ಸಿದ್ದಲಿಂಗೇಶ್ವರರ ಗದ್ದುಗೆಯಲ್ಲಿ ಬೆಳೆಯತ್ತಿರುವ ಹುತ್ತ

By Kannadaprabha News  |  First Published Nov 29, 2023, 9:13 AM IST

ಯಡಿಯೂರು ಸಿದ್ದಲಿಂಗೇಶ್ವರರ 12 ವರ್ಷ ತಪಗೈದ ತಪೋ ಕ್ಷೇತ್ರ ಕಗ್ಗೆರೆಯಲ್ಲಿ 15 ಶತಮಾನದ  ಹುತ್ತ ಪುನಃ ಬೆಳೆಯಲು ಆರಂಭಿಸಿದ್ದು, ಸಾರ್ವಜನಿಕರು ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.


 ಕುಣಿಗಲ್ : ಯಡಿಯೂರು ಸಿದ್ದಲಿಂಗೇಶ್ವರರ 12 ವರ್ಷ ತಪಗೈದ ತಪೋ ಕ್ಷೇತ್ರ ಕಗ್ಗೆರೆಯಲ್ಲಿ 15 ಶತಮಾನದ  ಹುತ್ತ ಪುನಃ ಬೆಳೆಯಲು ಆರಂಭಿಸಿದ್ದು, ಸಾರ್ವಜನಿಕರು ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ರಾಜ್ಯ ಸರ್ಕಾರದಿಂದ ಸುಮಾರು ನಾಲ್ಕು ಕೋಟಿ ಅಂದಾಜು ವೆಚ್ಚದಲ್ಲಿ ಕಗ್ಗೆರೆ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Tap to resize

Latest Videos

undefined

ಈ ಸಂದರ್ಭದಲ್ಲಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹಳೆಯ ದೇವಾಲ ತೆರುವುಗೊಳಿಸಿದ ವೇಳೆ ದೇವಾಲಯದ ಗದ್ದುಗೆಯನ್ನು ಕೂಡ ತೆರವುಗೊಳಿಸಲಾಯಿತು.

ಆ ಗದ್ದುಗೆಯ ಸ್ಥಳದಲ್ಲಿ ಕೆಲವು ದಿನಗಳಿಂದ ಹುತ್ತದ ರೀತಿಯ ಕೊಳವೆ ಆಕಾರದ ಕೋವೆಗಳು ಇದೆ ಎಂಬುದನ್ನು ಹಲವಾರು ಭಕ್ತರು ಗುರುತಿಸಿ ಅಧಿಕಾರಿಗಳಿಗೆ ತೋರಿಸಿದ್ದಾರೆ. ದೀಪೋತ್ಸವ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೇರಳವಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಭಕ್ತರು ಆ ಬೆಳೆಯುವ ಗಳನ್ನು ಮುಟ್ಟುವ ಪ್ರಯತ್ನ ಮಾಡಿದ್ದರು.

ಕೆಲವು ಭಕ್ತರ ಒತ್ತಾಯದ ಮೇರೆಗೆ ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳು ಒಡೆದು ಹಾಕಲಾಗಿದ್ದ ಗದ್ದಿಗೆಯ ಸುತ್ತಲೂ ಬ್ಯಾರಿಕೆಟ್ ಹಾಕಿ ತಾತ್ಕಾಲಿಕ ರಕ್ಷಣೆ ಮಾಡಿದ್ದಾರೆ.

ಹುತ್ತದ ಇತಿಹಾಸ ಅವಲೋಕಿಸಿದಾಗ 15ನೇ ಶತಮಾನದಲ್ಲಿ ಶ್ರೀ ಸಿದ್ದಲಿಂಗೇಶ್ವರರು ತಪೋ ಕ್ಷೇತ್ರ ಕಗ್ಗರೆಯಲ್ಲಿ 12 ವರ್ಷ ತಪಸ್ಸು ಮಾಡಿದ್ದರು.

ಗ್ರಾಮದ ನಂಬಿಯಣ್ಣ, ನೀಲಮ್ಮ ದಂಪತಿಗೆ ಭಿನ್ನಹಕ್ಕೆ ಪ್ರಸಾದಕ್ಕೆ ಬರುವುದಾಗಿ ಮಾತು ಕೊಟ್ಟ ಹಿನ್ನೆಲೆಯಲ್ಲಿ ಸಿದ್ದಲಿಂಗೇಶ್ವರರು ಈ ಸ್ಥಳದಲ್ಲಿ 12 ವರುಷ ತಪಸ್ಸು ಮಾಡಿದ್ದರು ಎಂಬ ಇತಿಹಾಸವಿದೆ.

ಅಂದಿನ ಬೇಡರ ದಾಳಿಯಿಂದ ಕಗ್ಗೆರೆ ಗ್ರಾಮದ ಜನರು ಊರು ಬಿಡಬೇಕಾದ ಅನಿವಾರ್ಯತೆಯಿಂದ ಸಿದ್ದಲಿಂಗೇಶ್ವರರನ್ನು ಪುನಃ ಬಂದು ಕರೆಯಲು ಆಗಲಿಲ್ಲ. ಭಕ್ತನ ಬರುವಿಕೆಗಾಗಿ 12 ವರ್ಷ ಆ ಭೂಮಿಯಲ್ಲಿ ಶಿವಧ್ಯಾನದಲ್ಲಿ ಸಿದ್ದಲಿಂಗೇಶ್ವರರು ಕುಳಿತು ತಪಸ್ಸು ಮಾಡಿದ್ದಾರೆ ಎಂಬ ಹಲವಾರು ಇತಿಹಾಸಗಳಿವೆ.

ಕಳೆದ ತಿಂಗಳು ದೇವಾಲಯವನ್ನು ಕೆಡವಿದ ಸಂದರ್ಭದಲ್ಲಿ ಅದೇ ಜಾಗದಲ್ಲಿ ಹುತ್ತದ ಮಾದರಿ ಗೋಚರಿಸುತ್ತಿವೆ. ಕೆಲವು ಭಾಗದಲ್ಲಿ ಹುತ್ತ ಹೊಸದಾಗಿ ಬೆಳೆಯಲು ಪ್ರಾರಂಭ ಮಾಡಿದೆ ಎಂಬುದು ಭಕ್ತರ ಅನಿಸಿಕೆ.

ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದ್ದು ರಾಜ್ಯದ ವಿವಿಧ ಭಾಗಗಳಿಂದ ನೋಡಲು ಭಕ್ತರು ಬರುತ್ತಿದ್ದಾರೆ.

ಈ ವಿಚಾರವಾಗಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದು 555 ವರ್ಷಗಳಿಂದ ಈ ಸ್ಥಳದಲ್ಲಿ ದೇವಾಲಯ ಇತ್ತು ದೇವಾಲಯ ಕೆಡವಿದ ನಂತರ ಸ್ಥಳದಲ್ಲಿ ಹುತ್ತ ಬೆಳೆಯಲು ಹೇಗೆ ಸಾಧ್ಯ ಈ ಬಗ್ಗೆ ಸಂಶೋಧನೆ ಆಗಬೇಕೆಂದು ಕೆಲವರು ಒತ್ತಾಯಿಸಿದ್ದಾರೆ.

ಗದ್ದುಗೆಯನ್ನು ಪರಿಶೀಲಿಸಿದ ಬಾಳೆಹೊನ್ನೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಎಡೆಯೂರು ಸಿದ್ದಲಿಂಗೇಶ್ವರರು ತಪಸ್ಸು ಮಾಡಿದ್ದರೂ ಎಂಬ ಕಥನಕ್ಕೆ ಸತ್ಯ ದಾಖಲಾತಿಗಳನ್ನು ಸಿದ್ದಲಿಂಗೇಶ್ವರರೇ ಒದಗಿಸಿದಂತಾಗಿದೆ. ಈ ಸ್ಥಳದಲ್ಲಿ ಎಲ್ಲರಿಗೂ ಕೂಡ ಮುಕ್ತ ಅವಕಾಶವಿದೆ ಜಾತಿ ಧರ್ಮ ಎಂಬುದೇ ಎಲ್ಲರೂ ಕೂಡ ದರ್ಶನ ಮಾಡುತ್ತಿದ್ದಾರೆ. ಪುನಃ ಸಿದ್ದಲಿಂಗೇಶ್ವರರು ಈ ನಾಡಿನಲ್ಲಿ ಜಾಗೃತ ರಾಗುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!