ಉಪಚುನಾವಣೆ ಮುಗಿಸಿದ ಹುಣಸೂರು ಅಭ್ಯರ್ಥಿಗಳು ಈಗ ಟೆಂಪಲ್ ರನ್‌ನಲ್ಲಿ ಬ್ಯುಸಿ. ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.
ಮೈಸೂರು(ಡಿ.07): ಕಳದೊಂದು ತಿಂಗಳಿನಿಂದ ಹುಣಸೂರಿನಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಡೆಸಿದ ಪ್ರಚಾರ ಮತ್ತು ಮತಯಾಚನೆ ಕಾರ್ಯ ಮುಗಿಸಿದ್ದು, ಡಿ. 6ರಂದು ಅಭ್ಯರ್ಥಿಗಳು ಧಾರ್ಮಿಕ ಕ್ಷೇತ್ರ ದೇವಾಲಯಗಳಿಗೆ ಭೇಟಿ ನೀಡಿ ವಿಶ್ರಾಂತಿಯಲ್ಲಿ ತೊಡಗಿದ್ದಾರೆ.
ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನ. 11ರಿಂದ ನೀತಿ ಸಂಹಿತೆ ಜಾರಿಯಾಗಿತ್ತು. ಆದರೆ ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಒಬ್ಬೊಬ್ಬ ಅಭ್ಯರ್ಥಿ ಒಂದೊಂದು ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಕ್ಷೇತ್ರದಲ್ಲಿ ಮತದಾರನ ಓಲೈಕೆ ನಡೆದು, ಡಿ. 5ರಂದು ಮತದಾನ ಮುಗಿದಿದೆ. ಡಿ. 9ರಂದು ಮತ ಎಣಿಕೆ ಕಾರ್ಯವಿದ್ದು, ಬೂತ್‌ಗಳಲ್ಲಿ ನಡೆದ ಮತದಾನದ ಬಗ್ಗೆ ಅವರವರ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದು ಸೋಲು-ಗೆಲುವು ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಖಾನಾಪುರ: ಪಾರವಾಡ ಕ್ರಾಸ್ ಬಳಿ ಹುಲಿ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ
ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಮತದಾನ ಮುಗಿದ ಬಳಿಕ ರಾತ್ರಿ ಹುಣಸೂರಿನ ನಿವಾಸದಲ್ಲಿ ಕ್ಷೇತ್ರದ ಕಾರ್ಯಕರ್ತರೊಟ್ಟಿಗೆ ಚರ್ಚೆ ನಡೆಸಿ ವಿಶ್ರಾಂತಿ ಮಾಡಿದ್ದಾರೆ. ಡಿ. 6ರ ಬೆಳಗ್ಗಿನಿಂದ ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಸಿಬಿಟಿ ಕಾಲೋನಿಯ ಅರ್ಕೇಶ್ವರ ಸ್ವಾಮಿ ದೇವಾಲಯ, ಮೈಲಾಂಬೂರು ಇನ್ನಿತರ ಗ್ರಾಮಗಳ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಪಕ್ಷದ ಮುಖಂಡ ಸತ್ಯಪ್ಪರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮುಖಂಡರೊಂದಿಗೆ ಮತದಾನದ ಕುರಿತಾಗಿ ಮಾಹಿತಿ ಪಡೆದರು. ಶುಕ್ರವಾರ ರಾತ್ರಿ ಕೆ.ಆರ್. ನಗರಕ್ಕೆ ತೆರಳಿ ವಾಸ್ತವ್ಯ ಹೂಡಿ, ಡಿ.7ರಂದು ಶಿರಡಿ ಸಾಯಿಬಾಬಾ ದೇವಾಲಯಕ್ಕೆ ತೆರಳಲಿದ್ದು, ಭಾನುವಾರ ಸಂಜೆ ವೇಳೆ ಹುಣಸೂರಿಗೆ ಆಗಮಿಸಲಿದ್ದಾರೆ. ಡಿ. 9ರ ಬೆಳಗ್ಗೆ ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ಹೊಸಕೋಟೆಯಲ್ಲಿ ಅತಿ ಹೆಚ್ಚು ಮತದಾನ : KR ಪುರಕ್ಕೆ ಕೊನೆಯ ಸ್ಥಾನ
ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಅವರು ಮತದಾನ ಮುಗಿದ ಬಳಿಕ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮುಗಿಸಿದ ಬಳಿಕ ಕುಟುಂಬದೊಂದಿಗೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಮಂಗಳೂರಿನ ಉಲ್ಲಾಳ ದರ್ಗಾಕ್ಕೆ ಭೇಟಿ ನೀಡಿ, ಡಿ. 7ರ ಮುಂಬೈನ ಪೂನಾದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಮ್ಮುಖದಲ್ಲಿ ನಡೆಯುವ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ತಮ್ಮ ಪುತ್ರಿ ಮಾನಸ ಲಕ್ಷ್ಮೇಯವರೊಂದಿಗೆ ಪಾಲ್ಗೊಳ್ಳಲಿದ್ದಾರೆ. ಡಿ. 8ರ ಸಂಜೆ ಬೆಂಗಳೂರು ತಲುಪಲಿದ್ದು, ಸೋಮವಾರ ಹುಣಸೂರಿಗೆ ಆಗಮಿಸಲಿದ್ದಾರೆ.
ಫಲಿತಾಂಶ ನೋಡಿ ಜೆಡಿಎಸ್ ಜತೆ ಮೈತ್ರಿ ನಿರ್ಧಾರ
ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಮೈಸೂರಿನ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದು, ವಿಶ್ರಾಂತಿ ಪಡೆದುಕೊಂಡರು. ದೂರವಾಣಿ ಮೂಲಕ ತಮ್ಮ ಕಾರ್ಯಕರ್ತರೊಂದಿಗೆ ಮತದಾನದ ಬಗ್ಗೆ ಚರ್ಚೆ ನಡೆಸಿದ್ದಾರೆ.