡಿಗೆ 50000 ಸಾವಿರ ರೂಪಾಯಿ ನೀಡುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. https://dom.karnataka.gov.in/ ಗೆ ಭೇಟಿ ನೀಡಿ.

PREV
Read more Articles on
click me!

Recommended Stories

Bengaluru: ಪ್ರಿಯಕರನಿಗೆ ಕಳಿಸಿದ್ದ ಟೆಕ್ಕಿ ಖಾಸಗಿ ಫೋಟೋ ಅಶ್ಲೀಲ ಸೈಟ್‌ನಲ್ಲಿ ಪ್ರಸಾರ
‘ಕೆಲಸ ಕೊಡಿಸಿ, ಮೊದಲ ತಿಂಗಳ ಸಂಬಳ ನಿಮಗೇ!’ ಬೆಂಗಳೂರು ಯುವಕನ ವಿಭಿನ್ನ ಆಫರ್ ಈಗ ವೈರಲ್