ಕೋಲಾರ: ಜಮೀನಿನಲ್ಲಿ ಹಸು ಮೇಯಿಸಿದ್ದಕ್ಕೆ ದಲಿತಗೆ ಇರಿತ, ಗುಡಿಸಲಿಗೆ ಬೆಂಕಿ

By Kannadaprabha News  |  First Published Jan 3, 2024, 4:05 AM IST

ಗ್ರಾಮದ ಶ್ರೀರಾಮೇಗೌಡ ಎಂಬುವರ ಜಮೀನಿನಲ್ಲಿ ಹನುಮಂತಪ್ಪ ಹಸುಗಳನ್ನು ಮೇಯಿಸಿದ್ದರು. ಇದರಿಂದ ಕುಪಿತಗೊಂಡ ಶ್ರೀರಾಮೇಗೌಡ, ಸುರೇಶ್, ಸುನೀಲ್, ಶಿವಶಂಕರ್, ಜನಾರ್ದನ್, ಲಲಿತಮ್ಮ, ಸಾಗರ್ ಸೇರಿದಂತೆ 10 ಜನರ ಗುಂಪು ಹನುಮಂತಪ್ಪ ಮತ್ತು ಅವರ ನಾದಿನಿ ಸುಧಾ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾಗಿ ಆರೋಪಿಸಲಾಗಿದೆ.

ಮುಳಬಾಗಿಲು(ಜ.03):  ಸವರ್ಣೀಯರ ಜಮೀನಿನಲ್ಲಿ ಹಸು ಮೇಯಿಸಿದ ಕಾರಣಕ್ಕಾಗಿ ದಲಿತ ಯುವಕ ಹನುಮಂತಪ್ಪ ಎಂಬುವರಿಗೆ ಚಾಕುವಿನಿಂದ ಇರಿದು, ಅವರ ಅಣ್ಣನ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಯಡಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಶ್ರೀರಾಮೇಗೌಡ ಎಂಬುವರ ಜಮೀನಿನಲ್ಲಿ ಹನುಮಂತಪ್ಪ ಹಸುಗಳನ್ನು ಮೇಯಿಸಿದ್ದರು. ಇದರಿಂದ ಕುಪಿತಗೊಂಡ ಶ್ರೀರಾಮೇಗೌಡ, ಸುರೇಶ್, ಸುನೀಲ್, ಶಿವಶಂಕರ್, ಜನಾರ್ದನ್, ಲಲಿತಮ್ಮ, ಸಾಗರ್ ಸೇರಿದಂತೆ 10 ಜನರ ಗುಂಪು ಹನುಮಂತಪ್ಪ ಮತ್ತು ಅವರ ನಾದಿನಿ ಸುಧಾ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾಗಿ ಆರೋಪಿಸಲಾಗಿದೆ.

Latest Videos

undefined

ಚಿಕ್ಕಮಗಳೂರು: ಗ್ರಾಮದೊಳಗೆ ಬಂದ ದಲಿತ ಯುವಕನ ಮೇಲೆ ಹಲ್ಲೆ, ಡಿಎಸ್‌ಎಸ್ ಪ್ರತಿಭಟನೆ

ಬಳಿಕ, ಹನುಮಂತಪ್ಪನ ಅಣ್ಣ ರೆಡ್ಡಪ್ಪಗೆ ಸೇರಿದ ಗುಡಿಸಲಿಗೆ ಬೆಂಕಿ ಹಚ್ಚಿ, ಸುಡಲಾಗಿದೆ. ಗಾಯಗೊಂಡಿರುವ ಹನುಮಂತಪ್ಪ, ಸುಧಾ ಅವರನ್ನು ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ 10 ಜನರ ವಿರುದ್ಧ ದೂರು ದಾಖಲಾಗಿದ್ದು, ಈ ಪೈಕಿ ನಾಲ್ವರನ್ನು ನಂಗಲಿ ಪೋಲೀಸರು ಸೋಮವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. 

click me!