17 ಅಲ್ಲ 22 ಸಾವಿರ ಕೋಟಿ: ಚೌಕಾಸಿಗೆ ಸರ್ಕಾರದಿಂದ ಸಮಿತಿ ರಚನೆ; Hebbal To Silk Board Tunnel

Published : Oct 20, 2026, 07:48 AM IST
Hebbal To Silkboard Tunnel

ಸಾರಾಂಶ

ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ನಿರ್ಮಾಣದ ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಸರ್ಕಾರದ ಅಂದಾಜಿಗಿಂತ ಅದಾನಿ ಕಂಪನಿಯು ಸುಮಾರು 4 ಸಾವಿರ ಕೋಟಿ ರೂ. ಹೆಚ್ಚಿನ ಬಿಡ್ ಸಲ್ಲಿಸಿದೆ. ಹೀಗಾಗಿ ವೆಚ್ಚ ಕಡಿತಕ್ಕೆ ಚೌಕಾಸಿ ಮಾಡಲು ಸರ್ಕಾರ ಕಮಿಟಿ ರಚಿಸಲು ಮುಂದಾಗಿದೆ.

ಬೆಂಗಳೂರು: ರಾಜಧಾನಿಯಲ್ಲಿ ಬಹುನಿರೀಕ್ಷಿತ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಬೆಳಕಿಗೆ ಬಂದಿದೆ. ಸುರಂಗ ನಿರ್ಮಾಣ ಬಜೆಟ್‌ ಸಂಬಂಧ ರಾಜ್ಯ ಸರ್ಕಾರದ ಲೆಕ್ಕ ತಪ್ಪಿದಂತಾಗಿದೆ. ಅದಾನಿ ಕಂಪನಿ ಸಲ್ಲಿಸಿರುವ ಬಿಡ್ ಸುಮಾರು 4 ಸಾವಿರ ಕೋಟಿಯಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್

ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಟೆಂಡರ್ ಕರೆದಿತ್ತು.ಈ ಯೋಜನೆಗೆ ಆರಂಭದಲ್ಲಿ ಸರ್ಕಾರವು 17,780 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಆದರೆ, ಟೆಂಡರ್‌ನಲ್ಲಿ ಆಯ್ಕೆಯಾಗಿರುವ ಅದಾನಿ ಗ್ರೂಪ್ ಕಂಪನಿಯು ಸುರಂಗ ರಸ್ತೆ ನಿರ್ಮಾಣಕ್ಕಾಗಿ 22 ಸಾವಿರ ಕೋಟಿ ರೂಪಾಯಿಯ ಬಿಡ್ ಸಲ್ಲಿಕೆ ಮಾಡಿದೆ.

ಅಂದಾಜು ವೆಚ್ಚಕ್ಕಿಂತ ಗಣನೀಯವಾಗಿ ಹೆಚ್ಚಳ

ಅದಾನಿ ಕಂಪನಿ ಸಲ್ಲಿಸಿರುವ ಬಿಡ್ ಮೊತ್ತವು ಸರ್ಕಾರದ ನಿಗದಿತ ಅಂದಾಜು ವೆಚ್ಚಕ್ಕಿಂತ ಗಣನೀಯವಾಗಿ ಹೆಚ್ಚಾಗಿರುವುದರಿಂದ ಸರ್ಕಾರದ ಲೆಕ್ಕಾಚಾರ ಉಲ್ಟಾ ಆಗಿದೆ. ಆದ್ದರಿಂದ, ನಿರ್ಮಾಣ ವೆಚ್ಚದ ಕುರಿತು ಅದಾನಿ ಕಂಪನಿಯ ಜೊತೆಗೆ ಚೌಕಾಸಿ ನಡೆಸಲು ಸರ್ಕಾರವು ಶೀಘ್ರದಲ್ಲೇ ಉನ್ನತ ಅಧಿಕಾರಿಗಳ ಕಮಿಟಿಯೊಂದನ್ನು ರಚಿಸಲಿದೆ. ಈ ಕಮಿಟಿಯು ಅದಾನಿ ಕಂಪನಿಯೊಂದಿಗೆ ಮಾತುಕತೆ ನಡೆಸಿ ಸುರಂಗ ರಸ್ತೆಯ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಲಿದೆ.

ಸುಮಾರು ₹22,267 ಕೋಟಿ ರೂಪಾಯಿಗಳ ಬಿಡ್

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP Model) ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಈ ಯೋಜನೆಗೆ ಅದಾನಿ ಗ್ರೂಪ್ ಸುಮಾರು ₹22,267 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ. ತಾಂತ್ರಿಕವಾಗಿ ಅದಾನಿ ಸಂಸ್ಥೆ ಅತ್ಯಂತ ಕಡಿಮೆ ಮೊತ್ತ ನಮೂದಿಸಿದ (L1) ಗುತ್ತಿಗೆದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.

PREV
Read more Articles on
click me!

Recommended Stories

1118 km ಮಾರ್ಗ, 6 ದಿನ, 16 ಕೋಚ್, 16 ಗಂಟೆ ಪ್ರಯಾಣಕ್ಕೆ ಮುಹೂರ್ತ ಫಿಕ್ಸ್: Bengaluru To Mumbai
ಎಐಬಿಇ ಎಕ್ಸಾಂ ಪಾಸಾಗದೆ ವಕೀಲಿಕೆ ನಡೆಸ್ತಿರೋರಿಗೆ ಬಿಗ್ ಶಾಕ್! ಹೈಕೋರ್ಟ್ ಮಹತ್ವದ ಆದೇಶವೇನು?