ಮುಸ್ಲಿಂ ಯುವತಿ ಜೊತೆ 62 ವರ್ಷದ ಬ್ಯುಸಿನೆಸ್‌ಮ್ಯಾನ್ ಮದ್ವೆ: ಕಿಡ್ನ್ಯಾಪ್ ಎಂದು ಪತ್ನಿಯಿಂದ ದೂರು

Suvarna News   | Asianet News
Published : Mar 24, 2021, 11:16 AM ISTUpdated : Mar 24, 2021, 01:38 PM IST
ಮುಸ್ಲಿಂ ಯುವತಿ ಜೊತೆ 62 ವರ್ಷದ ಬ್ಯುಸಿನೆಸ್‌ಮ್ಯಾನ್ ಮದ್ವೆ: ಕಿಡ್ನ್ಯಾಪ್ ಎಂದು ಪತ್ನಿಯಿಂದ ದೂರು

ಸಾರಾಂಶ

62 ವರ್ಷದ ಮಂಗಳೂರಿನ ಬ್ಯುಸಿನೆಸ್‌ಮನ್  ಮುಸ್ಲಿಂ ಯುವತಿಯೊಂದಿಗೆ ವಿವಾಹ ಮಾಡಿಕೊಂಡಿದ್ದು,  ಇತ್ತ ಪತ್ನಿ ಪತಿಯನ್ನ ಕಿಡ್ನಾಪ್ ಮಾಡಲಾಗಿದೆ ಎಂದು ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. 

ಮಂಗಳೂರು (ಮಾ.24):  ಮಂಗಳೂರಿನ ಬಿಲ್ಡರ್ ಹಾಗೂ ಉದ್ಯಮಿಯನ್ನು ಅಪಹರಿಸಿ ಮುಸ್ಲಿಂ ಯುವತಿ ಜೊತೆ ಮದುವೆ  ಮಾಡಲಾಗಿದೆ ಎಂದು ಆರೋಪಿಸಿ ಆತನ ಪತ್ನಿಗೆ ದೂರು ನೀಡಿದ್ದಾರೆ. 

ಪಾಂಡೇಶ್ವರ ಠಾಣೆಗೆ ಬೋಳಾರದ ಯಶೋಧಾ (54) ಎಂಬಾಕೆ ದೂರು ನೀಡಿದ್ದಾರೆ.  ತನ್ನ ಪತಿ ಗಂಗಾಧರ (62) ಎಂಬವರನ್ನ ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಬಿಲ್ಡರ್ ಮತ್ತು ಅಲೂಗಡ್ಡೆ, ಈರುಳ್ಳಿ ಹೋಲ್ ಸೇಲ್ ವ್ಯಾಪಾರಿಯಾಗಿದ್ದ ಗಂಗಾಧರ ಅವರನ್ನು ಮತಾಂತರ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ವ್ಯವಹಾರದ ಹಿನ್ನೆಲೆ ಜನವರಿಯಲ್ಲಿ ‌ಮನೆಯಿಂದ ಹೊರ ಹೋಗಿದ್ದ ಗಂಗಾಧರ  ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದರು.  ಆದರೆ ವ್ಯವಹಾರ ನಿಮಿತ್ತ ಹೋದ ಕಾರಣ ನಾಪತ್ತೆ ದೂರು ನೀಡಿರಲಿಲ್ಲ. 

ಗರ್ಲ್‌ಫ್ರೆಂಡ್‌ ಜತೆ ಮಾತನಾಡಿದ್ದಕ್ಕೆ ಹೀಗ್‌ ಮಾಡೋದಾ..!

ಸದ್ಯ ಮುಸ್ಲಿಂ ಯುವತಿ ಜೊತೆ ಗಂಗಾಧರ್ ಗೆ ವಿವಾಹವಾಗಿರುವ ಮಾಹಿತಿ ಲಭ್ಯವಾಗಿದ್ದು ವಿವಾಹದ ಫೋಟೋಗಳ ಸಹಿತ ಗಂಗಾಧರ್ ಸ್ನೇಹಿತ ಪತ್ನಿ ಯಶೋಧಾಗೆ ಮಾಹಿತಿ ನೀಡಿದ್ದಾರೆ. 

ದುಷ್ಕರ್ಮಿಗಳು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿ ಮತಾಂತರ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಮತಾಂತರದ ಬಳಿಕ ಮುಸ್ಲಿಂ ಯುವತಿ ಜೊತೆ ಬಲವಂತದ ಮದುವೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಮದುವೆ ಫೋಟೋಗಳ ಸಹಿತ ಪಾಂಡೇಶ್ವರ ಠಾಣೆಗೆ ಯಶೋಧಾ ದೂರು ನೀಡಿದ್ದು, ಪತಿಯನ್ನ ಪತ್ತೆ ಮಾಡಿ‌ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪ್ರಕರಣದ ವಿಶೇಷ ತನಿಖೆಗೆ ವಿಶ್ವಹಿಂದೂ ಪರಿಷತ್ ಬಜರಂಗದಳವೂ ಆಗ್ರಹಿಸಿದ್ದು,  ಸದ್ಯ ಪತ್ನಿ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

PREV
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ