ಗಂಡನ ಅತಿರೇಖದ ಕಿರುಕುಳ : ತಾಳದ ಹೆಂಡತಿ ವಿಷದ ಮಾತ್ರೆ ಸೇವಿಸಿ ಸಾವು

Kannadaprabha News   | Asianet News
Published : Mar 17, 2021, 10:09 AM ISTUpdated : Mar 17, 2021, 10:23 AM IST
ಗಂಡನ ಅತಿರೇಖದ ಕಿರುಕುಳ : ತಾಳದ ಹೆಂಡತಿ ವಿಷದ ಮಾತ್ರೆ ಸೇವಿಸಿ ಸಾವು

ಸಾರಾಂಶ

ಗಂಡನ ಅತಿಯಾದ ಕಿರುಕುಳ ತಾಳಲಾರದೆ ಪತ್ನಿ ವಿಷದ ಮಾತ್ರೆ ತಿಂದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅರಸೀಕೆರೆ ವ್ಯಕ್ತಿಯೊಂದಿಗೆ 12 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. 

ಕೆ.ಆರ್‌. ನಗರ (ಮಾ.17): ನಿತ್ಯ ಪತಿ ಕೊಡುತ್ತಿದ್ದ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಇಲ್ಲಿನ ವಿನಾಯಕ ಬಡಾವಣೆಯ ಎರಡನೇ ವಾರ್ಡಿನ ನಿವಾಸಿಗಳಾದ ರಮೇಶ್‌ ಮತ್ತು ಸರಸ್ವತಿ ಎಂಬವರ ಪುತ್ರಿ ಬಿಂದುಶ್ರೀ (27) ಆತ್ಮಹತ್ಯೆ ಮಾಡಿಕೊಂಡವರು. 

ಬಿಂದುಶ್ರೀ ಅವರನ್ನು 12 ವರ್ಷಗಳ ಹಿಂದೆ ಅರಸೀಕೆರೆಯ ಚಂದ್ರಶೇಖರ್‌ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮೃತರಿಗೆ 12 ಮತ್ತು 10 ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. 

ಕಾಲ್ ರೆಕಾರ್ಡ್‌ನಿಂದ ಬಯಲಾಯ್ತು ಮಧ್ಯೆ ರಾತ್ರಿ.... ಒಂಟಿ... ಮಹಿಳೆಯ ರಹಸ್ಯ

ಕಳೆದ 7 ವರ್ಷಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬಿಂದುಶ್ರೀ ಪತಿಯಿಂದ ದೂರ ಇದ್ದರು. ಈ ನಡುವೆ ಪತಿ ಮತ್ತು ಪತ್ನಿಯರ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ ಪರಿಣಾಮ ಇಬ್ಬರ ನಡುವೆ ಸಂಧಾನ ನಡೆದಿತ್ತು. ಆ ನಂತರ ಚಂದ್ರಶೇಖರ ಪತ್ನಿಗೆ ನಿತ್ಯ ದೂರವಾಣಿಯಲ್ಲಿ ಮಾತನಾಡಿ, ಆಕೆಯ ನಡತೆ ಶಂಕಿಸಿ ಕಿರುಕುಳ ನೀಡುತ್ತಿದ್ದರಿಂದ ಬಿಂದುಶ್ರೀ ಸೋಮವಾರ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11ಕ್ಕೆ ಬಿಂದುಶ್ರೀ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್‌. ನಗರ ಪೊಲೀಸ್‌ ಠಾಣೆಯಲ್ಲಿ ಬಿಂದುಶ್ರೀ ಪತಿ ಚಂದ್ರಶೇಖರ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ.

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!