ಆಧಾರ್‌ ಕಾರ್ಡ್‌ ತಿದ್ದುಪಡಿ ಕಚೇರಿ ಮುಂದೆಯೇ ರಾತ್ರಿ ಇಡೀ ಮಲಗಿದ ಮಕ್ಕಳು ಮಹಿಳೆಯರು

Published : Oct 20, 2026, 08:06 AM IST
Aadhar

ಸಾರಾಂಶ

ತಾಲೂಕು ಕೇಂದ್ರಕ್ಕೆ ಒಂದೇ ಆಧಾರ್‌ ಕಾರ್ಡ್‌ ತಿದ್ದುಪಡಿ ಕೇಂದ್ರವಿದೆ. ಅಲ್ಲಿ ಕೆಲಸ ಮಾಡುವ ವ್ಯಕ್ತಿ ದಿನಕ್ಕೆ 30 ರಿಂದ 40 ಜನರ ಆಧಾರ್‌ ತಿದ್ದುಪಡಿ ಮಾಡುತ್ತಾನೆ. ಉಳಿದವರು ಮತ್ತೆ ಊರಿಗೆ ವಾಪಸ್‌ ಹೋಗುವ ಸ್ಥಿತಿ ಇದೆ.

ಹೂವಿನಹಡಗಲಿ: ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ನಿತ್ಯ ನೂರಾರು ಜನ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಇದೆ. ಊರಿಗೆ ಹೋದರೇ ಮತ್ತೆ ಬೆಳಗಿನ ಜಾವ ಬರಲು ಆಗದೇ ಮಕ್ಕಳು, ಮಹಿಳೆಯರು ಕಚೇರಿ ಮುಂದೆ ಮಲಗುವ ದೃಶ್ಯ ಸಾಮಾನ್ಯವಾಗಿದೆ.

ಹೌದು, ತಹಸೀಲ್ದಾರ್‌ ಕಚೇರಿಯಲ್ಲಿದ್ದ ಆಧಾರ್‌ ಕಾರ್ಡ್‌ ತಿದ್ದುಪಡಿ ಕೇಂದ್ರ ತೆರೆಯಲಾಗಿತ್ತು. ಹೊರ ವಲಯದಲ್ಲಿರುವ ಕಾರಣ ಜನರಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ತಾಲೂಕಿನ ವಿವಿಧ ಕಡೆಗಳಿಂದ ಬರುವ ಸಾರ್ವಜನಿಕರಿಗೆ ಈ ಕಚೇರಿ ಬಸ್ ನಿಲ್ದಾಣದಿಂದ ಹತ್ತಿರವಿದೆ. ಅದಕ್ಕಾಗಿ ಪುರಸಭೆಯ ಹಳೆ ಕಚೇರಿಗೆ ಸ್ಥಳಾಂತರಿಸಿದ್ದಾರೆ.

ಆಧಾರ್ ಕಾರ್ಡ್ ಕೆಲಸಕ್ಕೆ ದಿನವಿಡೀ ವ್ಯಯ

ಆಧಾರ್‌ ಮಾಹಿತಿ ಪ್ರತಿಯೊಂದು ಯೋಜನೆಗಳಿಗೆ ತೀರಾ ಅಗತ್ಯ ದಾಖಲೆಯಾಗಿದೆ. ಈಗ ಪಡಿತರ ಚೀಟಿ ಇಕೆವೈಎಸಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯದ್ದೇ ದೂರವಾಣಿ ಸಂಖ್ಯೆ ಆಧಾರ್‌ ಕಾರ್ಡ್‌ಗೆ ಹೊಂದಾಣಿಕೆಯಾಗಿರಬೇಕು, ಶಾಲಾ ಮಕ್ಕಳಿಗೆ ಆಧಾರ್‌ ಕಾರ್ಡ್‌ ಹೀಗೆ ಹಲವಾರು ಕೆಲಸಕ್ಕೆ ಅಗತ್ಯವಿರುವ ಆಧಾರ್‌ ಕಾರ್ಡ್‌ಗೆ ಜನ ನಿತ್ಯ ಮುಗಿಬಿದ್ದಿದ್ದಾರೆ.

ತಾಲೂಕಿನ ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ ಕಚೇರಿ, ಕೆಲ ಬ್ಯಾಂಕ್‌ಗಳಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅವರ ಕೆಲಸದ ಒತ್ತಡದಿಂದ ಬಂದ ಜನರನ್ನು ವಾಪಸ್‌ ಕಳಿಸುತ್ತಿದ್ದಾರೆ. ಇಡೀ ತಾಲೂಕು ಕೇಂದ್ರಕ್ಕೆ ಒಂದೇ ಆಧಾರ್‌ ಕಾರ್ಡ್‌ ತಿದ್ದುಪಡಿ ಕೇಂದ್ರವಿದೆ. ಅಲ್ಲಿ ಕೆಲಸ ಮಾಡುವ ವ್ಯಕ್ತಿ ದಿನಕ್ಕೆ 30 ರಿಂದ 40 ಜನರ ಆಧಾರ್‌ ತಿದ್ದುಪಡಿ ಮಾಡುತ್ತಾನೆ. ಉಳಿದವರು ಮತ್ತೆ ಊರಿಗೆ ವಾಪಸ್‌ ಹೋಗುವ ಸ್ಥಿತಿ ಇದೆ. ಅದಕ್ಕೆ ಊರಿಗೆ ಹೋದರೇ ಬೆಳಗಿನ ಜಾವದಲ್ಲೇ ಬಸ್ಸಿನ ಸೌಕರ್ಯ ಇಲ್ಲ, ಜತೆಗೆ ಬೈಕ್‌ ವ್ಯವಸ್ಥೆ ಇಲ್ಲದವರು, ಕಚೇರಿ ಮುಂದಿನ ಕಟ್ಟೆಯ ಮೇಲೆ ಮಕ್ಕಳು ಮಹಿಳೆಯರು ನೆಲದ ಮೇಲೆಯೇ ಮಲಗಿದ್ದರು.

ಆಧಾರ್‌ ಕಾರ್ಡ್‌ ತಿದ್ದುಪಡಿ ಸಾಕಷ್ಟು ಬೇಡಿಕೆ ಇದೆ. ಜನರ ಒತ್ತಾಯವೂ ಸಾಕಷ್ಟಿದೆ. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು ಎಂದು ಹೂವಿನಹಡಗಲಿ ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ ತಿಳಿಸಿದ್ದಾರೆ.

ಆಧಾರ್‌ ಕಾರ್ಡ್‌ ತಿದ್ದುಪಡಿ

ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಲು ಬೆಳಗಿನಿಂದ ಕೆಲಸ ಬಿಟ್ಟು ಸರದಿ ಸಾಲಿನಲ್ಲಿ ನಿಂತರೂ ಕೆಲಸ ಆಗುತ್ತಿಲ್ಲ, ಒಬ್ಬ ವ್ಯಕ್ತಿ ಮಾತ್ರ ಇದ್ದಾರೆ ಆದರೆ ಜನ ನಿತ್ಯ ನೂರಾರು ಪದೇ ಪದೇ ಹಡಗಲಿಗೆ ಬರಲು ಆಗುತ್ತಿಲ್ಲ, ಅದಕ್ಕೆ ಮಕ್ಕಳನ್ನು ಕರಕೊಂಡು ಕಟ್ಟೆ ಮೇಲೆಯೇ ಮಲಗಿದ್ದೇವೆ. ಇನ್ನು ಕೆಲವರು ಜಾಗ ಇಲ್ಲದೇ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ಆದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಸಮಸ್ಯೆ ಬಗ್ಗೆ ಗಮನ ಹರಿಸಿ ಇನ್ನೊಂದು ಕೇಂದ್ರ ತೆರೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಅಂಕ್ಲಿ ತಾಂಡಾ ನಿವಾಸಿ ಶಾಂತಿಬಾಯಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

2028ಕ್ಕೆ ನನ್ನ ಇನ್ನೊಂದು ಮುಖ ತೋರಿಸ್ತೇನೆ, ರಾಜ್ಯದಲ್ಲಿ ಬಿಜೆಪಿ ದಳ ಅಧಿಕಾರಕ್ಕೆ ಬರುತ್ತಾ? ಹೆಚ್‌ಡಿಕೆ ಹೇಳಿದ್ದೇನು?
17 ಅಲ್ಲ 22 ಸಾವಿರ ಕೋಟಿ: ಚೌಕಾಸಿಗೆ ಸರ್ಕಾರದಿಂದ ಸಮಿತಿ ರಚನೆ; Hebbal To Silk Board Tunnel