ಜನರ ಸೇವೆ ಮಾಡಲು ನಾನು ಸದಾ ಸಿದ್ಧ: ಉಗ್ರೇಶ್‌

Published : Jan 03, 2024, 09:04 AM IST
 ಜನರ ಸೇವೆ ಮಾಡಲು ನಾನು ಸದಾ ಸಿದ್ಧ: ಉಗ್ರೇಶ್‌

ಸಾರಾಂಶ

ಶಿರಾ ತಾಲೂಕಿನ ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಇಂದು ಅಪಾರ ಅಭಿಮಾನಿ ಬಳಗದಿಂದ ನನ್ನ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ. ಯಾವ ಜನ್ಮದಲ್ಲಿ ನಾನು ಏನು ಪುಣ್ಯ ಮಾಡಿದ್ದೆನೋ, ಇಷ್ಟೆಲ್ಲ ಜನರ ಅಭಿಮಾನ, ಪ್ರೀತಿ ಪಡೆದಿದ್ದೇನೆ. ನನ್ನ ಉಸಿರಿರುವರೆಗೂ ಜನರ ಸೇವೆ ಮಾಡುತ್ತೇನೆ ಎಂದು ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್. ಉಗ್ರೇಶ್ ಹೇಳಿದರು.

  ಶಿರಾ :  ಶಿರಾ ತಾಲೂಕಿನ ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಇಂದು ಅಪಾರ ಅಭಿಮಾನಿ ಬಳಗದಿಂದ ನನ್ನ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ. ಯಾವ ಜನ್ಮದಲ್ಲಿ ನಾನು ಏನು ಪುಣ್ಯ ಮಾಡಿದ್ದೆನೋ, ಇಷ್ಟೆಲ್ಲ ಜನರ ಅಭಿಮಾನ, ಪ್ರೀತಿ ಪಡೆದಿದ್ದೇನೆ. ನನ್ನ ಉಸಿರಿರುವರೆಗೂ ಜನರ ಸೇವೆ ಮಾಡುತ್ತೇನೆ ಎಂದು ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್. ಉಗ್ರೇಶ್ ಹೇಳಿದರು.

ನಗರದ ಬೇಕ್ಪಾಯಿಂಟ್ ಪಕ್ಕದಲ್ಲಿ ಆರ್. ಉಗ್ರೇಶ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಆರ್. ಉಗ್ರೇಶ್ ಅವರ 56 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಪ್ರೋತ್ಸಾಹಿಸಿದ್ದೀರಿ. ನಿಮ್ಮ ನಂಬಿಕೆಯನ್ನು ನಾನು ಹುಸಿ ಮಾಡದೆ ಜನರ ಸೇವೆ ಮಾಡುತ್ತೇನೆ. ಈ ಬಾರಿ ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಹುಟ್ಟುಹಬ್ಬ ಆಚರಣೆ ಬೇಡ ಎಂದು ಹೇಳಿದ್ದೆ. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇಂದು ಹುಟ್ಟುಹಬ್ಬ ಆಚರಿಸಲು ಬಂದಿದ್ದೇನೆ. ಶಿರಾ ತಾಲೂಕಿನ ಜನತೆ ನಮ್ಮ ಮೇಲೆ ಇಟ್ಟಿರುವ ಅಭಿಮಾನ, ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.

ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್. ಗೌಡ, ಮಾಜಿ ಜಿಪಂ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ನಗರಸಭಾ ಸದಸ್ಯರಾದ ಆರ್. ರಾಮು, ಬಿ. ಅಂಜಿನಪ್ಪ, ಮಾಜಿ ತಾಪಂ ಉಪಾಧ್ಯಕ್ಷ ರಂಗನಾಥ್ ಗೌಡ, ಮುಖಂಡರಾದ ಕಲ್ಕೆರೆ ರವಿಕುಮಾರ್, ಕೊಟ್ಟ ಶ್ರೀನಿವಾಸ ಗೌಡ, ಮುದ್ದುಗಣೇಶ್, ಮಾನಂಗಿ ರಾಮು, ಎಸ್.ಎಸ್. ನಾಗಭೂಷಣ್, ಪುಟ್ಟಣ್ಣ, ಭೂವನಹಳ್ಳಿ ನಟರಾಜ್, ಕೆ.ಸಿ.ಆರ್. ಗೌಡ, ಇನಾಂಗೊಲ್ಲಹಳ್ಳಿ ಶಿವಣ್ಣ, ಬ್ಯಾಡಗೆರೆ ಕೊಲ್ಲಾರಪ್ಪ, ಹಬೀಬ್ ಖಾನ್, ಶ್ರೀರಂಗ ಸೇರಿದಂತೆ ಹಲವರು ಹಾಜರಿದ್ದರು.

PREV
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ