ಪ್ರಭಾವಿಗಳ ಕೈವಾಡ, ರಾತ್ರಿ ಗುಡಿಸಲುಗಳಿಗೆ ಬೆಂಕಿ ಇಟ್ಟ ದುರುಳರು, ಚಿತ್ರದುರ್ಗದ ನಗರಸಭೆ ಅಧಿಕಾರಿಗಳ ಕೈವಾಡವೇ?

By Suvarna NewsFirst Published Feb 14, 2024, 7:02 PM IST
Highlights

ಅದೊಂದು ಸರ್ಕಾರಿ ಗೋಮಾಳ, ನಗರಸಭೆ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ತಿಳಿದು ಜಾಗಕ್ಕಾಗಿ ಹೋರಾಟಕ್ಕೆ ಇಳಿದಿದ್ರು. ಪ್ರಭಾವಿಗಳ ಕೈವಾಡದಿಂದ ರಾತ್ರೋ ರಾತ್ರಿ ಗುಡಿಸಲುಗಳಿಗೆ ಬೆಂಕಿ ಹಾಕಿ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.14): ಅದೊಂದು ಸರ್ಕಾರಿ ಗೋಮಾಳ, ನಗರಸಭೆ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ತಿಳಿದು ಜಾಗಕ್ಕಾಗಿ ಹೋರಾಟಕ್ಕೆ ಇಳಿದಿದ್ರು. ಪ್ರಭಾವಿಗಳ ಕೈವಾಡದಿಂದ ರಾತ್ರೋ ರಾತ್ರಿ ಗುಡಿಸಲುಗಳಿಗೆ ಬೆಂಕಿ ಹಾಕಿ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಗ್ರಾಮಸ್ಥರಿಂದ ಗಂಭೀರ ಆರೋಪ ಕೇಳಿ ಬಂದಿದೆ. 

ಹೀಗೆ ಸರ್ಕಾರಿ ಗೋಮಾಳ ಉಳುವಿಗಾಗಿ ಹಾಕಿಕೊಂಡಿದ್ದ ಗುಡಿಸಲುಗಳು ಬೆಂಕಿ ಕೆನ್ಮಾಲೆಗೆ ಧಗ ಧಗ‌ ಉರಿಯುತ್ತಿರುವುದು ಒಂದೆಡೆಯಾದ್ರೆ, ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ನಾಶವಾದವಲ್ಲ ಎಂದು ಆಕ್ರೋಶ ಹೊರ ಹಾಕ್ತಿರೋ ಗ್ರಾಮಸ್ಥರು. ಈ ದೃಶ್ಯಗಳು ಕಂಡು ಬಂದಿದ್ದು ಪಿಳ್ಳೆಕೆರೇನಹಳ್ಳಿ ಗ್ರಾಮದ ಬಳಿ.

ಜಿಎಸ್‌ಟಿ 36 ಲಕ್ಷ, 27 ಲಕ್ಷ ವಿದ್ಯುತ್ ಸೇರಿ ಬರೋಬ್ಬರಿ 63  ಲಕ್ಷ ತೆರಿಗೆ ಕಟ್ಟದ ಕೊಡಗಿನ ಗ್ರಾಮ ಪಂಚಾಯಿತಿ!

ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಬರುವ 38/1, 38/2 ಸರ್ವೇ ನಂಬರ್ ನಲ್ಲಿ ಸುಮಾರು ಎರಡು ಎಕರೆ ಜಮೀನು ಇದೆ. ಸುಮಾರು ಮೂವತ್ತು ವರ್ಷಗಳಿಂದಲೂ ಗ್ರಾಮಸ್ಥರು ಪಕ್ಕದಲ್ಲಿಯೇ ವಾಸ ಮಾಡ್ತಿದ್ದು, ಅಲ್ಲದೇ ಜಮೀನಿನ ಪಕ್ಕ ಇರುವ ರುದ್ರಭೂಮಿಯನ್ನೇ ಬಳಸಿಕೊಂಡು ಜೀವನ ನಡೆಸ್ತಿದ್ದಾರೆ.

ಆದ್ರೆ ಕಳೆದ ಐದಾರು ತಿಂಗಳಿಂದ ಯಾರೋ ಮೂರನೇ ವ್ಯಕ್ತಿ ಬಂದು ಇದು ನಮಗೆ ಸೇರಿದ್ದು ಎಂದು ರಿಯಲ್ ಎಸ್ಟೇಟ್ ದಂಧೆ ನಡೆಸಲು ಆಗಮಿಸಿದ್ದರು. ಸರ್ಕಾರಿ ಜಾಗ ಖಾಸಗಿ ಸ್ವತ್ತಾಗಳು ಕಾರಣ ಯಾರು? ಚಿತ್ರದುರ್ಗ ನಗರಸಭೆ ಅಧಿಕಾರಗಳೇ  ಶಾಮೀಲಾಗಿ ಜಾಗ ಕಬಳಿಸುವ ಪ್ಲಾನ್ ಮಾಡಿದ್ರಾ ಎನ್ನುವ ಅನುಮಾನ ಬಂದು, ನಾವೆಲ್ಲರೂ ಗುಡಿಸಲು ಹಾಕಿದ್ದೀವಿ. ಆದ್ರೆ ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಭಸ್ಮ ಮಾಡಿರೋದು ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಘಟನೆ ನಡೆದು ಇಷ್ಟೆಲ್ಲಾ ಅನಾಹುತ ಆಗಿದ್ರು ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಇರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟಿ ಜಯಾ ಬಚ್ಚನ್ ಬಳಿ ಇದೆ 40 ಕೋಟಿಗೂ ಹೆಚ್ಚು ಬಂಗಾರ, ಅಮಿತಾಬ್ ಬಳಿ ಹೆಂಡತಿಗಿಂತಲೂ ಹೆಚ್ಚು!

ಕಳೆದ ನಾಲ್ಕೈದು ತಿಂಗಳಿಂದಲೂ ಈ ಜಾಗದ ವಿಚಾರವಾಗಿ ಜಟಾಪಟಿ ನಡೆಯುತ್ತಲೇ‌ ಇದೆ. ನಾವು ಗ್ರಾಮದಲ್ಲಿ ಉಳಿಯಲು ಮನೆಯಲ್ಲಿದೇ ಜೀವನ ಸಾಗಿಸ್ತಿದ್ದೀವಿ. ಯಾರೂ ಕೂಡ ದುರಾಸೆಯಿಂದ ಈ ಜಾಗ ಕ್ಕೆ ಬಂದು ಗುಡಿಸಲು ಹಾಕಿಕೊಂಡಿಲ್ಲ. ಇಲ್ಲಿರುವ ಸಾಕಷ್ಟು ಜನರು ಬಡವರಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ರು ಅಧಿಕಾರಿಗಳು ಯಾರೂ ನಮ್ಮ ನೋವು ಕೇಳಲು ಬಂದಿಲ್ಲ. ನಮಗ್ಯಾರಿಗೂ ಯಾವುದೇ ದುರಾಸೆ ಇಲ್ಲ, ನಮಗೆ ನ್ಯಾಯ ಕೊಡಿಸಿ ಉಳಿಯಲು ಜಾಗ ಕೊಡಿ ಎಂದು ನೊಂದ ಮಹಿಳೆಯರು ಮನವಿ ಮಾಡಿಕೊಂಡರು.

ಒಟ್ಟಾರೆ ವಾಸವಿರಲು ಯೋಗ್ಯವಾದ ಜಾಗವಿಲ್ಲ ಎಂದು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡ್ರೆ ಕಿಡಿಗೇಡಿಗಳು ಬೆಂಕಿ ಇಟ್ಟಿರೋದು ಎಷ್ಟು ಸರಿ. ಅಧಿಕಾರಿಗಳೇ ಇನ್ನಾದ್ರು ನಿದ್ದೆಯಿಂದ ಎದ್ದೇಳಿ, ಅನ್ಯಾಯ ಆಗಿರುವ ಜನರಿಗೆ ನ್ಯಾಯ ಕೊಡಿಸಿ. 

click me!